ಶಿವಮೊಗ್ಗ: ನಿನ್ನೆ ರಾತ್ರಿ 10.20ರ ಸಮಯದಲ್ಲಿ ಜಿಲ್ಲಾದ್ಯಂತ ಉಂಟಾದ ಬಾರಿ ಕಂಪನದ ಹಿನ್ನೆಲೆಯಲ್ಲಿ ಭದ್ರಾ ಅಣೆಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ತೆರಳಿ ಭದ್ರಾ ಜಲಾಶಯವನ್ನು ವೀಕ್ಷಣೆ ಮಾಡಿ ಜಲಾಶಯದ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಭದ್ರಾ ಕಾಡ ಪ್ರಾಧಿಕಾರವು 12 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಭದ್ರಾ ಜಲಾಶಯವು ಸುಮಾರು 5 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯಾಜನೆಯಾಗಿದೆ. ಲಕ್ಷಾಂತರ ರೈತರಿಗೆ ಭದ್ರಾ ಜಲಾಶಯವು ಜೀವನಾಡಿಯಾಗಿದ್ದು ಅಣೆಕಟ್ಟು ಭಾಗದ ರೈತರು ಇದನ್ನೇ ನಂಬಿ ಬದುಕುತ್ತಿದ್ದಾರೆ, ಹಾಗಾಗಿ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು ಭೂ ಕಂಪನದಿಂದ ಯಾವುದೇ ರೀತಿಯಲ್ಲಿ ಜಲಾಶಯಕ್ಕೆ ತೊಂದರೆಯಾಗುವುದಿಲ್ಲ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಓದಿ : ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... ಎಂಟು ಸಾವು, ಮೃತರ ಸಂಖ್ಯೆ ಹೆಚ್ಚಾಗುವ ಶಂಕೆ!