ಶಿವಮೊಗ್ಗ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ದದಿಂದಾಗಿ ಪಠ್ಯ ಪುಸ್ತಕದ ಮುದ್ರಣ ತಡವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಸಾಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಪಠ್ಯ ಪುಸ್ತಕದ ಮುದ್ರಣಕ್ಕೆ ಕಚ್ಚಾ ವಸ್ತುಗಳ ಕೊರತೆ ಉಂಟಾಗಿತ್ತು. ಈಗ ಎಲ್ಲ ಪುಠ್ಯ ಪುಸ್ತಕಗಳನ್ನು ಮುದ್ರಿಸಲಾಗಿದೆ. ಶೇ.95 ರಷ್ಟು ಪಠ್ಯ ಮುದ್ರಣ ಮುಕ್ತಾಯಗೊಂಡಿದೆ. ಶೇ.92 ರಷ್ಟು ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನವರು ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ: ಇನ್ನೂ ವಿದ್ಯಾರ್ಥಿಗಳಿಗೆ ಸಾಕ್ಸ್, ಶೂ ನೀಡಲು ಆಯಾ ಎಸ್ ಡಿಎಂಸಿ ಸಮಿತಿಗೆ ಅಧಿಕಾರ ನೀಡಲಾಗಿದೆ. ಮಕ್ಕಳ ಸಾಕ್ಸ್ ಹಾಗೂ ಶೂಗಾಗಿ ಕಾಂಗ್ರೆಸ್ ನವರು ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ. ಹಿಂದೆ ಪ್ರವಾಹ ಬಂದಾಗ ಅವರು ಭೀಕ್ಷೆ ಬೇಡಿ ನೀಡಿದ ಒಂದು ಕೋಟಿಯ ಚೆಕ್ ಬೌನ್ಸ್ ಆಗಿದ್ದು, ನಮಗೆಲ್ಲಾ ತಿಳಿದಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಖಾಯಂ ಶಿಕ್ಷಕರ ಕೊರತೆ ಇದೆ. ಆದರೆ, ಅತಿಥಿ ಶಿಕ್ಷಕರ ಕೊರತೆ ಇಲ್ಲ. ಶಾಲೆ ಪ್ರಾರಂಭವಾಗುತ್ತಿದ್ದಂತೆಯೇ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ನೀಡಿದ ಸರ್ಕಾರ ನಮ್ಮದು. ಖಾಯಂ ಶಿಕ್ಷಕರ ನೇಮಕಾತಿ ಪರೀಕ್ಷೆಯ ಮೂಲಕವೇ ಆಗುತ್ತದೆ ಸ್ಪಷ್ಟನೆ ನೀಡಿದರು. ಬಳಿಕ ದಾರಿ ಮಧ್ಯೆ ಹಂಸಗಾರು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಮಾತನಾಡಿದರು.
ಓದಿ : ವ್ಯಕ್ತಿ ಪೂಜೆ ಬದಲು ಪಕ್ಷದ ಪೂಜೆ ಮಾಡಿ ಎಂದು ಅಧಿಕಾರ ಸ್ವೀಕರಿಸಿದಾಗಲೇ ಹೇಳಿದ್ದೆ: ಡಿಕೆಶಿ