ಶಿವಮೊಗ್ಗ: ಬಿಜೆಪಿ ರಾಜ್ಯದಲ್ಲಿ 2023ರಲ್ಲಿ ಅಧಿಕಾರಕ್ಕೆ ಬರಬೇಕಾದರೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಎಂಎಲ್ಸಿ ಹೆಚ್.ವಿಶ್ವನಾಥ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಮೊಗ್ಗ ನಗರ ನಾಗರೀಕ ವೇದಿಕೆ ಬಿಜೆಪಿ ಹೈ ಕಮಾಂಡ್ಗೆ ಆಗ್ರಹಿಸಿದೆ.
ಈ ಕುರಿತು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರವರು ಮಾಧ್ಯಮಗಳ ಮುಂದೆ ಕ್ರಮ ತೆಗೆದುಕೊಳ್ಳು ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ. ಬಿಎಸ್ವೈ ಕಳೆದ 50 ವರ್ಷಗಳಿಂದ ಕರ್ನಾಟಕದಲ್ಲಿ ನಿಷ್ಠೆಯಿಂದ ಮತ್ತು ಪರಿಶ್ರಮದಿಂದ ಬಜೆಪಿಗಾಗಿ ದುಡಿದಿದ್ದು, ಸರ್ಕಾರ ತರುವುದಕ್ಕಾಗಿ ಹಗಲು ರಾತ್ರಿ ದುಡಿದಿದ್ದಾರೆ. ಅವರು ಇಂದು ರೈತರ ಮಗನೆಂದು ಹೆಸರಾಗಿದ್ದಾರೆ.
![ಶಿವಮೊಗ್ಗ ನಗರ ನಾಗರೀಕ ವೇದಿಕೆ ಪತ್ರ](https://etvbharatimages.akamaized.net/etvbharat/prod-images/10491545_smg.jpg)
ಆದರೆ ವಿಜಯಪುರ ಶಾಸಕರು ಮತ್ತು ಎಂಎಸ್ಸಿ ವಿಶ್ವನಾಥ್ ಸಿಎಂ ಬಿಎಸ್ವೈ ವಿರುದ್ಧ ಇಲ್ಲಸಲ್ಲದ ಅಪವಾದದ ಮಾತುಗಳನ್ನಾಡುತ್ತಿದ್ದಾರೆ. ಇದು ಬಿಜೆಪಿಗೆ ಕಪ್ಪುಚುಕ್ಕೆಯಾಗಿದೆ. ಜೆಡಿಎಸ್ನಲ್ಲಿದ್ದ ಯತ್ನಾಳ್ರನ್ನು ಮನವೊಲಿಸಿ ಬಿಜೆಪಿಗೆ ಕರೆತಂದದ್ದು ಯಡಿಯೂರಪ್ಪ ಎನ್ನವುದನ್ನು ಮರೆಯಬಾರದು. ಇವರಾಡುತ್ತಿರುವ ಮನಸ್ತಾಪದ ಮಾತುಗಳಿಂದ ರಾಜ್ಯದಲ್ಲಿ ಬಿಜೆಪಿ ಅನಾವಶ್ಯಕ ಟೀಕೆಗೆ ಗುರಿಯಾಗಿದೆ.
ಹಾಗಾಗಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಯತ್ನಾಳ್ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲು ತಿಳಿಸಿದ್ದರು. ಆದರೆ ಇನ್ನು ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದ್ರೆ ಯತ್ನಾಳ್ ಮತ್ತು ವಿಶ್ವನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ಅವರಿಗೆ ಶಿವಮೊಗ್ಗ ನಗರ ನಾಗರೀಕ ವೇದಿಕೆ ಮನವಿ ಮಾಡಿಕೊಂಡಿದೆ.
ಇದನ್ನು ಓದಿ:ಯುಗಾದಿ ಒಳಗೆ ಸಿಎಂ ಬದಲಾಗ್ತಾರೆ, ಉತ್ತರ ಕರ್ನಾಟಕದವರಿಗೆ ಪಟ್ಟ : ಶಾಸಕ ಯತ್ನಾಳ