ETV Bharat / state

ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

ರಾಜ್ಯದ ವಿವಿಧೆಡೆ ಇಂದು ಬೆಳಗ್ಗಿನಿಂದ ಲೋಕಾಯುಕ್ತ ದಾಳಿ ನಡೆಯುತ್ತಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಲವು ಸರ್ಕಾರಿ ಅಧಿಕಾರಿಗಳ ನಿವಾಸಗಳಲ್ಲಿ ದಾಖಲೆಗಳ ಶೋಧ ಕಾರ್ಯ ನಡೆಯುತ್ತಿದೆ.

Karnataka Lokayukta raids
ಲೋಕಾಯುಕ್ತ ದಾಳಿ
author img

By

Published : May 31, 2023, 8:59 AM IST

Updated : May 31, 2023, 3:31 PM IST

ಶಿವಮೊಗ್ಗ: ರಾಜ್ಯದಲ್ಲಿ ಇಂದು ಬೆಳಗ್ಗಿನಿಂದಲೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಬೇಟೆ ಶುರು ಮಾಡಿದ್ದಾರೆ. ಶಿವಮೊಗ್ಗ, ತುಮಕೂರು, ಹಾವೇರಿ ಹಾಗೂ ಕಲಬುರಗಿಯಲ್ಲಿ ತನಿಖಾಧಿಕಾರಿಗಳು ಸರ್ಕಾರಿ ಅಧಿಕಾರಿಗಳ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದಾಳಿಗೊಳಗಾದ ಅಧಿಕಾರಿಗಳು ಯಾರು? ಸಿಕ್ಕಿದ್ದೇನು? ಈವರೆಗಿನ ಮಾಹಿತಿ ಇಲ್ಲಿದೆ.

ಶಿವಮೊಗ್ಗದಲ್ಲಿ ಇಬ್ಬರು ಇಂಜಿನಿಯರ್‌ಗಳ ಮನೆಗಳ ಮೇಲೆ ದಾಳಿ: ಅಕ್ರಮ ಆಸ್ತಿಗಳಿಕೆ ಆರೋಪದ‌ ಮೇಲೆ ಶಿವಮೊಗ್ಗ ಜಿಲ್ಲೆಯ ಇಬ್ಬರು ಇಂಜಿನಿಯರ್​​ಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರ್ ಶಂಕರ ನಾಯ್ಕ್ ಮನೆ ಮೇಲೆ ಶೋಧ ನಡೆದಿದೆ.

ಪ್ರಶಾಂತ್ ಅವರ ಶಿವಮೊಗ್ಗದ ಹೊಸಮನೆ 3ನೇ ಮುಖ್ಯ ರಸ್ತೆಯ ಕೆ.ಹೆಚ್.ಬಿ ಕಾಲೋನಿಯ ವಾಸದ ಮನೆ, ಭದ್ರಾವತಿ ತಾಲೂಕು ಶೆಟ್ಟಿಹಳ್ಳಿಯ ಎರಡು ತೋಟದ ಮನೆಯ ಮೇಲೆ ದಾಳಿ‌ ನಡೆಸಲಾಗಿದೆ. ಇವರಿಗೆ ಶೆಟ್ಟಿಹಳ್ಳಿಯಲ್ಲಿ ಒಟ್ಟು 8 ಎಕರೆ ಅಡಿಕೆ ತೋಟವಿದೆ. ಇಲ್ಲಿನ ಎರಡು ಮನೆಗಳ‌ ಮೇಲೆ ದಾಳಿ ನಡೆಸಲಾಗಿದೆ. ಶರಾವತಿ ನಗರದ ಬಿ ಬ್ಲಾಕ್​​ನ ಪ್ರಶಾಂತ್ ಪತ್ನಿಯ ತಮ್ಮ ನಾಗೇಶ್ ಅವರ ಮನೆ ಮೇಲೆಯೂ ದಾಳಿ‌ ನಡೆದಿದೆ. ಪ್ರಶಾಂತ್ ಅವರು ಕಾರ್ಯ ನಿರ್ವಹಿಸುತ್ತಿರುವ ಸಾಗರ ರಸ್ತೆಯ ತುಂಗಾ ಮೇಲ್ದಂಡೆ ಕಚೇರಿಯ ಮೇಲೆ, ಪ್ರಶಾಂತ್ ಅವರ ಪತ್ನಿ ತಮ್ಮನ ಮನೆ, ತೋಟದ ಮನೆ ಹಾಗೂ ಕಚೇರಿ ಸೇರಿ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ.

ಜಿಲ್ಲಾ ಪಂಚಾಯತ್​ ಜ್ಯೂನಿಯರ್ ಇಂಜಿನಿಯರ್ ಶಂಕರ ನಾಯ್ಕ್ ಅವರ ಮನೆ ಮೇಲೂ ದಾಳಿಯಾಗಿದೆ. ಶಂಕರ ನಾಯ್ಕ್ ಅವರ ಮನೆ ಸೇರಿದಂತೆ ಒಟ್ಟು 3 ಕಡೆ ಶಿಕಾರಿಪುರದಲ್ಲಿ ದಾಳಿ‌ ನಡೆಸಲಾಗಿದೆ. ಅಕ್ರಮ ಆಸ್ತಿಗಳಿಗೆ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ಲೋಕಾಯುಕ್ತ ಎಸ್​ಪಿ ವಾಸುದೇವರಾಮ್ ಅವರ ನೇತೃತ್ವದಲ್ಲಿ ಬೆಳಗ್ಗೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಲೋಕಾಯುಕ್ತ ಡಿವೈಎಸ್​ಪಿ ಈಶ್ವರ್ ಉಮೇಶ್ ನಾಯಕ್ ಹಾಗೂ ಲೋಕಾಯುಕ್ತ ಸಿಪಿಐ ಮೃತ್ಯುಂಜಯ ಅವರು ದಾಳಿಯಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಇಂಜಿಯರ್ ಮನೆ ಸೇರಿದಂತೆ ಒಟ್ಟು 8 ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂದು ಎಸ್​ಪಿ ವಾಸುದೇವರಾಮ್ ತಿಳಿಸಿದ್ದಾರೆ.

ಕೆಜಿಗಟ್ಟಲೆ ಚಿನ್ನಾಭರಣ ಪತ್ತೆ: ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಅವರ ಮನೆಯಲ್ಲಿ ಕೆ.ಜಿ ಗಟ್ಟಲೆ ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಲಭ್ಯವಾಗಿವೆ. ಇವರ ಹೆಸರಿನಲ್ಲಿ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಎಂಜಿ ಹೆಕ್ಟರ್, ಮಹೇಂದ್ರ ಥಾರ್ ಜೀಪ್, ಹೂಂಡಾ ಸಿಟಿ ಕಾರು, ಇವರು ಪತ್ನಿ ತಮ್ಮನ ನಾಗೇಶ್ ಅವರ ಮನೆಯಲ್ಲಿ ಎಂಜಿ ಹೆಕ್ಟರ್ ಕಾರು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇಬ್ಬರು ಇಂಜಿನಿಯರ್​ಗಳ ಮೇಲೆ ಅಕ್ರಮ ಆಸ್ತಿಗಳಿಗೆ ಆರೋಪದ ದೂರು ಬಂದ ತಕ್ಷಣ ಇಬ್ಬರ ಆಸ್ತಿ ಸೇರಿದಂತೆ ಇತರೆ ವಸ್ತುಗಳ ಕುರಿತು ದಾಖಲೆ ಸಂಗ್ರಹಿಸಿ ದಾಳಿ ನಡೆಸಲಾಗಿದೆ.

ತುಮಕೂರಿನಲ್ಲಿ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ: ಜಿಲ್ಲೆಯ ಆರ್.ಟಿ. ನಗರದಲ್ಲಿರುವ ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಎಂಬವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಧಿಕಾರಿಗಳು ಸುದೀರ್ಘವಾಗಿ ಕಾಗದ ಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಅವುಗಳನ್ನು ತೂಕ ಮಾಡುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ

ಬೆಳಗ್ಗೆ ಸುಮಾರು ಐದು ವಾಹನಗಳಲ್ಲಿ ದಿಢೀರ್ ಆಗಮಿಸಿದ ಲೋಕಾಯುಕ್ತ ಡಿಎಸ್​​ಪಿಗಳಾದ ಮಂಜುನಾಥ್ ಹಾಗೂ ಹರೀಶ್ ತಂಡದಿಂದ ಶೋಧ ನಡೆಯುತ್ತಿದೆ. ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಾಹ್ನದವರೆಗೆ ಪರಿಶೀಲನೆ ಕಾರ್ಯ ಮುಂದುವರೆಯಲಿದೆ ಎಂದು ಲೋಕಾಯುಕ್ತ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಹಲವು ದಿನಗಳಿಂದ ಅಧಿಕಾರಿ ನರಸಿಂಹಮೂರ್ತಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದವು. ಪದೇ ಪದೇ ಇಂತಹ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಹಾವೇರಿಯಲ್ಲಿ ಇಂಜಿನಿಯರ್‌ ಮನೆ ಮೇಲೆ ದಾಳಿ: ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಅವರ ಮನೆ ಮತ್ತು ಕಚೇರಿ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ರಾಣೆಬೆನ್ನೂರು ನಗರದ ನಿವಾಸ ಮತ್ತು ಹಾವೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ನಿರ್ಮಿತಿ ಕೇಂದ್ರದ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

  • #WATCH | Karnataka: Lokayukta conducts a raid at the premises of the Sub Division project engineer of Nirmithi Kendra in Ranebennur, Haveri district. pic.twitter.com/VuZ4tCFKRh

    — ANI (@ANI) May 31, 2023 " class="align-text-top noRightClick twitterSection" data=" ">

ದಾಳಿ ವೇಳೆ ಕೊಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ದಾಖಲೆಗಳು ಪತ್ತೆಯಾಗಿವೆ. ಅರ್ಧ ಕೆಜಿ ಬಂಗಾರ, 2 ಕೆಜಿ ಬೆಳ್ಳಿ, 18.30 ಲಕ್ಷ ನಗದು, ಹಣ ಎಣಿಕೆ ಮಾಡುವ ಯಂತ್ರ ದೊರೆತಿದೆ. ಅಲ್ಲದೇ 3 ಕಾರು, 2 ಟ್ರ್ಯಾಕ್ಟರ್, 2 ಬೈಕ್, 8 ಮನೆ, ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 16 ಸೈಟ್, 65 ಎಕರೆ ಭೂಮಿ ಹೊಂದಿರುವ ದಾಖಲೆಗಳು ಕೂಡ ಪತ್ತೆಯಾಗಿವೆ. 10 ಇಂಚಿನ ಜಿಂಕೆ ಕೊಂಬು ಕೂಡ ಪತ್ತೆಯಾಗಿದ್ದು ಒಟ್ಟು 4.75 ಕೋಟಿ ರೂಪಾಯಿಯ ಆಸ್ತಿ ಪತ್ತೆಯಾಗಿದೆ.

ಕಲಬುರಗಿಯಲ್ಲಿ ಕೆಆರ್​ಐಡಿಎಲ್ ಅಧಿಕಾರಿ ಮನೆ ಮೇಲೆ ದಾಳಿ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್​ಐಡಿಎಲ್​) ಕಲಬುರಗಿಯ ಇಂಚಾರ್ಜ್ ಹಾಗೂ ಕೊಪ್ಪಳ ಜಿಲ್ಲೆಯ ಕೆಆರ್​ಐಡಿಎಲ್​ ಕಾರ್ಯನಿರ್ವಾಹಕ ಇಂಜಿನಿಯರ್(EE)​ ಝರಣಪ್ಪ ಚಿಂಚೋಳಿಕರ್ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ವಿರೇಂದ್ರ ಪಾಟೀಲ್ ಬಡಾವಣೆಯ 3 ಫೇಸ್, ನಿರ್ಮಾಣ ಹಂತದ ಮನೆ ಮೇಲೆ ಲೋಕಾಯುಕ್ತ ಡಿವೈಎಸ್​ಪಿ ಮಂಜುನಾಥ ಗಂಗಲ್, ಇನ್ಸ್​ಪೆಕ್ಟರ್​ ಧ್ರುವತಾರಾ ನೇತೃತ್ವದಲ್ಲಿ 10 ಜನರ ತಂಡದಿಂದ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಗೆ ನಿರ್ಮಾಣ ಹಂತದ ಕಟ್ಟದ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ವಿಚಾರಣೆಯಲ್ಲಿ ತೊಡಗಿದ್ದಾರೆ. ಮೂಲತಃ ಬೀದರ್ ಜಿಲ್ಲೆಯ ಹುಮನಬಾದ್ ತಾಲೂಕಿನ ಚಿಟಗುಪ್ಪ ನಿವಾಸಿಯಾದ ಚಿಂಚೋಳಿಕರ್, ಬೀದರ್ ನಗರದ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ: 8 ಮಂದಿ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್​.. ಕೆಜಿಗಟ್ಟಲೇ ಚಿನ್ನಾಭರಣ, ಕಣ್ಣಾಯಿಸಿದಲ್ಲೆಲ್ಲಾ ನಿವೇಶನ ಪತ್ತೆ!

Last Updated : May 31, 2023, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.