ETV Bharat / state

ಜೆಡಿಎಸ್​ ಕುಟುಂಬ ರಾಜಕಾರಣ ಅಂತ್ಯ: ಬಿ.ಜೆ ಪುಟ್ಟಸ್ವಾಮಿ ಭವಿಷ್ಯ - ಜೆಡಿಎಸ್​

ರಾಜ್ಯದಲ್ಲಿ ಜೆಡಿಎಸ್​ ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಬಿ.ಜೆ ಪುಟ್ಟಸ್ವಾಮಿ
author img

By

Published : Apr 19, 2019, 7:44 PM IST

ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ದೇವಗೌಡರ ಕುಟುಂಬ ಆಡಳಿತ ಅಂತ್ಯವಾಗುವ ಜೊತೆಗೆ ಜೆಡಿಎಸ್ ಪಕ್ಷವು ಅಂತ್ಯವಾಗುತ್ತದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ರಾಜ್ಯದ ಕೆಲವು ಜಿಲ್ಲೆಗಳನ್ನು ದೇವೇಗೌಡರ ಫ್ಯಾಮಿಲಿ ಸಂಸ್ಥಾನ ಮಾಡಿಕೊಳ್ಳಲು ಹೊರಟಿದೆ. ಹಿಂದೆ ರಾಜಮನೆತನಗಳ ಆಡಳಿತವಿದ್ದಾಗ ಸಂಸ್ಥಾನಗಳನ್ನ ಕುಟುಂಬದ ಸದಸ್ಯರು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅದೇ ರೀತಿ ಈಗ ದೇವೇಗೌಡರು ಮಾಡಲು ಹೊರಟಿದ್ದು,
ಹಾಸನಕ್ಕೆ ಪ್ರಜ್ವಲ್​ ರೇವಣ್ಣ,ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿಗೆ ಹಾಗೂ ತುಮಕೂರನ್ನು ಮುಂದಿನ ದಿನಗಳಲ್ಲಿ ಬಾಲಕೃಷ್ಣರಿಗೆ ಬಿಟ್ಟು ಕೊಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿ.ಜೆ ಪುಟ್ಟಸ್ವಾಮಿ

ಹಿಂದುಳಿದ ವರ್ಗ ಈ ಬಾರಿ ಬಿಜೆಪಿ ಪರವಾಗಿದ್ದು, ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಹೆಚ್ಚಿನ ಮತಗಳ ಅಂತರದಲ್ಲಿ ಬಿ.ವೈ ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಗಳಾಗಿದ್ದಾಗ ಹಿಂದೂಳಿದ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರು ಎಂದರು.

Intro:ಶಿವಮೊಗ್ಗ,
ರಾಜ್ಯದ ಕೆಲವು ಜಿಲ್ಲೆಗಳನ್ನು ದೇವೇಗೌಡರ ಫ್ಯಾಮಿಲಿ ಸಂಸ್ಥಾನ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿಜೆ ಪುಟ್ಟಸ್ವಾಮಿ ಆರೋಪಿಸಿದರು.

Body:ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕೆಲವು ಜಿಲ್ಲೆಗಳನ್ನು ದೇವೇಗೌಡರು ಫ್ಯಾಮಿಲಿ ಸಂಸ್ಥಾನ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಹಿಂದೆ ರಾಜಮನೆತನಗಳ ಆಡಳಿತವಿದ್ದಾಗ ಸಂಸ್ಥಾನಗಳನ್ನ ಕುಟುಂಬದ ಸದಸ್ಯರು ಪರಸ್ಪರ ಹಂಚಿ ಕೊಳ್ಳುತ್ತಿದ್ದರು .
ಅದೇ ರೀತಿ ಈಗ ದೇವೇಗೌಡರು ಮಾಡಲು ಹೊರಟಿದ್ದಾರೆ.
ಹಾಸನಕ್ಕೆ ರೇವಣ್ಣನಿಗೆ ,ಮಂಡ್ಯ ನಿಖಿಲ್ ಕುಮಾರಸ್ವಾಮಿಗೂ ,ಹಾಗೂ ತುಮಕೂರನ್ನು ಮುಂದಿನ ದಿನಗಳಲ್ಲಿ ಬಾಲಕೃಷ್ಣ ರಿಗೆ ಬಿಟ್ಟು ಕೊಡಲಿದ್ದಾರೆ ಎಂದು ಟೀಕಿಸಿದರು.
ಈ ಭಾರಿಯ ಚುನಾವಣೆ ಯಲ್ಲಿ ದೇವಗೌಡರ ಕುಟುಂಬ ಆಡಳಿತ ಅಂತ್ಯ ಆಗುವ ಜೊತೆಗೆ ಜೆಡಿಎಸ್ ಪಕ್ಷವು ಅಂತ್ಯ ಆಗುತ್ತದೆ ಎಂದು ಭವಿಷ್ಯ ನುಡಿದರು.

Conclusion:ನಂತರದಲ್ಲಿ ಮಾತನಾಡಿದ ಅವರು ಹಿಂದುಳಿದ ವರ್ಗ ಈ ಬಾರಿ ಬಿಜೆಪಿ ಪರ ಇರುವುದರಿಂದ ಹೆಚ್ಚಿನ ಮತಗಳ ಅಂತರದಲ್ಲಿ ರಾಘವೇಂದ್ರ ಅವರು ಗೆಲುವು ಸಾಧಿಸಲಿದ್ದಾರೆ ಎಂದರೂ .
ಬಿ.ವೈ ರಾಘವೇಂದ್ರ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಮಾದರಿ ಆಗಿದ್ದಾರೆ ಹಾಗೂ ಯಡಿಯೂರಪ್ಪ ನವರು ಮುಖ್ಯ ಮಂತ್ರಿ ಗಳಾಗಿದ್ದ ಸಮಯದಲ್ಲಿ ಹಿಂದೂಳಿದ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಹಿಂದೂಳಿದ ವರ್ಗಗಳಿಗೂ ಸ್ಥಾನಮಾನಗಳನ್ನ ನೀಡಿದ್ದಾರೆ .ಎಂದರು
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.