ಶಿವಮೊಗ್ಗ: ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚುನಾಯಿತ ಸದಸ್ಯ ಎಂದು ಗೋಪಾಲಪೂಜಾರಿ ಅವರನ್ನು ಘೋಷಿಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿ ಈ ಆದೇಶವನ್ನು ಹೈಕೋರ್ಟ್ ತೀರ್ಪಿನಂತೆ ಹೊರಡಿಸಿದ್ದಾರೆ.
2020ರ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೇಲಿನ ಕುರುವಳ್ಳಿ ಕ್ಷೇತ್ರ-1ರಲ್ಲಿ ಬಿಸಿಎಂ(ಎ) ಮೀಸಲು ಕ್ಷೇತ್ರದಿಂದ ಕುರುವಳ್ಳಿ ನಾಗರಾಜ್ ಮತ್ತು ಗೋಪಾಲ ಪೂಜಾರಿ ಸ್ಪರ್ಧಿಸಿದ್ದರು. ಇದರಲ್ಲಿ ಕುರುವಳ್ಳಿ ನಾಗರಾಜ್ ಜಯ ಗಳಿಸಿದ್ದರು.
ಕುರುವಳ್ಳಿ ನಾಗರಾಜ್ ಸಲ್ಲಿಸಿದ್ದ ನಾಮಪತ್ರ ಕ್ರಮಬದ್ಧವಾಗಿಲ್ಲ, ಕ್ರಿಮಿನಲ್ ಪ್ರಕರಣಗಳ ವಿವರವನ್ನು ನಾಗರಾಜ್ ನಾಮಪತ್ರದಲ್ಲಿ ನಮೂದಿಸಿಲ್ಲ ಎಂದು ಗೋಪಾಲ ಪೂಜಾರಿ ತೀರ್ಥಹಳ್ಳಿ ಜೆಎಂಎಫ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. 2021ನವೆಂಬರ್ 27 ರಂದು ಗೋಪಾಲ ಪೂಜಾರಿ ಪರ ನ್ಯಾಯಾಲಯ ತೀರ್ಪು ನೀಡಿತ್ತು.
ತೀರ್ಥಹಳ್ಳಿ ಜೆಎಂಎಫ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಕುರುವಳ್ಳಿ ನಾಗರಾಜ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಾಗರಾಜ್ ಆಯ್ಕೆಯನ್ನು ಅಸಿಂಧುಗೊಳಿಸಿ, ತೀರ್ಥಹಳ್ಳಿ ಜೆಎಂಎಫ್ ನ್ಯಾಯಾಲಯದ ತೀರ್ಪುನ್ನು ಎತ್ತಿ ಹಿಡಿದಿದೆ.
ಈ ಹಿನ್ನೆಲೆಯಲ್ಲಿ ಗೋಪಾಲ ಪೂಜಾರಿ ಅವರನ್ನು ಮೇಲಿನ ಕುರುವಳ್ಳಿ ಗ್ರಾ.ಪಂ. ಸದಸ್ಯ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿದ್ದ ಚುನಾವಣಾಧಿಕಾರಿಗಳು ಬಂದು ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ಗೋಪಾಲ ಪೂಜಾರಿ ಅವರು ಪರವಾಗಿ ಬಂದಿದ್ದ ಕೋರ್ಟ್ ಆದೇಶವನ್ನು ತೋರಿಸಿ, ಗೋಪಾಲ ಪೂಜಾರಿ ಅವರು ಗ್ರಾಮ ಪಂಚಾಯತಿ ಸದಸ್ಯರೆಂದು ಘೋಷಿಸಿದ್ದಾರೆ.
ಇದನ್ನೂ ಓದಿ: Vnay Kulkarni: ಕೋರ್ಟ್ ಮೇಲೆ ಭರವಸೆ ಇದೆ, ಹೈಕೋರ್ಟ್‌ಗೆ ಆಫೀಲು ಹೋಗುತ್ತೇನೆ: ವಿನಯ್ ಕುಲಕರ್ಣಿ