ETV Bharat / state

ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಲೆನಾಡಿನ ಪ್ರತಿಭೆ ಅದಿತಿ ರಾಜೇಶ್ ಆಯ್ಕೆ - Sahyadri Cricket Coaching Center Shimoga

ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮಲೆನಾಡಿನ ಯುವತಿ ಅದಿತಿ ರಾಜೇಶ್ ಆಯ್ಕೆಯಾಗಿದ್ದಾರೆ. ಇದೇ ತಿಂಗಳು ಮುಂಬೈನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಇವರು ಪಾಲ್ಗೊಳ್ಳುವರು.

Aditi Rajesh
ಅದಿತಿ ರಾಜೇಶ್
author img

By

Published : Jan 17, 2023, 9:54 AM IST

Updated : Jan 17, 2023, 11:21 AM IST

ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಯುವತಿ ಆಯ್ಕೆ

ಶಿವಮೊಗ್ಗ : ಜಿಲ್ಲೆಯ ಪ್ರತಿಭಾನ್ವಿತ ಕ್ರಿಕೆಟ್‌ ಆಟಗಾರ್ತಿ ಅದಿತಿ ರಾಜೇಶ್ ಅವರು ಕರ್ನಾಟಕ ಮಹಿಳಾ ಕ್ರಿಕೆಟ್​ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಜನವರಿ 18ರಿಂದ 28ರವರೆಗೆ ಮುಂಬೈನಲ್ಲಿ ಟೂರ್ನಿ ನಡೆಯಲಿದೆ. ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ರಾಜ್ಯ ಹಿರಿಯ ಮಹಿಳಾ ತಂಡ ಮುನ್ನಡೆಸುತ್ತಿದ್ದು, ಅದಿತಿ ರಾಜೇಶ್‌ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕ್ರಿಕೆಟ್ ಕೋಚಿಂಗ್ ಸೆಂಟರ್​ನಲ್ಲಿ ಕೋಚ್ ನಾಗರಾಜ್ ಅವರಿಂದ ಅದಿತಿ ತರಬೇತಿ ಪಡೆದಿದ್ದಾರೆ.

ಅದಿತಿ ರಾಜೇಶ್ ಅಂತಿಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಕ್ರಿಕೆಟ್​ ತರಬೇತಿ ಪಡೆಯುತ್ತಿದ್ದು ವಲಯ ಮಟ್ಟ, 10, 16, 19 ವಯೋಮಿತಿನಲ್ಲಿ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಕ್ರಿಕೆಟ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ತಂದೆ ರಾಜೇಶ್ ಔಷಧ ಏಜೆನ್ಸಿ ಹೊಂದಿದ್ದಾರೆ. ತಾಯಿ ಕವಿತಾ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗದ ನಿವಾಸಿಯಾಗಿರುವ ಇವರು ಮಗಳಿಗೆ ಉತ್ತಮ ತರಬೇತಿ ದೂರಕಿಸಿ ಕೊಟ್ಟಿದ್ದಾರೆ.

Aditi Rajesh is trying to hit a six
ಕ್ರಿಕೆಟರ್‌ ಅದಿತಿ ರಾಜೇಶ್​

ಶುಭ ಕೋರಿದ ಕೋಚ್​: ಕೋಚ್​ ನಾಗರಾಜ್ ಮಾತನಾಡಿ, "ಅದಿತಿ ರಾಜೇಶ್ ಉತ್ತಮ ಆಟಗಾರ್ತಿ. ಉತ್ತಮ ಬ್ಯಾಟರ್‌ ಹಾಗೂ ಸ್ಪೀನ್ ಬೌಲಿಂಗ್‌ ಮಾಡಬಲ್ಲರು. ರಾಜ್ಯಮಟ್ಟದ ಕ್ರಿಕೆಟ್​ಗೆ ಆಯ್ಕೆ ಆಗಿದ್ದು ಸಂತಸ ತಂದಿದೆ. ಈಗ ಉತ್ತಮ ಪ್ರದರ್ಶನ ನೀಡಿದರೆ ಮುಂದೆ ಭಾರತ ತಂಡಕ್ಕೆ ಆಯ್ಕೆ ಆಗುವ ಅವಕಾಶ ಸಿಗುತ್ತದೆ" ಎಂದು ಹೇಳಿದರು.

ಸಹ್ಯಾದ್ರಿ ಕ್ರಿಕೆಟ್ ಕೋಚಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆಯುತ್ತಿರುವ ಮತ್ತೋರ್ವ ಆಟಗಾರ್ತಿ ಲೀನಾ ಪ್ರತಿಕ್ರಿಯಿಸಿ, "ನಾಗರಾಜ್ ಅವರು ಉತ್ತಮ ತರಬೇತಿ ನೀಡುತ್ತಿದ್ದಾರೆ. ಅವರಿಂದ ತರಬೇತಿ ಪಡೆದ ಅನೇಕರು ವಿವಿಧ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಉತ್ತಮ ಅವಕಾಶಗಳನ್ನೂ ಪಡೆದುಕೊಂಡಿದ್ದಾರೆ. ನಾವು ಅದಿತಿ ಅಕ್ಕನ ಜೊತೆ ವಿವಿಧ ವಲಯ ಮಟ್ಟದಲ್ಲಿ ಆಡಿದ್ದೇವೆ. ಅವರು ಪ್ರತಿಭಾವಂತ ಆಟಗಾರ್ತಿ. ನಮಗೆಲ್ಲಾ ಸ್ಪೂರ್ತಿ" ಎಂದರು.

ಇದನ್ನೂ ಓದಿ: ವನಿತೆಯರ ಐಪಿಎಲ್​ಗೆ ಹೆದರಿ ಪಾಕಿಸ್ತಾನ ಮಹಿಳಾ ಟಿ20 ಲೀಗ್‌ ದಿನಾಂಕ ಮುಂದೂಡಿಕೆ

Last Updated : Jan 17, 2023, 11:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.