ETV Bharat / state

1,500 ಕೋಟಿ ರೂ. ವೆಚ್ಚದಲ್ಲಿ ಕ್ಷಿಪ್ರ ಕಾರ್ಯ ಪಡೆ ಘಟಕ ನಿರ್ಮಾಣ: ಗೃಹ ಸಚಿವ ಅಮಿತ್ ಶಾ - Karnataka: Union Home Minister Amit Shah lays foundation stone of Bhadravathi

ಶಿಲಾನ್ಯಾಸ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ
ಭದ್ರಾವತಿ ಕ್ಷಿಪ್ರ ಕಾರ್ಯಪಡೆ ಕೇಂದ್ರದ ಶಿಲಾನ್ಯಾಸ
author img

By

Published : Jan 16, 2021, 4:21 PM IST

Updated : Jan 16, 2021, 5:36 PM IST

16:18 January 16

ಭದ್ರಾವತಿ ಕ್ಷಿಪ್ರ ಕಾರ್ಯಪಡೆ ಕೇಂದ್ರದ ಶಿಲಾನ್ಯಾಸ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಿದರು.

ಶಿಲಾನ್ಯಾಸ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಅಡಿಪಾಯ ಹಾಕಿದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಪ್ರಹ್ಲಾದ ಜೋಶಿ, ಸಂಸದ ಬಿ.ವೈ.ರಾಘವೇಂದ್ರ ಭಾಗಿಯಾಗಿದ್ದರು.

ಆರ್​ಎಎಫ್​ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್​ಎಎಫ್​ ಸ್ಥಾಪನೆಗೆ ನನಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ಪತ್ರ ಬರೆದಿದ್ದರು. ನೀವು ಇಲ್ಲಿ ಆರ್​ಎಎಫ್​ ಘಟನಕ ಸ್ಥಾಪನೆಗೆಗ ಒಪ್ಪಿಗೆ ನೀಡಿದರೆ ನಾವು ರಾಜ್ಯ ಸರ್ಕಾರದಿಂದ ಜಾಗ ನೀಡುವುದಾಗಿ ತಿಳಿಸಿದ್ದರು. 50 ಎಕರೆ ಪ್ರದೇಶದಲ್ಲಿ ಆರ್​ಎಎಫ್ ಘಟಕ ಸ್ಥಾಪನೆಯಾಗಲಿದೆ. 1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. 97 ನೇ ಆರ್​ಎಎಫ್ ಬೆಟಾಲಿಯನ್ ಇದಾಗಿದ್ದು, 4 ರಾಜ್ಯಗಳ ವ್ಯಾಪ್ತಿಯಲ್ಲಿ 39 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಭೂಮಿ ನೀಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಉತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ: ಮೋದಿ ದೂರ ದೃಷ್ಟಿಯಿಂದ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದ್ದೇವೆ. ವಿಶ್ವದಲ್ಲಿ ನಾವು ಉತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ. ಮೋದಿ ದಿವ್ಯ ದೃಷ್ಟಿ ಕಾರಣದಿಂದ ಯಶಸ್ಸು ಕಂಡಿದ್ದೇವೆ ಎಂದು ಹೇಳಿದರು.

ವ್ಯಾಕ್ಸಿನ್​ ವಿಚಾರದಲ್ಲಿ ರಾಜಕೀಯ ಸಹಿಸಲ್ಲ: ದೇಶಾದ್ಯಂತ ಇಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೊರೊನಾ ಲಸಿಕೆ​ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ರೀತಿ ರಾಜಕೀಯ ಮಾಡಿದರೆ ನಾವು ಸಹಿಸಲ್ಲ. ದೇಶದ ಜನರಿಗೆ ಪಿಎಂ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ ಎಂದರು.

ಸಿಆರ್​ಪಿಎಫ್​ ನಮ್ಮ ಶಕ್ತಿ: ಸಿಆರ್​ಪಿಎಫ್​ ನಮ್ಮ ಶಕ್ತಿಯಾಗಿದೆ. ದೇಶದ ಮೂಲೆ ಮೂಲೆಗೆ ಸಿಆರ್​ಪಿಎಫ್​ ಹೋಗುತ್ತದೆ. ಯಾವುದೇ ಅಹಿತಕರ ಘಟನೆ ನಡೆದರೂ ಮೊದಲು ಆ ಜಾಗಕ್ಕೆ ಸಿಆರ್​ಪಿಎಫ್ ಹೋಗುತ್ತದೆ ಎಂದು ಹೇಳಿದರು.

ದೆಹಲಿಗೆ ರಾಷ್ಟ್ರೀಯ ಪೊಲೀಸ್​ ಸ್ಮಾರಕಕ್ಕೆ ಭೇಟಿ ನೀಡಿ: ಪ್ರತಿಯೊಬ್ಬರು ದೆಹಲಿಗೆ ಹೋದಾಗ ತಪ್ಪದೇ ರಾಷ್ಟ್ರೀಯ ಪೊಲೀಸ್​ ಸ್ಮಾರಕಕ್ಕೆ ಭೇಟಿ ನೀಡಿ. 5 ನಿಮಿಷ ಹುತಾತ್ಮ ಪೊಲೀರಿಗೆ ಶ್ರದ್ಧಾಂಜಲಿ ಸಲ್ಲಿಸಿ ಎಂದು ನಾನು ಕರ್ನಾಟಕದ ಜನತೆಗೆ ಮನವಿ ಮಾಡಿದರು.

ಪೊಲೀಸ್​ ಕೆಲಸ ಕಠಿಣ ಕೆಲಸ: ಸರ್ಕಾರಿ ಕೆಲಸಗಳ ಪೈಕಿ ಪೊಲೀಸ್​ ಕೆಲಸ ಅತ್ಯಂತ ಕಠಿಣ ಕೆಲಸವಾಗಿದೆ. ಪೊಲೀಸರನ್ನು ನಾವು ಬೇರೆ ದೃಷ್ಟಿಯಿಂದ ನೋಡುತ್ತೇವೆ. ಅವರಿಗೆ ಸಮಯದ ಮಿತಿಯಿಲ್ಲ. ಅವರು ಕಠಿಣ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಾರೆ. ಅವರನ್ನು ನೊಡುವ ದೃಷ್ಟಿಕೋನ ಬದಲಾಗಬೇಕು ಎಂದರು.

ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ: ಇನ್ನು ಮುಂದೆ ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದಲ್ಲಿ ಸ್ವದೇಶಿ ವಸ್ತುಗಳು ಮಾತ್ರ ಸಿಗುತ್ತವೆ. ಲೋಕಲ್​ ಫಾರ್​ ವೋಕಲ್​ ಎಂದು ಮೋದಿ ಕರೆ ನೀಡಿದ್ದಾರೆ. ಒಂದು ವೇಳೆ ಭಾರತೀಯರೆಲ್ಲರೂ ನಾವು ದೇಶೀಯ ವಸ್ತುಗಳನ್ನೇ ಬಳಸಿದರೆ ನಮ್ಮ ದೇಶ ಹೊಸ ಇತಿಹಾಸ ಬರೆಯುತ್ತದೆ. ನಾವೆಲ್ಲರೂ ಸ್ವದೇಶಿ ವಸ್ತುಗಳಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡ ಬೇಕು ಎಂದು ಕರೆ ನೀಡಿದರು.

ರಕ್ಷಣಾ ವಿವಿ ಸ್ಥಾಪನೆ: ರಾಷ್ಟ್ರೀಯ ಫೋರೆನ್ಸಿಕ್​ ವಿಶ್ವ ವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ. ರಕ್ಷಣಾ ವಿಶ್ವ ವಿದ್ಯಾಲಯ ಸ್ಥಾಪನೆಗೂ ಒಪ್ಪಿಗೆ ಸಿಕ್ಕಿದೆ. ಈ ಎರಡೂ ವಿವಿಗಳ ಜತೆ ಕರ್ನಾಟಕ ಸಂಯೋಜನೆ ಮಾಡಿಕೊಳ್ಳಲಿ ಎಂದರು.

ಹುತಾತ್ಮ ಆರ್​ಎಎಫ್​ ಯೋಧರಿಗೆ ಪರಿಹಾರ: ಆರ್​ಎಎಫ್​ ಯೋಧರು ಹುತಾತ್ಮರಾದರೆ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.

Last Updated : Jan 16, 2021, 5:36 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.