ETV Bharat / state

ರಾಜ್ಯದ ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಿದ್ದಾರೆ ಮಹಿಳಾ ಡ್ರೈವರ್​ಗಳು...! - Garbage Disposal

ತರಬೇತಿ ಪಡೆದ ಮಹಿಳೆಯರು ಗ್ರಾ. ಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕಸದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

lady-drivers
ಮಹಿಳಾ ಡ್ರೈವರ್​
author img

By

Published : Nov 1, 2021, 11:37 PM IST

ಶಿವಮೊಗ್ಗ: ರಾಜ್ಯದ ಪ್ರತಿಯೊಂದು ಗ್ರಾಮಪಂಚಾಯತಿ ಮಟ್ಟದಲ್ಲಿ ಕಸ ಸಂಗ್ರಹಣೆ, ವಿಂಗಡಣೆಗೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ ಆಯ್ದ ಗ್ರಾ. ಪಂ ಗಳಲ್ಲಿ ಕಸ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ. ಎಸ್ ಈಶ್ವರಪ್ಪ

ದಕ್ಷಿಣ ಕನ್ನಡ, ಉಡುಪಿ ಭಾಗದ ಕೆಲ ಗ್ರಾ. ಪಂಗಳು ಈಗಾಗಲೇ ಕಸ ಸಂಗ್ರಹಣೆಯಲ್ಲಿ ಸ್ವಾವಲಂಬನೆ ಸಾಧಿಸಿವೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ವತಿಯಿಂದ ಗ್ರಾ. ಪಂ ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಿಕೊಂಡಿದೆ. ಹೊರಗುತ್ತಿಗೆ ಆಧಾರದ ಮೇಲೆ ಅದಕ್ಕೆ ಸಿಬ್ಬಂದಿ ನೇಮಕ, ತರಬೇತಿ, ವೇತನ ನೀಡುತ್ತದೆ.

ಜಿಲ್ಲಾಪಂಚಾಯತಿ ಸಿಇಒ ಎಂ. ಎಲ್ ವೈಶಾಲಿ

ಆಯಾ ಗ್ರಾ. ಪಂಚಾಯ್ತಿಗಳ ಆರ್ಥಿಕ ಶಕ್ತಿ ಆಧಾರದ ಮೇಲೆ ಆಕರ್ಷಕ ವೇತನ ಕೂಡ ನಿಗದಿಯಾಗಿದೆ. ಕೌಶಲ್ಯ ಕರ್ನಾಟಕದ ವತಿಯಿಂದ ಆಯಾ ಗ್ರಾ. ಪಂಚಾಯತಿ ವ್ಯಾಪ್ತಿಯ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಮಾನ್ಯತೆ ಪಡೆದ ಚಾಲನಾ ತರಬೇತಿ ಸಂಸ್ಥೆ ವತಿಯಿಂದ ತರಬೇತಿ, ಡಿಎಲ್ ಸಹ ಕೊಡಿಸಲಾಗಿದೆ. ಸ್ವಚ್ಛ ಭಾರತ, 15ನೇ ಹಣಕಾಸು ನಿ, ಜಿ. ಪಂ ಅನುದಾನ ಬಳಸಿಕೊಂಡು ವಾಹನ ವ್ಯವಸ್ಥೆ, ಡಂಪಿಂಗ್ ಯಾರ್ಡ್ ಆಯ್ಕೆ, ಮನೆ ಮನೆಗೆ ಕಿಟ್ ವ್ಯವಸ್ಥೆ ಮಾಡಲಾಗಿದೆ.

ತರಬೇತಿ ಪಡೆದ ಮಹಿಳೆಯರು ಗ್ರಾ. ಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಂದಲೂ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕಸದಿಂದ ಬಂದ ಆದಾಯವನ್ನು ಸಿಬ್ಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

ಡ್ರೈವಿಂಗ್ ತರಬೇತಿ ಪಡೆದ ಮಹಿಳೆ ತುಷಾರ

ಸ್ಥಳಾವಕಾಶ ಇರುವ ಕಡೆ ಆಯಾ ಗ್ರಾ. ಪಂಚಾಯ್ತಿಗಳಲ್ಲೇ ಕಸ ವಿಲೇವಾರಿ ತಾಣಗಳನ್ನು ಗುರುತಿಸಲಾಗಿದೆ. ಇಲ್ಲದ ಕಡೆ ಎರಡು-ಮೂರು ಗ್ರಾ. ಪಂ ಸೇರಿ ಕ್ಲಸ್ಟರ್ ಮಾಡಲಾಗಿದೆ. ಸೇಲ್ ಆಗದ ಕೆಲವು ಗುಜರಿ ಸಾಮಾನುಗಳನ್ನು ಎಂಆರ್‌ಎಫ್ (ಮೆಟಿರೀಯಲ್ ರಿಕವರಿ ಫೆಸಿಲಿಟಿ)ಯಲ್ಲಿ ಸಂಗ್ರಹಿಸಿ ಬೇಡಿಕೆ ಬಂದಾಗ ಮಾರುವ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಾರದಲ್ಲಿ ಎರಡು ದಿನ ಒಂದು ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡಬೇಕು. ದೊಡ್ಡ ಗ್ರಾಮಗಳಾಗಿದ್ದರೆ ದಿನಕ್ಕೊಮ್ಮೆ ಮಾಡಲಾಗುವುದು. ಕಸ ಸಂಗ್ರಹಣೆ ಹಾಗೂ ವಿಂಗಡಣೆ, ಚಾಲಕರಿಗೆ ಆಯಾ ಗ್ರಾ. ಪಂಚಾಯತಿಗಳೇ ವೇತನ ನಿಗದಿ ಮಾಡಬಹುದು. ಖರ್ಚು, ವೆಚ್ಚ, ಆದಾಯದ ಆಧಾರದ ಮೇಲೆ ವೇತನ ನಿಗದಿಗೆ ಅವಕಾಶ ನೀಡಲಾಗಿದೆ. ಚಾಲಕರಿಗೆ ಕನಿಷ್ಠ 15 ಸಾವಿರ ರೂ. ಸಂಬಳ ನೀಡಲು ಉದ್ದೇಶಿಸಲಾಗಿದೆ.

ಡ್ರೈವಿಂಗ್ ತರಬೇತಿ ಪಡೆದ ಮಹಿಳೆ ಕುಸುಮಾಬಾಯಿ

ಖರ್ಚು, ವೆಚ್ಚ ನಿರ್ವಹಣೆಗೆ ಆಯಾ ಗ್ರಾಮಗಳಿಂದಲೇ ಆದಾಯ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ತಿಂಗಳಿಗೆ ಪ್ರತಿ ಮನೆಯಿಂದ 20 ರಿಂದ 30 ರೂಪಾಯಿ. ಅಂಗಡಿಗಳಾದರೆ 100 ರೂಗೆ ಬಾರ್. ಹೋಟೆಲ್‌ಗಳಾದರೆ 500 ರೂ.ವರೆಗೂ ವೆಚ್ಚ ಸಂಗ್ರಹ ಮಾಡಬಹುದು. ಗ್ರಾಮಗಳ ಸ್ಥಿತಿಗತಿಗೆ ತಕ್ಕಂತೆ ಕೂಡ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತದಲ್ಲಿ ಶಿವಮೊಗ್ಗ 30, ಹಾವೇರಿ, ಚಿತ್ರದುರ್ಗ 30, ರಾಯಚೂರು 31 ಮಂದಿಗೆ ಚಾಲನಾ ತರಬೇತಿ ನೀಡಲಾಗಿದೆ. ಇವರು ಈಗಾಗಲೇ ನವೆಂಬರ್ 1ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ.

ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ವಿಧಾನಸೌಧದಲ್ಲಿ ಉಪಹಾರ ಕೂಟ : ಶುಭ ಹಾರೈಸಿದ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.