ETV Bharat / state

ಸಿ.ಎಂ. ಇಬ್ರಾಹಿಂ ಹೆಜ್ಜೆಯ ಧೂಳನ್ನು ಸಹ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ: ಸಚಿವ ಕೆ. ಎಸ್​ ಈಶ್ವರಪ್ಪ

ಒಂದಂತೂ ಸ್ಪಷ್ಟ. ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಆ ನಾಲ್ಕು ಖಾಲಿ ಸ್ಥಾನ ತುಂಬಬೇಕೋ ಅಥವಾ ಸಂಪುಟ ಪುನಾರಚನೆ ಮಾಡಬೇಕೊ ಎಂಬುದನ್ನು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.

minister-k-s-eshwarappa-
ಸಚಿವ ಕೆ.ಎಸ್​ ಈಶ್ವರಪ್ಪ
author img

By

Published : Feb 3, 2022, 6:26 PM IST

ಶಿವಮೊಗ್ಗ: ವಿಧಾನ ಪರಿಷತ್​ ಸದಸ್ಯ ಸಿ. ಎಂ. ಇಬ್ರಾಹಿಂ ಹೆಜ್ಜೆಯ ಧೂಳನ್ನು ಸಹ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ. ಎಂ. ಇಬ್ರಾಹಿಂ ಏನು, ಅವರ ಮಾಡಿದ ಅನ್ಯಾಯ ಏನು ಎಂಬುದು ಎಲ್ಲರಿಗೆ ಗೊತ್ತು. ಬಿಜೆಪಿ ಹೋರಾಟ ಮಾಡಿ ಸಚಿವ ಸಂಪುಟದಿಂದ ಅವರನ್ನು ಕಿತ್ತು ಹಾಕಿಸಿತ್ತು. ಭದ್ರಾವತಿಯಲ್ಲಿ ಅವರ ಸಹೋದರಿಗೆ ಏನು ಅನ್ಯಾಯ ಮಾಡಿದ್ದಾರೆ ಎಂಬುದು ಜಿಲ್ಲೆ ಹಾಗೂ ರಾಜ್ಯಕ್ಕೆ ಗೊತ್ತಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದರು.

ಸಚಿವ ಕೆ. ಎಸ್​ ಈಶ್ವರಪ್ಪ ಮಾತನಾಡಿದರು

ಸಚಿವ ಸಂಪುಟದ ವಿಸ್ತರಣೆ ಕುರಿತು ಮಾತನಾಡಿದ ಅವರು, ಗೋವಾಗೆ ಹೋಗ್ತಾರೆ, ದೆಹಲಿಗೆ ಹೋಗ್ತಾರೆ, ಒಬ್ಬೊಬ್ಬರು ಒಂದು ಕಡೆ ಹೋಗ್ತಾರೆ. ಯಾಕ್ ಹೋದರು, ಏನು ಕತೆ ನನಗೇನ್ ಗೊತ್ತಿರುತ್ತಾ?. ನೀವು ಪ್ರಶ್ನೆ ಕೇಳ್ತಿರಾ? ಉತ್ತರ ಕೋಡೊಕೆ ನನಗೇನು ಗೊತ್ತಿರುತ್ತೇ. ರಾಜ್ಯದಲ್ಲಿರೋ ಎಲ್ಲಾ ಎಂಎಲ್ಎ ಗಳು ಒಂದೊಂದು ಕಡೆ ಹೋಗ್ತಾರೆ. ಅದು ಅವರ ಇಚ್ಛೆ ಎಂದು ಹೇಳಿದರು.

ಒಂದಂತೂ ಸ್ಪಷ್ಟ. ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇದೆ. ಆ ನಾಲ್ಕು ಖಾಲಿ ಸ್ಥಾನ ತುಂಬಬೇಕೋ ಅಥವಾ ಸಂಪುಟ ಪುನಾರಚನೆ ಮಾಡಬೇಕೊ ಎಂಬುದನ್ನು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅಲ್ಲಿತನಕ ಒಬ್ಬೊಬ್ಬ ಎಂಎಲ್ಎ ಒಂದೊಂದು ಹೇಳಿಕೆ ಕೊಟ್ಟು ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.

ಜೋಶಿ ಹಾಗೂ ಶ್ರೀರಾಮಲು ಭೇಟಿ ವಿಚಾರ. ಯಾರೊಬ್ಬರನ್ನೂ ಭೇಟಿ ಮಾಡಿದ ಕ್ಷಣ ಬೇಡಿಕೆಯಿಟ್ಟಿದ್ದಾರೆ ಎಂದರ್ಥವಲ್ಲ. ರಾಜಕೀಯದಲ್ಲಿ ಸ್ನೇಹ ಬೇರೆ ರಾಜಕೀಯ ಬೇರೆ. ಹಾಗಾಗಿ ಎಲ್ಲರೂ ಕೂಡ ಸ್ನೇಹಿತರು ಹೋಗೋದು ಬರುವುದು ಇದ್ದಿದ್ದೆ. ನಮ್ಮ ಮನೆಗೆ ಸಿದ್ದರಾಮಯ್ಯ ಬಂದಿದ್ದರು. ನಾನು ಡಿ. ಕೆ ಶಿವಕುಮಾರ್ ಮನೆಗೆ ಹೋಗಿದ್ದೆ. ಇದಕ್ಕೆಲ್ಲಾ ರಾಜಕೀಯ ಜೋಡಿಸುವುದು ಸರಿಯಲ್ಲ ಎಂದು ತಿಳಿಸಿದರು.

ಓದಿ: ಬೆಳಗಾವಿ ಎಪಿಎಂಸಿ ‌ಕಾರ್ಯದರ್ಶಿಗೆ ಮುತ್ತಿಗೆ: ಮಳಿಗೆ ವಾಪಸ್ ಪಡೆದು ಹಣ ಮರಳಿಸುವಂತೆ ವ್ಯಾಪಾರಿಗಳ ಒತ್ತಾಯ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.