ETV Bharat / state

ಕಾಂಗ್ರೆಸ್​ನವರು ಅಧಿಕಾರ ತಮ್ಮ ಜನ್ಮ ಸಿದ್ಧ ಹಕ್ಕು ಎಂದುಕೊಂಡಿದ್ದಾರೆ: ಪ್ರಹ್ಲಾದ್ ಜೋಶಿ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ- ದೇಶದ್ರೋಹಿ ಶಕ್ತಿ ಜತೆ ಕಾಂಗ್ರೆಸ್ ಹೊಂದಾಣಿಕೆ -ಐಎಸ್ಐದೊಂದಿಗೆ ಲಿಂಕ್ ಇಟ್ಟುಕೊಂಡಿದೆ. ರಾಹುಲ್ ಗಾಂಧಿ ವಿದೇಶಗಳಿಗೆ ಹೋಗಿ ದೇಶದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬೇಕೆಂದು ಕೋರಿ ಅವಮಾನ ಮಾಡಿದ್ದಾರೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

Union Minister Prahlad Joshi spoke to the media
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರ ಜತೆ ಮಾತನಾಡಿದರು.
author img

By

Published : Mar 18, 2023, 10:43 PM IST

Updated : Mar 19, 2023, 3:18 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಶಿವಮೊಗ್ಗ: ಕಾಂಗ್ರೆಸ್​ನವರು ಅಧಿಕಾರ ತನ್ನ ಜನ್ಮ ಸಿದ್ದ ಹಕ್ಕು ಅಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ವಿದೇಶಿ ಶಕ್ತಿಗಳು ಅದರಲ್ಲೂ ದೇಶದ್ರೋಹಿ ಶಕ್ತಿಗಳ ಜೊತೆಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಬಹಳ ವರ್ಷವಾಯಿತು. ಐಎಸ್ಐ ಜೊತೆ ಲಿಂಕ್ ಇಟ್ಟುಕೊಂಡಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿ ಅವರು ವಿದೇಶಗಳಿಗೆ ಹೋಗಿ ನಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬೇಕೆಂದು ಕೇಳಿ‌ಕೊಳ್ಳುತ್ತಿದ್ದಾರೆ ಎಂದು ಅಪಾದಿಸಿದರು.

ರಾಹುಲ್ ಹೇಳಿಕೆಯಿಂದ ಡ್ಯಾಮೇಜ್- ಜೋಶಿ​: ನಮ್ಮದು ಸರ್ವತಂತ್ರ, ಪ್ರಜಾಪ್ರಭುತ್ವ, ಗಣರಾಜ್ಯ. ಆದರೆ ರಾಹುಲ್ ಗಾಂಧಿ ಅವರು ರೆಗ್ಯುಲೇಟರ್ ಸಿಸ್ಟಮ್​ನಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅನಗತ್ಯ ಸ್ಪೀಕರ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಗೌರವವನ್ನು ಕಡಿಮೆ ಮಾಡುವಂಥ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಯಾಕೆ ಹೀಗೆ ಮಾಡ್ತಾ ಇದ್ದಾರೋ ಗೂತ್ತಿಲ್ಲ. ಅವರಿಗೆ ಯಾರು ಬರೆದು ಕೊಡುತ್ತಾರೂ, ಗೂತ್ತಿಲ್ಲ. ಅವರ ಹೇಳಿಕೆಯಿಂದ ಡ್ಯಾಮೇಜ್ ಆಗುತ್ತಿದೆ ಎಂದು ಸಚಿವ ಜೋಶಿ ಹರಿಹಾಯ್ದರು.

ಲೋಕಸಭೆಯಲ್ಲಿ ಮಾತನಾಡಲು ಸ್ಪೀಕರ್ ಆನ್ ಮಾಡಲ್ಲ ಎಂದು ಹೇಳುತ್ತಿದ್ದಾರೆ. ಲೋಕಸಭೆಯಲ್ಲಿ ಸ್ಪೀಕರ್​ರವರು ಯಾರಿಗೆ ಮಾತನಾಡಲು ಹೇಳುತ್ತಾರೂ ಅವರಿಗೆ ಮಾತ್ರ ಮೈಕ್ ಆನ್ ಆಗುತ್ತದೆ. ಇದನ್ನು ನಾವು ಮಾಡಿದಲ್ಲ. ಬದಲಿಗೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ಮಾಡಿದ್ದು ಎಂದರು.

ಅವರಿಗೆ 8 ವರ್ಷಗಳಿಂದ ಮೋದಿಯವರು ಪ್ರಧಾನ ಮಂತ್ರಿ ಆಗಿ ಇರುವುದನ್ನು ನೋಡಲು ಆಗುತ್ತಿಲ್ಲ. ಅವರಿಗೆ ಇದನ್ನೆಲ್ಲಾ‌ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ಏನೇನೂ ಮಾತನಾಡುತ್ತಿದ್ದಾರೆ. ಇದಕ್ಕೆ ಸೂಕ್ತವಾದ ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಈಶಾನ್ಯ ರಾಜ್ಯ, ಗುಜರಾತ್ ನಲ್ಲಿ ತಕ್ಕ ಉತ್ತರ‌‌ ನೀಡಿದ್ದಾರೆ. ಮುಂದೆ ರಾಜ್ಯದಲ್ಲೂ ನೀಡಲಿದ್ದಾರೆ ಎಂದು ತಿರುಗೇಟು ನೀಡಿದರು.

ಡಬಲ್ ಎಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ: ವಿಜಯ ಸಂಕಲ್ಪ ಯಾತ್ರೆಗೆ ನಮ್ಮ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ‌. ಮೋದಿ ನೇತೃತ್ವದಲ್ಲಿ ಹಾಗೂ ಡಬಲ್ ಎಂಜಿನ್ ಸರ್ಕಾರ ಮತ್ತೆ ಬರಬೇಕು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ‌ ಬಿಜೆಪಿ ಎರಡನೇ ಭಾರಿ ಸರ್ಕಾರ ರಚಿಸುವ ಪೂರ್ಣ ವಿಶ್ವಾಸವಿದೆ ಎಂದರು.

ಇನ್ನೂ ಶಿವಮೊಗ್ಗ ನಗರ ವಿಧಾನಸಭ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಶಿವಮೊಗ್ಗ ಗ್ರಾಮಾಂತರದಲ್ಲಿ ಯಾತ್ರೆ ಬೇಗ ಮುಗಿದ ಕಾರಣ ಸಂಕಲ್ಪಯಾತ್ರೆಯ ಬಸ್ ಬಾರದ ಕಾರಣ ಈಶ್ವರಪ್ಪ, ಪ್ರಹ್ಲಾದ್ ಜೋಶಿ ಅವರು ಬೇರೆ ವಾಹನವನ್ನು ಏರಿ ಯಾತ್ರೆ ಪ್ರಾರಂಭಿಸಿದರು. ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಗಾಂಧಿ ಬಜಾರ್ ನಿಂದ ಶಿವಪ್ಪ ನಾಯಕ ವೃತ್ತದವರೆಗೂ ಅದೇ ವಾಹನದಲ್ಲಿ ಬಂದು ನಂತರ ಯಾತ್ರೆಯ ವಾಹನ ಏರಿದರು. ಇದಕ್ಕೂ ಮುನ್ನಾ ನಾಯಕರುಗಳಿಗೆ ಸೇಬಿನ ಹಾರವನ್ನು ಹಾಕಲಾಯಿತು. ಯಾತ್ರೆ ಬಸ್ ನಿಂದ ಶಿವಪ್ಪ‌ ನಾಯಕನ ಪುತ್ಥಳಿಗೆ ಪುಷ್ಪಾರ್ಚಾನೆ ಮಾಡಲಾಯಿತು.

ಇದನ್ನೂಓದಿ:ಬಿಜೆಪಿಗೆ ಮಾತಾಡಲು ಬೇರೆ ವಿಚಾರ ಸಿಗದೇ, ರಾಹುಲ್​ ಗಾಂಧಿ ಅವಹೇಳನ ಮಾಡುತ್ತಿದೆ: ಬಿಕೆಸಿ ಬೇಸರ

Last Updated : Mar 19, 2023, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.