ಶಿವಮೊಗ್ಗ: ಕೂರೂನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ದಾದಿಯರ ಸಮಾನವಾಗಿ ಪೊಲೀಸರು ಸಹ ಹೋರಾಟ ನಡೆಸುತ್ತಿದ್ದಾರೆ. ಇವರು ಹಗಲು- ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಪೊಲೀಸರು ಕೂರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಗೆ ಅನುಕೂಲವಾಗುವಂತೆ ಶಿವಮೊಗ್ಗದ ಗಾಂಧಿ ಬಜಾರ್ನ ಸಗಟು ವ್ಯಾಪಾರಿಗಳು ಇಂದು ಸ್ಟೀಮರ್, N-95 ಮಾಸ್ಕ್, ಸ್ಯಾನಿಟೈಸರ್ಗಳನ್ನು ವಿತರಿಸಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಸ್ಪಿ ಲಕ್ಷ್ಮೀಪ್ರಸಾದ್, ಸಗಟು ವ್ಯಾಪಾರಿಗಳ ಗೌರವಾಧ್ಯಕ್ಷ ಕೆ.ಈ. ಕಾಂತೇಶ್, ಅಧ್ಯಕ್ಷ ರಾಜಾರಾಮ್, ಆರ್ಎಸ್ಎಸ್ನ ದಕ್ಷಿಣ ಕರ್ನಾಟಕ ಕಾರ್ಯವಾಹ ಪಟ್ಟಾಭಿರಾಮ್ ಸೇರಿದಂತೆ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಸಲಕರಣೆಗಳನ್ನು ವಿತರಿಸಲಾಯಿತು.
ಪ್ರತಿನಿತ್ಯ ಪೊಲೀಸರು ಕೂರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ಗಳನ್ನು ನೀಡಿದ್ರೆ ಅವರಿಗೆ ಒಂದು ಸಣ್ಣ ಸಹಾಯವಾಗುತ್ತದೆ. ಅಲ್ಲದೆ ಸ್ಟೀಮರ್ನಿಂದ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಹಾಗೂ ಕರ್ತವ್ಯದ ನಂತರ ಸ್ಟೀಮ್ ಮಾಡಿಕೊಂಡರೆ ಆರೋಗ್ಯವಾಗಿರಬಹುದಾಗಿದೆ. ಸ್ಟೀಮರ್ನಿಂದ ಹಬೆ ತೆಗೆದುಕೊಂಡರೆ ನಮ್ಮ ಗಂಟಲಲ್ಲಿ ಇರುವ ಕೂರೊನಾ ವೈರಸ್ ಸಾಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿನ ಮಾಹಿತಿಯ ಮೇರೆಗೆ ಇದನ್ನು ಪೊಲೀಸರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ರಾಜಾರಾಮ್ ತಿಳಿಸಿದ್ದಾರೆ.
ಸಂಸದರು ಹಾಗೂ ಸಗಟು ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸ್ಟೀಮರ್ಗಳನ್ನು ಎಸ್ಪಿ ಲಕ್ಷ್ಮೀಪ್ರಸಾದ್ ಅವರಿಗೆ ಹಸ್ತಾಂತರಿಸಿದರು. ನಂತರ ದೊಡ್ಡಪೇಟೆ ಸಿಪಿಐ ಹರೀಶ್ ಪಟೇಲ್ ಹಾಗೂ ಇತರರಿಗೆ ನೀಡಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ 289 ವಾಹನ ಜಪ್ತಿ, 93 ಸಾವಿರ ರೂ. ದಂಡ ವಸೂಲಿ