ಶಿವಮೊಗ್ಗ: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಸಾಗರದ ಶಾಸಕ ಹರತಾಳು ಹಾಲಪ್ಪ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಸಾಗರದ ಶಾಸಕ ಹರತಾಳು ಹಾಲಪ್ಪನವರು ಇಂದು ಸೊರಬಕ್ಕೆ ಸಾಗುವಾಗ ಸಾಗರ ತಾಲೂಕಿನ ಲಿಂಗದಹಳ್ಳಿ ಕ್ರಾಸ್ ಬಳಿ ಕಾರೊಂದು ರಸ್ತೆ ಪಕ್ಕಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಪಲ್ಲವಿ ಜೈನ್ ಎಂಬುವರಿಗೆ ಗಾಯವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಶಾಸಕ ಹಾಲಪ್ಪ ಸ್ಥಳೀಯರ ನೆರವಿನಿಂದ ಪಲ್ಲವಿ ಜೈನ್ ಅವರನ್ನು ವಾಹನ ವ್ಯವಸ್ಥೆ ಮಾಡಿ ಸಾಗರದ ಆಸ್ಪತ್ರೆಗೆ ಕಳುಹಿಸಿದ್ದಾರೆ.