ETV Bharat / state

ಕೋವಿಡ್ ಆತಂಕ: ಬೆರಳಚ್ಚು ಹಾಜರಾತಿ ಕೈಬಿಡಲು ಕೆಪಿಸಿಎಲ್ ನೌಕರರ ಪ್ರತಿಭಟನೆ - ಜೋಗ ಜಲಪಾತ ಸುದ್ದಿ

ಈಗ ಕೋವಿಡ್ ಪ್ರಕರಣಗಳು ಹೆಚ್ವಾಗುತ್ತಲಿದ್ದು, ಬೆರಳಚ್ಚು ಹಾಜರಾತಿಯಿಂದ ಕೋವಿಡ್ ಬೇಗ ಹರಡುವ ಸಾಧ್ಯತೆ ಇದೆ. ಇದರಿಂದಾಗಿ ತಾತ್ಕಾಲಿಕವಾಗಿ ಬೆರಳಚ್ಚು ಹಾಜರಾತಿ ಸ್ಥಗಿತಗೊಳಿಸಬೇಕೆಂದು ಕೆಪಿಸಿಎಲ್ ನೌಕರರು ಆಗ್ರಹಿಸಿದ್ದಾರೆ.

kpcl-employees-protest-in-shimogga
ಕೋವಿಡ್ ಆತಂಕ: ಬೆರಳಚ್ಚು ಹಾಜರಾತಿ ಕೈಬಿಡಲು ಕೆಪಿಸಿಎಲ್ ನೌಕರರ ಪ್ರತಿಭಟನೆ
author img

By

Published : May 20, 2021, 12:42 AM IST

ಶಿವಮೊಗ್ಗ: ಬೆರಳಚ್ಚು ಹಾಜರಾತಿ ಕೈ ಬಿಡುವಂತೆ ನೌಕರರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಜೋಗದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್​​ (ಕೆಪಿಸಿಎಲ್)​ನಲ್ಲಿ‌ ನಡೆದಿದೆ.

kpcl-employees-protest-in-shimogga
ಕೆಪಿಸಿಎಲ್ ನೌಕರರ ಪ್ರತಿಭಟನೆ

ಕೋವಿಡ್ ಹಿನ್ನೆಲೆಯಲ್ಲಿ ಬೆರಳಚ್ಚು ಹಾಜರಾತಿ ಕೈ ಬಿಡುವಂತೆ ನೌಕರರ ಸಂಘದ ವತಿಯಿಂದ ಹಿಂದೆಯೇ ಮನವಿ ಮಾಡಲಾಗಿತ್ತು. ಆದರೂ ಕೂಡಾ ಕೆಪಿಸಿಎಲ್ ಅಧಿಕಾರಿಗಳು ಗಮನ ಹರಿಸದೆ ಹಾಗೆಯೇ ಬಿಟ್ಟಿದ್ದರು.

ಇದನ್ನೂ ಓದಿ: ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್​ಓ ಹೊಸ ನೀತಿಯ ಪೂರ್ಣ ಮಾಹಿತಿ

ಈಗ ಕೋವಿಡ್ ಪ್ರಕರಣಗಳು ಹೆಚ್ವಾಗುತ್ತಲಿದ್ದು, ಬೆರಳಚ್ಚು ಹಾಜರಾತಿಯಿಂದ ಕೋವಿಡ್ ಬೇಗ ಹರಡುವ ಸಾಧ್ಯತೆ ಇದೆ. ಇದರಿಂದ ಕೋವಿಡ್ ಮುಗಿಯುವ ತನಕ ಬೆರಳಚ್ಚು ಹಾಜರಾತಿಗೆ ವಿನಾಯಿತಿ ನೀಡಬೇಕೆಂದು ನೌಕರರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಕೆಪಿಸಿಎಲ್​ ಅಧಿಕಾರಿಗಳು ಭೇಟಿ‌ ನೀಡಿ ನೌಕರರ ಮನವೊಲಿಸುವ ಕಾರ್ಯ ಮಾಡಿದರು. ಆದರೂ ಕೆಲ ಕಾಲ ನೌಕರರು ತಮ್ಮ ಪಟ್ಟು ಬಿಡದೇ ಪ್ರತಿಭಟನೆ ಮುಂದುವರೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.