ETV Bharat / state

ತುಂಗಾ ಆರತಿಯಲ್ಲಿ ಮೋಹನ್‌ ಭಾಗವತ್‌ ಭಾಗಿ... ಹರಕೆ ತೀರಿಸಿದ ಗ್ರಾಮಸ್ಥರು - ರಾಷ್ಟ್ರೀಯ‌ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್

ಶಿವಮೊಗ್ಗ ಜಿಲ್ಲೆಯ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಸ್ಥರು ಏರ್ಪಡಿಸಿದ್ದ ತೆಪ್ಪೋತ್ಸವ ಹಾಗೂ ತುಂಗಾರಾತಿ ಉತ್ಸವದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗ್ರಾಮಸ್ಥರ ಆಹ್ವಾನದ ಮೇರೆಗೆ ಆಗಮಿಸಿದ್ದರು. ತುಂಗಾ ನದಿಯಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ತೆಪ್ಪೋತ್ಸವ ನಡೆಯಿತು.

mohan-bhagwat-on-the-occasion-of-srirama-teppotsava-on-the-tunga-river-in-shimoga
ತುಂಗಾ ಆರತಿಯಲ್ಲಿ ಮೋಹನ್‌ ಭಾಗವತ್‌ರು ಭಾಗಿ.. ಹರಕೆ ತೀರಿಸಿದ ಎರಡು ಗ್ರಾಮಸ್ಥರು!
author img

By

Published : Dec 21, 2019, 12:00 AM IST

Updated : Dec 21, 2019, 1:42 AM IST

ಶಿವಮೊಗ್ಗ: ಜಿಲ್ಲೆಯ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಸ್ಥರು ಏರ್ಪಡಿಸಿದ್ದ ತೆಪ್ಪೋತ್ಸವ ಹಾಗೂ ತುಂಗಾರಾತಿ ಗ್ರಾಮದಲ್ಲಿ ಮೋಹನ್ ಭಾಗವತ್ ಅವರು ಗ್ರಾಮಸ್ಥರ ಆಹ್ವಾನದ ಮೇರೆಗೆ ಆಗಮಿಸಿದ್ದರು. ತುಂಗಾ ನದಿಯಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ತೆಪ್ಪೋತ್ಸವ ನಡೆಯಿತು.

ನದಿಯಲ್ಲಿ ದೇವರುಗಳನ್ನು ಅತ್ತಿತ್ತ ಸುತ್ತಾಡಿಸುವ ಮೂಲಕ ತೆಪ್ಪೋತ್ಸವ ಮಾಡಿದರು. ನಂತರ ಮೋಹನ ಭಾಗವತರಿಗೆ ಸಂಸ್ಕೃತ ಗ್ರಾಮಗಳಾದ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮದ ಬ್ರಾಹ್ಮಣರುಗಳು ಆಶೀರ್ವಾದ ಮಾಡಿದರು. ಗ್ರಾಮಸ್ಥರ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯ್ತು.

ತುಂಗಾ ಆರತಿಯಲ್ಲಿ ಮೋಹನ್‌ ಭಾಗವತ್‌ ಭಾಗಿ

ಅತ್ತ ಮೋಹನ್ ಭಾಗವತರು ಆರತಿ ಮಾಡುತ್ತಿದ್ದಂತೆಯೇ ದಡದಲ್ಲಿದ್ದ ಸಂಸದ ಬಿ ವೈ ರಾಘವೇಂದ್ರ ತಮ್ಮ ಪತ್ನಿ ತೇಜಸ್ವಿನಿ ಜತೆ ತುಂಗಾರಾತಿ ಮಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಪರ ತೀರ್ಪು ಬಂದರೆ ತುಂಗಾ ನದಿಯಲ್ಲಿ ಶ್ರೀರಾಮನ ತೆಪ್ಪೋತ್ಸವ ಮಾಡುವ ಹರಕೆ ಕಟ್ಟಿಕೊಂಡಿದ್ದ ಈ ಎರಡೂ ಗ್ರಾಮಸ್ಥರು, ಅದರಂತೆ ಇಂದು ಹರಕೆ ತೀರಿಸುವ ಕಾರ್ಯಕ್ರಮಕ್ಕೆ ಮೋಹನ ಭಾಗವತರು ಅತಿಥಿಯಾಗಿದ್ರು. ಇದೇ ವೇಳೆ ಮಾತನಾಡಿದ ಭಾಗವತ್‌ ಅವರು, ಗ್ರಾಮಸ್ಥರು ಆಶೀರ್ವಾದ ಮಾಡಿರೋದು ತುಂಬ ಸಂತೋಷ. ಕೆಲ ಕಡೆ ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ನಿಮ್ಮಂತವರನ್ನು ನೋಡಿದ್ರೆ ಸಾಕು ನಮ್ಗೆ ಪುಣ್ಯ ಬರುತ್ತದೆ ಎಂದರು.

Intro:ಸಂಸ್ಜೃತ ಗ್ರಾಮ ಶಿವಮೊಗ್ಗದ ಮತ್ತೂರಿನ ತುಂಗಾ ನದಿಯಲ್ಲಿ ಶ್ರೀರಾಮನ ತೆಪ್ಪೋತ್ಸವ ಹಾಗೂ ತುಂಗ ನದಿ ದಂಡೆಯ ಮೇಲೆ ತುಂಗಾರತಿ ಕಾರ್ಯಕ್ರಮದಲ್ಲಿ‌ ರಾಷ್ಟ್ರೀಯ‌ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನಜೀ ಭಾಗವತ್ ರವರು ಭಾಗಿಯಾಗಿದ್ದರು. ಸಂಜೆ 6:30 ರ ಸುಮಾರಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ರವರು ಭಾಗಿಯಾಗಿದ್ದರು. ತುಂಗಾ ನದಿಯ ಮಧ್ಯದ ಕಟ್ಟೆಯ ಮೇಲೆ ವೇದಿಕೆಯನ್ನು ನಿರ್ಮಾಣ ಮಾಡಲಾಗಿತ್ತು. ವೇದಿಕೆಯಲ್ಲಿ ಮೋಹನ್ ಭಾಗವತ್ ರವರು ಶ್ರೀರಾಮನಿಗೆ ಆರತಿ ಮಾಡುವ ಮೂಲಕ ಚಾಲನೆ ನೀಡಿದರು. ಇತ್ತ ದಡದಲ್ಲಿದ್ದ ಭಕ್ತರು ಸಹ ತುಂಗಾರತಿಯನ್ನು ಮಾಡಿದರು.

Body:ಮತ್ತೂರು ಮತ್ತು ಹೊಸಹಳ್ಳಿ ಗ್ರಾಮಸ್ಥರು ಏರ್ಪಡಿಸಿದ್ದ ತೆಪ್ಪೋತ್ಸವ ಹಾಗೂ ತುಂಗಾರಾತಿ ಗ್ರಾಮದಲ್ಲಿ ಮೋಹನ್ ಜೀ ಭಾಗವತ್ ರವರು ಗ್ರಾಮಸ್ಥರ ಆಹ್ವಾನದ ಮೇರೆಗೆ ಆಗಮಿಸಿದ್ದರು.ತುಂಗಾ ನದಿಯಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ತೆಪ್ಪೋತ್ಸವ ನಡೆಯಿತು. ನದಿಯಲ್ಲಿ ದೇವರುಗಳನ್ನು ಅತ್ತಿತ್ತ ಇತ್ತ ಸುತ್ತಾಡಿಸುವ ಮೂಲಕ ತೆಪ್ಪೋತ್ಸವ ಮಾಡಿದರು. ನಂತ್ರ ಮೋಹನಜೀ ಭಾಗವತರಿಗೆ ಸಂಸ್ಕೃತ ಗ್ರಾಮಗಳಾದ ಮತ್ತೂರು ಮತ್ತು ಹೊಸಹಳ್ಳಿ ಗ್ರಾಮದ ಬ್ರಾಹ್ಮಣರುಗಳು ಆರ್ಶಿವಾದವನ್ನು ಮಾಡಿದರು. ಅಲ್ಲದೆ ಗ್ರಾಮಸ್ಥರ ವತಿಯಿಂದ ಮೈಸೂರು ಪೇಟಾ, ಶಾಲು ಹಾಗೂ ಅಡಿಕೆ ಹಾರ ಹಾಕಿ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ಇದಕ್ಕೂ ಮುನ್ನಾ ಶ್ರೀರಾಮ ಮಂದಿರದ ಹಿಂಭಾಗ ನಡೆದ ಹೋಮದಲ್ಲಿ ಭಾಗಿಯಾದ ಭಾಗವತರು ಪೂರ್ಣಾಹುತಿಯಲ್ಲಿ ಭಾಗಿ, ಪ್ರಸಾದ ಸ್ವೀಕರ ಮಾಡಿದರು.

ತುಂಗಾರಾತಿಯಲ್ಲಿ ಸಂಸದ ರಾಘವೇಂದ್ರ ಭಾಗಿ-
ಅತ್ತ ಮೋಹನ್ ಜೀ ಭಾಗವತರು ಆರತಿ ಮಾಡುತ್ತಿದ್ದಂತೆಯೇ ದಡದಲ್ಲಿದ್ದ ಸಂಸದ ಬಿ.ವೈ.ರಾಘವೇಂದ್ರ ರವರು ತಮ್ಮ ಪತ್ನಿ ತೇಜಸ್ವಿನಿ ಜೊತೆ ತುಂಗಾರಾತಿ ಮಾಡಿದರು. ಗ್ರಾಮಸ್ಥರು, ಸೇರಿದಂತೆ ಅನೇಕರು ತುಂಗೆಗೆ ಆರತಿ ಮಾಡಿ ನಮನ ಸಲ್ಲಿಸಿದರು.

Conclusion:ಅವಳಿ ಗ್ರಾಮಸ್ಥರ ಹರಕೆಯಲ್ಲಿ ಭಾಗಿಯಾದ ಆರ್ ಎಸ್ ಎಸ್ ಸರಸಂಘಚಾಲಕ್-

ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣದ ಪರ ತೀರ್ಪು ಬಂದರೆ ತುಂಗಾ ನದಿಯಲ್ಲಿ ಶ್ರೀರಾಮನ ತೆಪ್ಪೋತ್ಸವ ಮಾಡುವ ಹರಕೆಯನ್ನು ಮತ್ತೂರು ಹಾಗೂ ಹೊಸಹಳ್ಳಿ ಗ್ರಾಮಸ್ಥರು ಮಾಡಿ ಕೊಂಡಿದ್ದರಂತೆ ಅದರಂತೆ ಇಂದು ಹರಕೆ ತೀರಿಸುವ ಕಾರ್ಯಕ್ರಮಕ್ಕೆ ಮೋಹನಜೀ ಭಾಗವತರು ಅತಿಥಿಯಾಗಿ ಭಾಗಿಯಾಗಿದ್ದರು. ತೆಪ್ಪೋತ್ಸವ ಹಾಗೂ ತುಂಗಾರಾತಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಗವತರು, ಮತ್ತೂರು,ಹೊಸಹಳ್ಳಿ ಗ್ರಾಮಸ್ಥರು ನಮಗೆ ಆರ್ಶಿವಾದ ಮಾಡಿದ್ದು ನನಗೆ ತುಂಬ ಸಂತೋಷವಾಗಿದೆ. ಕೆಲವು ಕಡೆ ಹೋದರೆ ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ನಿಮ್ಮಂತವರನ್ನು ನೋಡಿದ್ರೆ ಸಾಕು ನಮಗೆ ಪುಣ್ಯ ಬರುತ್ತದೆ. ಎಲ್ಲಾರ ಸುಖವನ್ನು ಹಿಂದೂಗಳು ಬಯಸುತ್ತಾರೆ. ನಮ್ಮ‌ ಆರ್ ಎಸ್ ಎಸ್ ಶಾಖೆಯಲ್ಲೂ ಸಹ ಎಲ್ಲಾರ ಹಿತವನ್ನು ಕಾಯುವಂತಹ ಪರಸ್ಪರ ಗೌರವ ನೀಡುವುದನ್ನು ಕಲಿಸಲಾಗುತ್ತದೆ. ಇದಕ್ಕಾಗಿಯೇ ಭಾರತದ ಆತಿಥ್ಯಕ್ಕೆ ವಿದೇಶಗಳಲ್ಲೂ ಮಾತನಾಡುತ್ತಾರೆ ಎಂದರು. ಈ ವೇಳೆ ಗ್ರಾಮಸ್ಥರುಗಳಾದ ಶ್ರೀನಿಧಿ ಹಾಗೂ ಸಂಧ್ಯಾರವರು ನಮ್ಮೂರಿಗೆ ಮೋಹನ್ ಭಾಗವತರು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಮಗೆ ಸಂತಸ ತಂದಿದೆ. ಇಂತಹ ದೊಡ್ಡ ವ್ಯಕ್ತಿಯನ್ನು ಇಷ್ಟು ಹತ್ತಿರ ದಿಂದ ನೋಡಿದ್ದು ಖುಷಿಯಾಯಿತು ಎಂದು ತಿಳಿಸಿದ್ದಾರೆ.

ಬೈಟ್: ಮೋಹನಜೀ ಭಾಗವತ್. ಸರಸಂಘಚಾಲಕರು. ಆರ್ ಎಸ್ ಎಸ್.

ಬೈಟ್: ಶ್ರೀನಿಧಿ. ಗ್ರಾಮಸ್ಥರು.( ಜುಬ್ಬಾ ಧರಿಸಿದ್ದವರು)

ಬೈಟ್: ಸಂಧ್ಯಾ. ಗ್ರಾಮಸ್ಥೆ.
Last Updated : Dec 21, 2019, 1:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.