ಶಿವಮೊಗ್ಗ: ಭಾರತ ದೇಶ ಹೇಗೆ ಇರಬೇಕು ಎಂದು ಸರ್ದಾರ್ ಪಟೇಲರು ಅಂದುಕೊಂಡಿದ್ದರೋ ಅದನ್ನು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿಯಿಂದ ದೇಶಪ್ರೇಮಿಗಳಿಗೆ ಎಷ್ಟು ಅನುಕೂಲವಾಗುತ್ತದೆ ಹಾಗೂ ದೇಶ ದ್ರೋಹಿಗಳಿಗೆ ಎಷ್ಟು ಅನಾನುಕೂಲವಾಗುತ್ತದೆ ಎಂಬುದರ ಬಗ್ಗೆ ತಿಳಿಸಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರವರು ಹುಬ್ಬಳ್ಳಿಗೆ ಬರುತ್ತಿದ್ದಾರೆ. ಪೌರತ್ವ ತಿದ್ದುಪಡಿಯಿಂದ ದೇಶದ ಯಾವುದೇ ಮುಸ್ಲಿಂರಿಗೆ ತೂಂದರೆ ಇಲ್ಲ ಎಂದು ದೆಹಲಿಯ ಮುಸ್ಲಿಂ ಗುರು ಬುಕಾರಿಯಾ ಹೇಳಿದ್ದಾರೆ.
ಪೌರತ್ವ ತಿದ್ದುಪಡಿಯಿಂದ ಆಫಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿನ ಅಲ್ಪಸಂಖ್ಯಾತರಿಗೆ ಅನುಕೂಲವಾಗುತ್ತದೆ. ಇದು ನಮ್ಮ ಕರ್ತವ್ಯವಾಗಿದೆ ಎಂದರು.
ಸಂಪುಟ ವಿಸ್ತರಣೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸಿಎಂ ಯಡಿಯೂರಪ್ಪನವರ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಅದಷ್ಟು ಬೇಗ ಪೂರ್ಣ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ನಳಿನ್ ಕುಮಾರ್ ಕಟೀಲ್ ರವರು ಆರ್ ಎಸ್ ಎಸ್ ಹಾಗೂ ಬಿಜೆಪಿಯಲ್ಲಿ ಸಕ್ರಿಯವಾಗಿ ತೂಡಗಿಸಿ ಕೊಂಡಿದ್ದವರು. ಇವರು ಮೊದಲು ಆರು ವರ್ಷ ಆರ್ ಎಸ್ ಎಸ್ ನ ಪ್ರಚಾರಕರಾಗಿದ್ದರು. ನಂತರ ತಮ್ಮ ತಾಲೂಕಿನ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದವರು. ಜನ ಸಾಮಾನ್ಯರ ನಡುವೆ ಇದ್ದು ಕೆಲಸ ಮಾಡಿದ ಪರಿಣಾಮ ಮೂರು ಭಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದರು.
ವಚನಾನಂದ ಸ್ವಾಮೀಜಿ ಸಹ ಹೇಳಿಕೆ ನೀಡಿದ್ದಾರೆ: ಎಲ್ಲರೂ ತಮ್ಮ ತಮ್ಮ ಸಮುದಾಯಗಳಿಗೆ ಮಂತ್ರಿ ಸ್ಥಾನ ನೀಡಿ ಎಂದು ಕೇಳುವುದು ಸಹಜ. ಅದು ತಪ್ಪಲ್ಲ. ವಚನಾನಂದ ಸ್ವಾಮಿಜೀಗಳು ಸಹ ಅದೇ ರೀತಿ ತಮ್ಮ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡಿ ಎಂದು ಕೇಳಿ ಕೊಂಡಿದ್ದಾರೆ. ಇದನ್ನು ರಾಜಕೀಯವಾಗಿ ಬಳಸಿ ಕೊಳ್ಳುವುದು ಸರಿಯಲ್ಲ. ಈ ವಿಚಾರವನ್ನು ಕೈ ಬಿಡಬೇಕು ಎಂದು ಸಿಎಂ ಸಹ ಹೇಳಿದ್ದಾರೆ. ಅದೇ ರೀತಿ ವಚನಾನಂದ ಸ್ವಾಮಿಜೀಗಳು ಏನೂ ಹೇಳಬೇಕು ಅದನ್ನು ಹೇಳಿದ್ದಾರೆ ಎಂದು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು.