ETV Bharat / state

ಚೀನಾದ ಕಳಪೆ ಕಿಟ್​ಗಳನ್ನು ಪ್ರಧಾನಿ ಮೋದಿ ತಡೆಯಬೇಕು: ಕಾಂಗ್ರೆಸ್​ ಜಿಲ್ಲಾಧ್ಯಕ್ಷ

ಚೀನಾದಿಂದ ಆಮದು ಮಾಡಿಕೊಳ್ಳಲಾದ ಪರೀಕ್ಷಾ ಕಿಟ್​ಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಕಿಟ್​ಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹೆಚ್​.ಎಸ್.ಸುಂದರೇಶ್ ಆರೋಪಿಸಿದರು.

Modi should talk about poor kit
ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹೆಚ್​.ಎಸ್.ಸುಂದರೇಶ್ ಸುದ್ದಿಗೋಷ್ಠಿ
author img

By

Published : Apr 28, 2020, 5:29 PM IST

ಶಿವಮೊಗ್ಗ: ಕೊರೊನಾ ಮೆಡಿಕಲ್ ಪರೀಕ್ಷಾ ಕಿಟ್ ಟೆಂಡರ್​ನಲ್ಲಿ ಸಹ ಅವ್ಯವಹಾರ ಮಾಡಿರುವುದು ಖಂಡನೀಯ. ಚೀನಾದಿಂದ ಆಮದು ಮಾಡಿಕೊಂಡ ಕಿಟ್​ಗಳು ಕಳಪೆ ಗುಣಪಟ್ಟದಿಂದ ಕೂಡಿವೆ. ಪ್ರಧಾನಿ ಅವರು ಈ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್

ಪ್ರಧಾನಿ ಮೋದಿ ಕೇವಲ ಲಾಕ್​ಡೌನ್ ಹೇಳಲು ಮಾತ್ರ ಹೊರಗೆ ಬರುತ್ತಿದ್ದಾರೆ. ಆಮದು ಮಾಡಿಕೊಂಡ ಕಿಟ್​ಗಳ ಗುಣಮಟ್ಟದ ಬಗ್ಗೆ ಮಾತನಾಡುತ್ತಿಲ್ಲ. ಇನ್ನು ಕೇವಲ ಅಕ್ಕಿ, ಗೋಧಿ ನೀಡಲಾಗುತ್ತಿದೆ. ಇದರ ಜೊತೆಗೆ ಅವಶ್ಯಕ ದಿನಸಿ ವಸ್ತುಗಳಿಗೆ ಕಾರ್ಮಿಕ ವರ್ಗ ಯಾರನ್ನು ಕೇಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕೊರೊನಾ ತಡೆಗೆ ಮೂರು ವಿಭಾಗಗಳನ್ನು ಮಾಡಲಾಗಿದೆ. ಆದರೆ, ಮುಖ್ಯವಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಅಗತ್ಯ ವಸ್ತುಗಳು ಜನರಿಗೆ ತಲುಪಿಸುವುದು ಕಷ್ಟವಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಂಘಟಿತ ವಲಯದ ಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಡಲೇ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ: ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಈ ಮೊದಲು ಬೇರೆ ರಾಜ್ಯಕ್ಕೆ ಮೆಕ್ಕೆಜೋಳ ರಫ್ತು ಮಾಡುವುದರಿಂದ ಉತ್ತಮ ಬೆಲೆ ದೊರೆಯುತ್ತಿತ್ತು. ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.