ಶಿವಮೊಗ್ಗ: ಕಬ್ಬಿಣದ ದರ ಏಕಾಏಕಿ 20 ಸಾವಿರ ರೂ. ತನಕ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ವೆಲ್ಡಿಂಗ್ ಅಸೋಸಿಯೇಶನ್ ಪ್ರತಿಭಟನೆ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೊರೊನಾ ಲಾಕ್ಡೌನ್ ನಂತರ ಕಬ್ಬಿಣ ಆಧರಿತ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಈ ವೇಳೆ ಏಕಾಏಕಿ ಕಬ್ಬಿಣದ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಣಕ್ಕೆ 15 ರಿಂದ 22 ಸಾವಿರ ರೂ. ತನಕ ಏರಿಕೆ ಮಾಡಿ ಗ್ರಾಹಕರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದರು.
ಈ ಹಿಂದೆ ಕಬ್ಬಿಣ ಪ್ರತಿ ಟನ್ಗೆ 30 ರಿಂದ 40 ಸಾವಿರ ರೂ.ಗೆ ಲಭ್ಯವಾಗುತ್ತಿತ್ತು. ಆದರೆ ಈಗ ಪ್ರತಿಟನ್ಗೆ 75 ಸಾವಿರ ರೂ. ತನಕ ಏರಿಕೆಯಾಗಿದೆ. ಇದರಿಂದ ಕೊರೊನಾ ಹರಡುವುದಕ್ಕಿಂತ ಮೊದಲು ಆರ್ಡರ್ ತೆಗೆದುಕೊಂಡಿದ್ದ ನಮಗೆ ತೀವ್ರ ಸಂಕಷ್ಟ ಎದುರಾಗಿದೆ. ಈ ಸಂಬಂಧ ಕೂಡಲೇ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ರಿಯಾಕ್ ಅಹಮ್ಮದ್, ರವಿಕುಮಾರ್, ಮೊಮ್ಮದ್ ರಫೀಕ್ ಸೇರಿ ಇತರರು ಹಾಜರಿದ್ದರು.