ಶಿವಮೊಗ್ಗ : ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಪುತ್ರಿ ಡಾ. ರಾಜನಂದಿನಿ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ತ್ಯಾಗರ್ತಿಯ ಮಂಜು ಎಂಬಾತನೂ ಸೇರಿದಂತೆ ಇತರರ ಮೇಲೆ ದೂರು ದಾಖಲಾಗಿದೆ.
ಡಾ. ರಾಜನಂದಿನಿ ಅವರು ಕಾಗೋಡು ತಿಮ್ಮಪ್ಪನವರ ಫೌಂಡೇಷನ್ ವತಿಯಿಂದ ಸಾಗರ ತಾಲೂಕಿನಲ್ಲಿ ಆರೋಗ್ಯ ಶಿಬಿರ ನಡೆಸುತ್ತಿದ್ದಾರೆ. ನಿನ್ನೆ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಮುಗಿಸಿ ಸಾಗರಕ್ಕೆ ವಾಪಸ್ ಆಗುವಾಗ ರಾಜನಂದಿನಿ ಅವರ ಕಾರನ್ನು ಮಂಜು ತಡೆದಿದ್ದ.
ಕಾರ್ನ ಚಾಲಕ ಪ್ರಕಾಶ್ ಎಂಬಾತನಿಗೆ ಬೆದರಿಕೆ ಹಾಕಿದ್ದನಂತೆ. ಆದರೆ, ನಂದಿನಿ ಅವರು ಆ ಕಾರ್ನಲ್ಲಿ ಇರಲಿಲ್ಲ. ಅವರು ಬೇರೊಂದು ಕಾರ್ನಲ್ಲಿ ಬರುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹಾಲು ಸಾಗಾಣಿಕೆಗೆ 'ದೇಸಿ ಫೆರಾರಿ ಕಾರು'.. ತಯಾರಿಸಿದ ವ್ಯಕ್ತಿಯ ಭೇಟಿಗೆ ಮುಂದಾದ ಮಹೀಂದ್ರಾ!
ಘಟನೆ ಸಂಬಂಧ ಆರು ಜನರ ವಿರುದ್ಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.