ಶಿವಮೊಗ್ಗ: ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಶಕುನಿ ಇದ್ದಂತೆ ಎಂದು ಸಚಿವ ಈಶ್ವರಪ್ಪ ಟೀಕಿಸಿದ್ದಾರೆ. ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಡೆದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶೈಕ್ಷಣಿಕ ಕಾರ್ಯಾಗಾರ, ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡುವ ವೇಳೆ ಎಂಎಲ್ಸಿ ಆಯನೂರು ಮಂಜುನಾಥ್ ಒಂದು ಚೀಟಿಯಲ್ಲಿ ಬರೆದು ಸಚಿವ ಈಶ್ವರಪ್ಪನವರಿಗೆ ನೀಡಿದರು.
ಇದನ್ನು ನೋಡಿದ ತಕ್ಷಣ ಈಶ್ವರಪ್ಪ, ಇದನ್ನು ಷಡಕ್ಷರಿ ನೀಡಿದ್ದಾ ಎಂದು ಕೇಳಿದರು. ಅದಕ್ಕೆ ಷಡಕ್ಷರಿ ಅವರು ನಾನಲ್ಲ ಎನ್ನುತ್ತಿದ್ದಂತೆಯೇ, ಷಡಕ್ಷರಿ ಒಂದು ರೀತಿ ಶಕುನಿ ಇದ್ದಂತೆ. ಯಾರಿಗೆ ಎಲ್ಲಿ ಹೇಳಿ ಕೆಲಸ ಮಾಡಿಸಬೇಕು ಮಾಡಿಸುತ್ತಾರೆ ಎನ್ನುತ್ತಿದ್ದಂತೆಯೇ ಸಮಾರಂಭದಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು. ತಕ್ಷಣ ಈಶ್ವರಪ್ಪನವರು ಆ ಶಕುನಿ ಅಧರ್ಮದ ಪರವಾಗಿದ್ದ. ಈ ಷಡಕ್ಷರಿ ಧರ್ಮದ ಪರವಾಗಿದ್ದಾರೆ ಎಂದರು.
ಇದನ್ನೂ ಓದಿ: ಹಾಸನ ವಿಮಾನ ನಿಲ್ದಾಣಕ್ಕೆ ಈ ಬಾರಿ ಬಜೆಟ್ನಲ್ಲಿ ಗ್ರೀನ್ ಸಿಗ್ನಲ್ ಸಿಗುತ್ತೆ: ದೇವೇಗೌಡ