ETV Bharat / state

ಸಿನಿಮಾ ನೋಡಲು ಸಿದ್ದರಾಮಯ್ಯನವರಿಗೆ ಸಮಯ ಇದೆ, ಹರ್ಷನ ಮನೆಗೆ ಬರಲು ಸಮಯ ಇಲ್ಲ : ಪ್ರತಾಪ್ ಸಿಂಹ

ಹರ್ಷ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಮತಾಂತರ ಕುತಂತ್ರಕ್ಕೆ ಆತ ಬಲಿಯಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬ ಒಂಟಿ ಅಲ್ಲ, ಆ ಕುಟುಂಬದ ಜೊತೆ ನಾವಿದ್ದೇವೆ. ಹರ್ಷನನ್ನು ಕಳೆದುಕೊಂಡ ನೋವು, ಸಂಕಟ ನಮಗಿದೆ..

ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
author img

By

Published : Feb 26, 2022, 6:38 PM IST

ಶಿವಮೊಗ್ಗ : ಸಿದ್ದರಾಮಯ್ಯನವರಿಗೆ ಸಿನಿಮಾ ನೋಡಲು ಸಮಯ ಇದೆ. ಹಿಂದೂ ಧರ್ಮಕ್ಕಾಗಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತನ ಮನೆಗೆ ಭೇಟಿ ನೀಡಲು ಸಮಯ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿರುವುದು..

ಹತ್ಯೆಯಾದ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಕನಿಷ್ಠ ಸಾಂತ್ವನ ಹೇಳಲು ಬರದಿರುವುದನ್ನ ನೋಡಿದಾಗ ಅವರ ಮನಸ್ಥಿತಿ ಏನೆಂಬುದು ಅರ್ಥವಾಗುತ್ತದೆ.

ಮೀನು ಮಾರಾಟ ಮಾಡುವವನು ಸತ್ತಾಗ ಕಾಂಗ್ರೆಸ್​​ನವರ ಆರ್ಥಿಕ ನೆರವು ನೀಡುತ್ತಾರೆ. ಈಗ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಜಮೀರ್ ಅಹ್ಮದ್ ಅವರನ್ನ ಮುಂದಿಟ್ಟುಕೊಂಡು ಸಿದ್ದರಾಮಯ್ಯ, ನಲಪಾಡ್ ಮುಂದಿಟ್ಟುಕೊಂಡು ಡಿಕೆಶಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಹರ್ಷ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ, ಮತಾಂತರ ಕುತಂತ್ರಕ್ಕೆ ಆತ ಬಲಿಯಾಗಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬ ಒಂಟಿ ಅಲ್ಲ, ಆ ಕುಟುಂಬದ ಜೊತೆ ನಾವಿದ್ದೇವೆ. ಹರ್ಷನನ್ನು ಕಳೆದುಕೊಂಡ ನೋವು, ಸಂಕಟ ನಮಗಿದೆ ಎಂದರು.

ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದು ಮಾಮೂಲಿ ಸೆಕ್ಷನ್ ಹಾಕಬಾರದು. ಇದು ಮಾಮೂಲಿ ಕೊಲೆಯಲ್ಲ ಹಾಗೂ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಬರುವ ಪ್ರಕರಣವು ಅಲ್ಲ. ಹಾಗಾಗಿ, ಈ ಪ್ರಕರಣವನ್ನು ಜಾಮೀನು ಸಿಗದಂತಹ ಪ್ರಕರಣವಾಗಿ ಪರಿಗಣಿಸಬೇಕು. ಹತ್ಯೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ದಲಿತ ಯುವಕನ ಹತ್ಯೆ ಅನ್ಯಧರ್ಮೀಯರು ಮಾಡಿದ್ದರೆ ಬಿಜೆಪಿಯವರು ಸುಮ್ಮನಿರುತ್ತಿದ್ದರಾ?: ಗುಂಡೂರಾವ್

ಹರ್ಷನ ಹತ್ಯೆ ಇದೊಂದು ಆರ್ಗನೈಜಡ್ ಕ್ರೈಂ. ಹಾಗಾಗಿ, ಯುಎಪಿಎ ಹಾಗೂ ಕೋಕಾ ಅಡಿ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಬಂಧಿಸಬೇಕು ಎಂದರು. ಕೊಲೆಗಾರರಿಗೆ ಯಾವುದೇ ಧರ್ಮ ಇಲ್ಲ ಎಂದಾದರೆ ಧರ್ಮ ನೋಡಿ ಏಕೆ ಕೊಲೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಧರ್ಮಾಧಾರಿತ ಕೂಲೆಗಳು ಅಂತ್ಯವಾಗಬೇಕು. ಈ ಹಿಂದೆ ಮುಖ್ಯಮಂತ್ರಿಗಳು, ಗೃಹ ಸಚಿವರು ಬೆಂಗಳೂರು, ಮಂಗಳೂರು ಘಟನೆ ಬಗ್ಗೆ ಹತ್ತಿರದಿಂದ ನೋಡಿ ತಿಳಿದುಕೊಂಡಿದ್ದಾರೆ. ಹೀಗಾಗಿ, ಇಂತಹ ಪ್ರಕರಣದ ವಿರುದ್ಧ ಸಿಎಂ ಕಠಿಣ ಕ್ರಮಕೈಗೊಳ್ಳುತ್ತಾರೆ ಎಂದರು. ಹರ್ಷನ ಕೊಲೆ ನಡೆದು ಒಂದು ವಾರ ಆದರೂ ಯಾವ ಕಾಂಗ್ರೆಸ್ಸಿಗರು ಇನ್ನೂ ಭೇಟಿ ಕೊಟ್ಟಿಲ್ಲ, ಇದರಲ್ಲೇ ಅವರ ಮನಸ್ಥಿತಿ ಅರ್ಥ ಆಗುತ್ತೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.