ETV Bharat / state

ಅಕ್ರಮ ಮದ್ಯ ಮಾರಾಟ, ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಇದೆಯೋ, ಸತ್ತಿದೆಯೋ: ಈಶ್ವರಪ್ಪ ಗರಂ

ಅಬಕಾರಿ ಇಲಾಖೆ ಇದೆಯೋ ಸತ್ತಿದೆಯೋ, ಏನ್​ ಮಾಡ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದರು. ಇದಕ್ಕೆ ಜಿಲ್ಲಾ ಅಬಕಾರಿ ಡಿಸಿ ಕ್ಯಾಪ್ಟನ್ ಅಜಿತ್ ಕುಮಾರ್ ವಿವರಣೆ ನೀಡಲು ಮುಂದಾದಾಗ, ನೀವು 200 ಕೇಸ್ ಹಿಡಿದಿರಬಹುದು. ಆದರೆ, ನಾನು ಇನ್ನೂ 2 ಸಾವಿರ ಕೇಸ್​ಯಿದೆ ಎಂದು ಹೇಳುತ್ತೇನೆ ಎಂದು ಪ್ರಶ್ನೆ ಮಾಡಿದರು.

ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಇದೆಯೋ, ಸತ್ತಿದೆಯೋ : ಈಶ್ವರಪ್ಪ

author img

By

Published : Jun 5, 2021, 8:25 PM IST

ಶಿವಮೊಗ್ಗ: ಲಾಕ್​ಡೌನ್​​ನಲ್ಲಿ ಅಕ್ರಮ ಮದ್ಯ, ಗಾಂಜಾ ಮಾರಾಟ ಆಗುತ್ತಿರುವ ಬಗ್ಗೆ ಸಚಿವ ಈಶ್ವರಪ್ಪ ಅಬಕಾರಿ ಇಲಾಖೆ ವಿರುದ್ಧ ಗರಂ ಆಗಿದ್ದಾರೆ.

ಇಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಸಿ.ಎನ್.ಗೌಡ ಮಾತನಾಡಿ, ನಗರದಲ್ಲಿ ಮದ್ಯ ಮಾರಾಟವಾಗದಂತೆ ಆದೇಶ ಹೊರಡಿಸಿದ್ದೀರಿ. ಆದರೆ, ಇತರ ವ್ಯಕ್ತಿಗಳು ಬೇರೆ ಕಡೆಯಿಂದ ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಎಂಎಲ್​ಸಿ ಆಯನೂರು ಮಂಜುನಾಥ್​​ ಕೂಡ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅಬಕಾರಿ ಇಲಾಖೆ ಇದೆಯೋ ಸತ್ತಿದೆಯೋ, ಏನ್​ ಮಾಡ್ತಿದ್ದೀರಿ ಎಂದು ಕಿಡಿಕಾರಿದರು. ಇದಕ್ಕೆ ಜಿಲ್ಲಾ ಅಬಕಾರಿ ಡಿಸಿ ಕ್ಯಾಪ್ಟನ್ ಅಜಿತ್ ಕುಮಾರ್ ವಿವರಣೆ ನೀಡಲು ಮುಂದಾದಾಗ, ನೀವು 200 ಕೇಸ್ ಹಿಡಿದಿರಬಹುದು. ಆದರೆ, ನಾನು ಇನ್ನೂ 2 ಸಾವಿರ ಕೇಸ್​ಯಿದೆ ಎಂದು ಹೇಳುತ್ತೇನೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಒಂದು ದೂರು ಬಾರದಂತೆ ಎಚ್ಚರಿಕೆ ವಹಿಸಿ ಎಂದು ಖಡಕ್​ ಆಗಿ ಸೂಚಿಸಿದರು.

ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಇದೆಯೋ, ಸತ್ತಿದೆಯೋ : ಈಶ್ವರಪ್ಪ

ಕಠಿಣ ಲಾಕ್‍ಡೌನ್ ಮುಂದುವರಿಕೆ

ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಕಠಿಣ ಲಾಕ್‍ಡೌನ್ ನಿಯಮಾವಳಿಗಳು ಜೂನ್ 14 ರವರೆಗೆ ಮುಂದುವರೆಯಲಿದೆ. ದಿನಸಿ, ತರಕಾರಿಯಂತಹ ಅಗತ್ಯ ಸಾಮಗ್ರಿಗಳ ಮಾರಾಟಕ್ಕೆ ಬೆಳಗ್ಗೆ 6ರಿಂದ 8 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ ಕೈಗಾರಿಕೆಗಳ ಕಾರ್ಯ ನಿರ್ವಹಣೆಗೆ ಅವಕಾಶವಿದೆ. ಮದ್ಯ ಮಾರಾಟ (ಪಾರ್ಸೆಲ್) ಕ್ಕೆ ಬೆಳಗ್ಗೆ 6 ರಿಂದ 8 ರವರೆಗೆ ಅವಕಾಶ ನೀಡಲಾಗಿದೆ. ಎಪಿಎಂಸಿಯಲ್ಲಿ ಸರಕು ಸಾಮಗ್ರಿಗಳನ್ನು ಸರಕು ವಾಹನಗಳಿಂದ ಇಳಿಸಲು ಮತ್ತು ಲೋಡ್ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ ಎಂದರು.

ಪಾಸಿಟಿವಿಟಿ ದರ ಇಳಿಕೆ

ನಗರ ಪ್ರದೇಶ ಮಾತ್ರವಲ್ಲದೇ, ಗ್ರಾಮೀಣ ಪ್ರದೇಶದಲ್ಲೂ ಕೊರೊನಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಶೇ.47 ರಷ್ಟಿದ್ದ ಪಾಸಿಟಿವಿಟಿ ದರ ಇದೀಗ ಶೇ.18ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಇದನ್ನು ಶೇ.5 ಕ್ಕೆ ಇಳಿಸುವ ಗುರಿಯನ್ನು ಹೊಂದಲಾಗಿದ್ದು, ಎಲ್ಲರ ಸಹಕಾರದಿಂದ ಮಾತ್ರ ಇದು ಸಾಧ್ಯವಿದೆ ಎಂದರು.

ವ್ಯಾಕ್ಸಿನೇಷನ್​​ ಗೊಂದಲ ತಪ್ಪಿಸಲು ಕ್ರಮ

ಪ್ರಸ್ತುತ ಜಿಲ್ಲೆಯಲ್ಲಿ 27ಸಾವಿರ ಡೋಸ್ ಲಸಿಕೆ ಲಭ್ಯವಿದೆ. ಸಾರ್ವಜನಿಕರಲ್ಲಿ ಗೊಂದಲ ತಪ್ಪಿಸಲು ಟೋಕನ್ ಹಿಂದಿನ ದಿನವೇ ನೀಡಬೇಕು. ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಲಸಿಕೆ ನೀಡುವ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.