ETV Bharat / state

ಪಿಪಿಇ ಕಿಟ್​​ನಲ್ಲಿ ಮಾಸ್ಕ್​​, ಗ್ಲೌಸ್ ಕಣ್ಮರೆ.. ಕಣ್ಣೀರಿಟ್ಟ ಮೃತನ ಸಂಬಂಧಿ - ಉಸ್ತುವಾರಿ ಸಚಿವ

ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಉತ್ತಮವಾದ ಪಿಪಿಇ ಕಿಟ್ ನೀಡಬೇಕು ಎಂದು ಸೂಚನೆ ನೀಡಿದ್ದರು. ಇಷ್ಟಾದರೂ ಪಿಪಿಇ ಕಿಟ್​​ನಲ್ಲಿ ಸಮರ್ಪಕ ಸಾಧನೆಗಳು ನಾಪತ್ತೆಯಾಗಿದೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ..

ಕಣ್ಣೀರಿಟ್ಟ ಮೃತನ ಸಂಬಂಧಿ
ಕಣ್ಣೀರಿಟ್ಟ ಮೃತನ ಸಂಬಂಧಿ
author img

By

Published : May 19, 2021, 6:05 PM IST

ಶಿವಮೊಗ್ಗ : ಕೋವಿಡ್​​​ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕಾಗಿ ಅವರ ಕುಟುಂಬಸ್ಥರಿಗೆ ಮಹಾನಗರ ಪಾಲಿಕೆಯಿಂದ ನೀಡುವ ಪಿಪಿಇ ಕಿಟ್​​​ನಲ್ಲಿ ಸುರಕ್ಷಾ ಸಾಧನಗಳಾದ ಹ್ಯಾಂಡ್ ಗ್ಲೌಸ್, ಫೇಸ್ ಮಾಸ್ಕ್, ಸಾಕ್ಸ್​ಗಳೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪಿಪಿಇ ಕಿಟ್​​ನಲ್ಲಿ ಮಾಸ್ಕ್​​, ಗ್ಲೌಸ್ ಕಣ್ಮರೆ.. ಕಣ್ಣೀರಿಟ್ಟ ಮೃತನ ಸಂಬಂಧಿ..

ಕೋವಿಡ್​​ ಶವವನ್ನು ಜಿಲ್ಲಾಡಳಿತ ನೇಮಕ ಮಾಡಿರುವ ಆ್ಯಂಬುಲೆನ್ಸ್​ಗಳಲ್ಲಿಯೇ‌ ಸಾಗಿಸಬೇಕಿದೆ. ಇದರಿಂದ ಶವ ಸಾಗಾಟ, ಶವವನ್ನು ದಹಿಸಲು ಸಹಕರಿಸುವವರಿಗೆ ಈ 4 ಪಿಪಿಇ ಕಿಟ್ ಉಪಯೋಗಕ್ಕೆ ಬರುತ್ತವೆ.

ಆದರೆ, ಇದರಲ್ಲಿ ಹ್ಯಾಂಡ್ ಗ್ಲೌಸ್, ಫೇಸ್​​​ಮಾಸ್ಕ್, ಸಾಕ್ಸ್​​ಗಳೇ ಇಲ್ಲ ಎಂದ‌ ಮೇಲೆ ಹೇಗೆ ಶವವನ್ನು ಸಾಗಿಸಬೇಕು, ಹೇಗೆ ಮುಟ್ಟಬೇಕು ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಅಲ್ಲದೆ ಆ್ಯಂಬುಲೆನ್ಸ್ ಚಾಲಕರು ಸಹ ಪಿಪಿಇ ಕಿಟ್ ಸಮರ್ಪಕ ರೀತಿಯಲ್ಲಿ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಉತ್ತಮವಾದ ಪಿಪಿಇ ಕಿಟ್ ನೀಡಬೇಕು ಎಂದು ಸೂಚನೆ ನೀಡಿದ್ದರು. ಇಷ್ಟಾದರೂ ಪಿಪಿಇ ಕಿಟ್​​ನಲ್ಲಿ ಸಮರ್ಪಕ ಸಾಧನೆಗಳು ನಾಪತ್ತೆಯಾಗಿದೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.