ETV Bharat / state

ಸಚಿವ ಈಶ್ವರಪ್ಪರಿಂದ ಸ್ಲಂ ನಿವಾಸಿಗಳಿಗೆ ಪರಿಚಯ ಪತ್ರ ವಿತರಣೆ - ಶಿವಮೊಗ್ಗ ನಗರ ಶಾಸಕರಾದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ರೈಲ್ವೆ ನಿಲ್ದಾಣ ಪಕ್ಕದ ಅಮೀರ್ ಅಹ್ಮದ್ ಕಾಲೋನಿ ನಿವಾಸಿಗಳಿಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪರಿಚಯಪತ್ರ ವಿತರಣೆ ಮಾಡಿದ್ದು, ಸಾಧ್ಯವಾದಷ್ಟು ಬೇಗ ಹಕ್ಕು ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.

Minister Eshwarappa
ಸಚಿವ ಈಶ್ವರಪ್ಪರಿಂದ ಸ್ಲಂ ನಿವಾಸಿಗಳಿಗೆ ಪರಿಚಯ ಪತ್ರ ವಿತರಣೆ
author img

By

Published : Nov 22, 2020, 12:42 PM IST

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಿವಮೊಗ್ಗ ನಗರ ಶಾಸಕರಾದ ಕೆ.ಎಸ್. ಈಶ್ವರಪ್ಪ ಇಂದು ಅಮೀರ್ ಅಹ್ಮದ್ ಕಾಲೋನಿಯ ಸ್ಲಂ‌ ನಿವಾಸಿಗಳಿಗೆ ಪರಿಚಯ ಪತ್ರವನ್ನು ವಿತರಿಸಿದರು.

ಶಿವಮೊಗ್ಗ ರೈಲ್ವೆ ನಿಲ್ದಾಣ ಪಕ್ಕದ ಅಮೀರ್ ಅಹ್ಮದ್ ಕಾಲೋನಿಯು ಬಸವನಗುಡಿ ವಾರ್ಡ್ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ. ಇಲ್ಲಿನ ನಿವಾಸಿಗಳು ತಮಗೆ ಹಕ್ಕುಪತ್ರ ನೀಡಬೇಕೆಂದು ಸಾಕಷ್ಟು ಹೋರಾಟ ನಡೆಸಿದ್ದು, ಅದರ ಫಲವಾಗಿ ಈಗ ಸರ್ಕಾರ ಪರಿಚಯ ಪತ್ರವನ್ನು ನೀಡಿದೆ.

ಶೀಘ್ರದಲ್ಲಿಯೇ ಇಲ್ಲಿನ ಎಲ್ಲಾ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲಾಗುವುದು. ಅಲ್ಲದೆ, ಹಕ್ಕುಪತ್ರ ವಿತರಣೆಗೆ ಇರುವ ತೊಡಕನ್ನು ನಿವಾರಿಸಿ ನಿವಾಸಿಗಳಿಗೆ ಬೇಗನೆ ಹಕ್ಕು ಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳಿಧರ್ ಹಾಗೂ ಕಾರ್ಪೊರೇಟರ್ ರಮೇಶ್ ಹೆಗ್ಡೆ ಸೇರಿದಂತೆ ಇತರರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.