ETV Bharat / state

ಬಡ ರೋಗಿಗಳ ಪಾಲಿಗೆ ವರದಾನವಾದ ಜೆನರಿಕ್‌ ಔಷಧ

author img

By

Published : Dec 28, 2020, 5:21 PM IST

ಆರ್ಥಿಕ ದುರ್ಬಲರಿಗಾಗಿಯೇ ಆರಂಭಿಸಲಾಗಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ.

generic-drugs
ಜೆನರಿಕ್‌ ಔಷಧ

ಶಿವಮೊಗ್ಗ: ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಜಿಲ್ಲಾ ಮೆಗ್ಗಾನ್ ಬೋಧನಾಸ್ಪತ್ರೆಯ ಆವರಣದಲ್ಲಿ ಜನೌಷಧ ಕೇಂದ್ರವಿದ್ದು, ಪ್ರಾರಂಭವಾಗಿ ನಾಲ್ಕು ವರ್ಷಗಳಾಗಿವೆ. ಈ ಕೇಂದ್ರ ಬಡವರ ಪಾಲಿಕೆ ವರದಾನವಾಗಿದೆ.

ಪ್ರಸಿದ್ಧ ಔಷಧ ಕಂಪನಿಗಳು ತಮ್ಮ ಔಷಧ ಮಾರಾಟಕ್ಕೆ ಹಲವು ದಾರಿ ಹಿಡಿಯುತ್ತಿದ್ದು, ಬೇರೆ ಕಂಪನಿಗಳ ಔಷಧಗಳ ದರಕ್ಕಿಂತ‌ ಜನೌಷಧ ಕೇಂದ್ರದಲ್ಲಿ ಶೇ. 20-80ರಷ್ಟು ಕಡಿಮೆ ದರದಲ್ಲಿ ಔಷಧ ದೊರೆಯುತ್ತದೆ.‌ ಜೆನರಿಕ್​ ಔಷಧ ಕೇಂದ್ರಗಳ ಔಷಧಗಳಿಗೆ ಆರಂಭದಲ್ಲಿ ಇವು ಗುಣಮಟ್ಟ ಹೊಂದಿವೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು. ಅಲ್ಲದೆ, ಊಹಾಪೋಹಗಳು ಇದ್ದವು. ಕೊರೊನಾ ನಂತರ ಅದಕ್ಕೆಲ್ಲಾ ತೆರೆ ಬಿದ್ದಿದೆ.

ಇದನ್ನೂ ಓದಿ...ಸಂಕ್ರಾಂತಿಯ ನಂತರ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಇರಲ್ಲ : ಬೇಳೂರು ಗೋಪಾಲಕೃಷ್ಣ

ಕೋವಿಡ್​ ಅವಧಿಯಲ್ಲಿ ಕಡಿಮೆ ದರಕ್ಕೆ ಮತ್ತು ಗುಣಮಟ್ಟದ ಔಷಧ ಲಭ್ಯವಾದ ಕಾರಣ ಈ ಔಷಧ ಮೇಲೆ ವಿಶ್ವಾಸ ಹೆಚ್ಚಾಯಿತು. ಅಲ್ಲದೆ, ಬೇಡಿಕೆಯೂ ದುಪ್ಪಟ್ಟಾಯಿತು ಎನ್ನುತ್ತಾರೆ ಜನೌಷಧ ಕೇಂದ್ರದ ಉಸ್ತುವಾರಿ ಮೀರ್ ವಸಿಉಲ್ ರೆಹಮಾನ್. ಕಡಿಮೆ ದರಕ್ಕೆ ಔಷಧ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

ಜೆನರಿಕ್‌ ಔಷಧದ ಕುರಿತು ಅಭಿಪ್ರಾಯ

ಜಿಲ್ಲೆಯಲ್ಲಿ ಮೆಡಿಕಲ್​ ಮಾಫಿಯಾ ನಡೆಯುತ್ತಿದೆ ಎಂಬ ಮಾತುಗಳು ಜೋರಿವೆ. ಖಾಸಗಿ ವೈದ್ಯರ ಮಾತಿಗೆ ಕಟ್ಟು ಬಿದ್ದು ಎಷ್ಟೋ ಮಂದಿ ದುಬಾರಿ ಔಷಧಗಳ ಮೊರೆ ಹೋಗುತ್ತಿದ್ದಾರೆ. ಕೋವಿಡ್​​ನಿಂದಾಗಿ ಸಣ್ಣ ಪ್ರಮಾಣದಲ್ಲಿದ್ದ ಮೆಡಿಕಲ್​ ಮಾಫಿಯಾ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.