ಶಿವಮೊಗ್ಗ : ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮ ಅಸಮರ್ಪಕ. ಇದನ್ನು ಸರಿಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರವು ಶಿಕ್ಷಕರಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವುದಕ್ಕಿಂತ ಮುಂಚಿತವಾಗಿ, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ಮಾಡಿ, ಶಿಕ್ಷಕರಿಗೆ ಅನುಕೂಲಕರ ನಿಯಮಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ, ಸರ್ಕಾರ ಇದ್ಯಾವುದನ್ನು ಯೋಚಿಸದೆ, ಸರ್ಕಾರಿ ವರ್ಗಾವಣೆ ಕರಡು ನಿಯಮ 2020ರ ಅಂಶ 24ರಲ್ಲಿ ಇಲಾಖೆಯ ಪರಸ್ಪರ ವರ್ಗಾವಣೆಯಲ್ಲಿ ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ಪರಸ್ಪರ ವರ್ಗಾವಣೆಗೆ ಅವಕಾಶವೆಂದು ಪರಿಗಣಿಸಿರುವುದು ಸರಿಯಲ್ಲ.
ಹಾಗಾಗಿ ಪರಸ್ಪರ ವರ್ಗಾವಣೆ ಒಮ್ಮೆ ಮಾತ್ರ ಎಂಬ ನಿಯಮಕ್ಕೆ ತಿದ್ದುಪಡಿ ತಂದು ಪರಸ್ಪರ ವರ್ಗಾವಣೆಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.