ಶಿವಮೊಗ್ಗ: ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಇಂದು ಕುವೆಂಪು ರಂಗಮಂದಿರದಲ್ಲಿ ನಡೆದ ಕನಕದಾಸರ ಜಯಂತಿ ಉದ್ಟಾಟಿಸಿ ಮಾತನಾಡಿದ ಅವರು, ಕುಲ ಕುಲವೆಂದು ಹೊಡೆದಾಡದೆ, ನಿಮ್ಮ ಕುಲದ ನೆಲೆಯನ್ನು ಏನಾದರೂ ಬಲ್ಲಿರಾ ಎಂದು ಹೇಳುವ ಮೂಲಕ ಜಾತಿಗಳೆಲ್ಲಾ ಒಂದಾಗಬೇಕೆಂದು ಎಂದು ಅವರು 535 ವರ್ಷಗಳ ಹಿಂದೆಯೇ ತಿಳಿಸಿದ್ದರು. ಜಾತಿ ಕುಲದಿಂದ ಹೊರ ಬರಬೇಕು ಎಂದ ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ ಎಂದರು.
ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರು: ಕೆ.ಎಸ್.ಈಶ್ವರಪ್ಪ - ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಉಮೇಶ್
ಇಂದಿಗೂ ಜಾತಿ ವ್ಯವಸ್ಥೆ ಮುಂದುವರಿಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಪಂಚ ಇದನ್ಮು ಗೌರವಿಸುವುದಿಲ್ಲ. ಇದೇ ವ್ಯವಸ್ಥೆ ಮುಂದುವರಿದರೆ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲದ ಹಾಗೆ ಆಗುತ್ತದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರು: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಇಂದು ಕುವೆಂಪು ರಂಗಮಂದಿರದಲ್ಲಿ ನಡೆದ ಕನಕದಾಸರ ಜಯಂತಿ ಉದ್ಟಾಟಿಸಿ ಮಾತನಾಡಿದ ಅವರು, ಕುಲ ಕುಲವೆಂದು ಹೊಡೆದಾಡದೆ, ನಿಮ್ಮ ಕುಲದ ನೆಲೆಯನ್ನು ಏನಾದರೂ ಬಲ್ಲಿರಾ ಎಂದು ಹೇಳುವ ಮೂಲಕ ಜಾತಿಗಳೆಲ್ಲಾ ಒಂದಾಗಬೇಕೆಂದು ಎಂದು ಅವರು 535 ವರ್ಷಗಳ ಹಿಂದೆಯೇ ತಿಳಿಸಿದ್ದರು. ಜಾತಿ ಕುಲದಿಂದ ಹೊರ ಬರಬೇಕು ಎಂದ ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ ಎಂದರು.
ಕನಕದಾಸರು ಹಿಂದುತ್ವದ ಮೊದಲ ಪ್ರತಿಪಾದಕರು: ಕೆ.ಎಸ್.ಈಶ್ವರಪ್ಪ
ಇನ್ನೂ ಕನಕದಾಸ ಜಯಂತಿ ಆಚರಣೆ ಹಾಗೂ ರಜೆಯನ್ನು ನಮ್ಮ ನಾಯಕರಾದ ಯಡಿಯೂರಪ್ಪ ಜಾರಿಗೆ ತಂದರು. ಇದನ್ನು ಕಲ್ಬುರ್ಗಿಯಲ್ಲಿ ನಡೆದ ಮಂತ್ರಿ ಮಂಡಲ ಸಭೆಯಲ್ಲಿ ತೀರ್ಮಾನ ಮಾಡಿ ಘೋಷಣೆ ಮಾಡಿದ್ದನ್ನೂ ನೆನಪಿಸಿಕೊಂಡರು.
ಕನಕ ಜಯಂತಿಯಂದು ಸರ್ಕಾರಿ ದಿನಾಚರಣೆ ಆಚರಣೆ ನಡೆಸಿ, ಆದರೆ ರಜೆ ರದ್ದು :ಇದಕ್ಕೂ ಮುನ್ನ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರವರು, ಕನಕದಾಸರ ಚಿಂತನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಜಯಂತಿ ಆಚರಣೆಗೂ ಸಾರ್ಥಕತೆ ಬರುತ್ತದೆ ಎಂದರು.
ಕಾಗಿನೆಲೆ ಶ್ರೀಗಳು ಕನಕ ಜಯಂತಿಯಂದು ಸರ್ಕಾರಿ ದಿನಾಚರಣೆ ಆಚರಣೆ ನಡೆಸಿ, ಆದರೆ ರಜೆ ರದ್ದು ಮಾಡಿ ಎಂದು ತಿಳಿಸಿದ್ದಾರೆ. ಈ ವೇಳೆ ಮಾಜಿ ಎಂಎಲ್ಸಿ ಆರ್.ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಉಮೇಶ್ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.