ETV Bharat / state

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕೂಲಿ ಕಾರ್ಮಿಕನ ಕಾಲು ಕಟ್​: ಶಿವಮೊಗ್ಗದಲ್ಲಿ ದಾರುಣ ಘಟನೆ - ಶಿವಮೊಗ್ಗ ರೈಲ್ವೆ ನಿಲ್ದಾಣ

ರೈಲಿಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬನ ಕಾಲು ತುಂಡಾದ ದಾರುಣ ಘಟನೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ.

Man loses legs in train accident at Shivamogga
ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯ ಕಾಲು ತುಂಡು
author img

By

Published : Nov 26, 2022, 12:35 PM IST

ಶಿವಮೊಗ್ಗ: ರೈಲಿಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬನ ಕಾಲು ತುಂಡಾಗಿರುವ ಘಟನೆ ಶಿವಮೊಗ್ಗದ ಸರ್‌ಎಂ.ವಿ.ರಸ್ತೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಸಿಲುಕಿ ಕೂಲಿ ಕಾರ್ಮಿಕ ಆದಿಲ್ ಎಂಬಾತ ತನ್ನ ಬಲಗಾಲನ್ನು ಕಳೆದುಕೊಂಡಿದ್ದಾನೆ.

ಆದಿಲ್ (19) ಬಿಹಾರ ಮೂಲದ ಕಾರ್ಮಿಕನಾಗಿದ್ದು, ರೈಲ್ವೆ ಮೇತ್ಸುವೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ‌. ನಿನ್ನೆ ಮದ್ಯಪಾನ ಮಾಡಿ ಹಳಿ ದಾಟುವಾಗ ರೈಲು ಬರುವುದನ್ನು ಗಮನಿಸದೆ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯ ಕಾಲು ತುಂಡು

ಅವಘಡ ನಡೆದ ಕೆಲವೇ ಮೀಟರ್ ದೂರದಲ್ಲಿ ರೈಲು ನಿಲ್ದಾಣ ಇದ್ದ ಕಾರಣ ರೈಲು ನಿಧಾನವಾಗಿ ಚಲಿಸುತ್ತಿತ್ತು. ರೈಲು ವೇಗವಾಗಿದ್ದರೆ ಆದಿಲ್ ದೇಹ ಛಿದ್ರವಾಗುತ್ತಿತ್ತು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಕರ್ನಾಟಕ ಮೂಲದ ಕಾರು ಚಾಲಕನ ಬರ್ಬರ ಕೊಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.