ಶಿವಮೊಗ್ಗ: ನಾನು ನಿಮಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಸುಮಲತಾ ಮತ್ತು ಕುಮಾರಸ್ವಾಮಿಯವರ ವಿಚಾರ ಬಿಟ್ಟು ಬಿಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಮಾಧ್ಯಮದವರಿಗೆ ಮನವಿ ಮಾಡಿದರು.
ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಿಮಗೆ ಬೇರೆ ಯಾವ ವಿಚಾರವ ಇಲ್ವಾ? ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳು ಇವೆ. ಅದನ್ನು ಬಿಟ್ಟು ಅವರು ಏನ್ ಹೇಳಿದ್ರು, ಇವರೇನು ಹೇಳಿದ್ರು ಅಂತ ತೋರಿಸುತ್ತೀರಾ. ಇದಕ್ಕೇನಾದ್ರು ಅರ್ಥ ಇದೆಯಾ ಎಂದು ಪ್ರಶ್ನಿಸಿದರು.
ಓದಿ : ಮಹಿಳೆಯರು ಅಧಿಕಾರದಲ್ಲಿರೋದನ್ನ ಕೆಲವರು ಸಹಿಸಲ್ಲ: ಟ್ವೀಟ್ ಮೂಲಕ HDKಗೆ ಕುಟುಕಿದ ಸುಮಲತಾ
ಈಗಾಗಲೇ, ಕೆಆರ್ಎಸ್ ಬಿರುಕು ವಿಚಾರದ ಕುರಿತು ಮುರುಗೇಶ್ ನಿರಾಣಿ ಸರ್ಕಾರದ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ಅವರಿಬ್ಬರ ಬಗ್ಗೆ ಟೀಕೆ ಮಾಡಲು ಹೋಗಲ್ಲ. ಸಹೋದರಿ ಸುಮಲತಾ ಹಾಗೂ ಕುಮಾರಸ್ವಾಮಿ ಇಬ್ಬರ ಬಗ್ಗೆಯೂ ನನಗೆ ಗೌರವವಿದೆ. ಅವರಿಬ್ಬರು ವಾಗ್ವಾದ ನಿಲ್ಲಿಸಬೇಕು. ಅವರು ನಿಲ್ಲಿಸುತ್ತಾರೋ ಇಲ್ಲವೋ, ಟಿವಿಯವರು ಮೊದಲು ನಿಲ್ಲಿಸಿ ಎಂದು ಹೇಳಿದರು.
ಅವರು ಎಳೆದು ಕೊಂಡು ಹೋಗ್ತಾರೆ, ನೀವು ಹೋಗ್ತಿರಾ ಎಂದು ಗರಂ ಆದರು. ಜನ ಸಾಯ್ತಿದ್ದಾರೆ ಅದರ ಬಗ್ಗೆ ನೋಡಿ. ನಾನು ಮಾಧ್ಯಮದವರನ್ನು ಟೀಕೆ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದರು.