ETV Bharat / state

ಗೋಮಾಳ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಗ್ರಾಮಸ್ಥರ ಆಕ್ರೋಶ - ಅಕ್ರಮ ಕಲ್ಲು ಗಣಿಗಾರಿಕೆ

ಮಲೆನಾಡು ಶಿವಮೊಗ್ಗದಲ್ಲಿ‌ ಈಗಾಗಲೇ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಬೇಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಗೋಮಾಳ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗೋಮಾಳ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಗ್ರಾಮಸ್ಥರ ಆಕ್ರೋಶ
author img

By

Published : Oct 10, 2019, 5:34 AM IST

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕು ಹುಂಚ ಗ್ರಾಮದ ಸರ್ವೆ ನಂಬರ್ 69 ರಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದು, ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಗೋಮಾಳ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಗ್ರಾಮಸ್ಥರ ಆಕ್ರೋಶ

ಹುಂಚ ಗ್ರಾಮದ ಲೋಕೇಶ್, ಚನ್ನಕೇಶವ ಹಾಗೂ ಶಂಕರಪ್ಪ ಹಾಗೂ ಕೃಷ್ಣಮೂರ್ತಿರವರಿಗೆ ತಲಾ 1 ಎಕರೆ ಭೂಮಿಯಲ್ಲಿ 20 ವರ್ಷದವರೆಗೆ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅನುಮತಿ ನೀಡಿದೆ. ಇದರಿಂದ ಕೇವಲ ಹುಂಚ ಗ್ರಾಮ ಮಾತ್ರವಲ್ಲದೆ, ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ, ಕುಬಟಹಳ್ಳಿ ಗ್ರಾಮಗಳು ಗಣಿಗಾರಿಕಾ ಪ್ರದೇಶದಿಂದ ತೊಂದರೆಗೆ ಒಳಗಾಗಲಿವೆ. ಇವು ಸೂಕ್ಷ್ಮ ಪ್ರದೇಶಗಳಾಗಿದ್ದು, ಭೂಮಿ ಪಡೆದವರು ಗಣಿಗಾರಿಕೆ ನಡೆಸಲು ಮುಂದಾಗಿರುವುದನ್ನು ಖಂಡಿಸಿ ಐದಾರು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Intro:ಗೋಮಾಳ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಅನುಮತಿ: ಗ್ರಾಮಸ್ಥರ ಆಕ್ರೋಶ.

ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ‌ ಈಗಾಗಲೇ ಅಕ್ರಮ ಕಲ್ಲು ಗಣಿಗಾರಿಕೆ ಹೆಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಬೇಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅರಣ್ಯ ಪ್ರದೇಶಕ್ಕೆ ಅಂಟಿ ಕೊಂಡಿರುವ ಗೋಮಾಳ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ಮಾಡಲು ಅವಕಾಶ ನೀಡಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಗ್ರಾಮದ ಸರ್ವೆ ನಂಬರ್ 69 ರಲ್ಲಿ ಕಲ್ಲುಗಣಿಗಾರಿಕೆ ಮಾಡಲು ಲೋಕೇಶ್, ಚನ್ನಕೇಶವ ಹಾಗೂ ಶಂಕರಪ್ಪ ಹಾಗೂ ಕೃಷ್ಣಮೂರ್ತಿ ರವರಿಗೆ ತಲಾ 1 ಎಕರೆ ಭೂಮಿಯನ್ನು ಗಣಿಗಾರಿಕೆಗೆ 20 ವರ್ಷಕ್ಕೆ ಮಂಜೂರು ಮಾಡಿದೆ.Body:ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕ್ರಷರ್ ಹಾಗೂ ಸ್ಪೋಟಕ್ಕೆ ಅವಕಾಶ ಮಾಡಿದೆ.‌ ಇಲಾಖೆಯ ಕ್ರಮದಿಂದ ಅರಣ್ಯ ಭೂಮಿ, ಪ್ರಾಣಿಗಳಿಗೆ ಹಾಗೂ ಹುಂಚ ಅಲ್ಲದೆ, ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ,ಕುಬಟಹಳ್ಳಿ ಗ್ರಾಮಗಳು ಈ ಗಣಿಗಾರಿಕಾ ಪ್ರದೇಶದಿಂದ ತೊಂದರೆಗೆ ಒಳಗಾಗಲಿವೆ. ಈ ಎಲ್ಲಾ ಗ್ರಾಮಗಳು ಸೂಕ್ಷ್ಮ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡಿರುವುದು ಗಮನಾರ್ಹ ಸಂಗತಿ.Conclusion:
ಭೂಮಿ ಪಡೆದವರು ಗಣಿಗಾರಿಕೆ ನಡೆಸಲು ಮುಂದಾಗಿರುವುದನ್ನು ಖಂಡಿಸಿ ಐದಾರು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆಯ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಸರಿಯಾದ ನಿರ್ಧಾರ ತೆಗೆದು ಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಬೈಟ್: ಜನಾರ್ಧನ್. ಹುಂಚ ಗ್ರಾಮಸ್ಥ.

ಬೈಟ್: ಹೇಮಾ. ಗ್ರಾಮಸ್ಥೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.