ETV Bharat / state

ನಾನು ಪ್ರಚಾರಕ್ಕೆ ಹೋಗುತ್ತೇನೆ, ರಾಜಕೀಯಕ್ಕೆ ಬರಲ್ಲ: ಶಿವರಾಜ್‌ ಕುಮಾರ್ - ಕುಮಾರ್ ಬಂಗಾರಪ್ಪ ಬಿಜೆಪಿ

ನಾನು ಮಾನವೀಯತೆಯ ಆಧಾರದ ಮೇಲೆ ಮತ ಪ್ರಚಾರ ಮಾಡುತ್ತೇನೆ ಎಂದು ಶಿವರಾಜ್‌ ಕುಮಾರ್ ಹೇಳಿದರು.​​

i-go-for-campaignings-not-for-politics-actor-shivarajkumar
ನಾನು ಪ್ರಚಾರಕ್ಕೆ ಹೋಗುತ್ತೆನೆ ಅಷ್ಟೆ, ರಾಜಕೀಯಕ್ಕೆ ಬರಲ್ಲ: ನಟ ಶಿವರಾಜಕುಮಾರ್
author img

By

Published : Apr 30, 2023, 10:19 PM IST

Updated : Apr 30, 2023, 10:48 PM IST

ನಾನು ಪ್ರಚಾರಕ್ಕೆ ಹೋಗುತ್ತೇನೆ, ರಾಜಕೀಯಕ್ಕೆ ಬರಲ್ಲ: ಶಿವರಾಜ್‌ ಕುಮಾರ್

ಶಿವಮೊಗ್ಗ: ನಾನು ರಾಜಕೀಯ ಪ್ರಚಾರಕ್ಕೆ ಹೋಗುತ್ತೇನೆ. ಆದರೆ ರಾಜಕೀಯಕ್ಕೆ ಬರಲ್ಲ ಎಂದು ನಟ ಶಿವರಾಜ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗ‌ ಜಿಲ್ಲೆಯ ಸೊರಬದ ಕುಬಟೂರು ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚಿತ್ರರಂಗದಲ್ಲಿಯೇ ಉಳಿದುಕೊಳ್ಳುತ್ತೇನೆ. ನಮ್ಮ ಆಪ್ತರಾದ ಕೆಲವರ ಪರ‌ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದರು.

ಮುಂದುವರೆದು ಮಾತನಾಡಿ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ಪ್ರಚಾರ ನಡೆಸುತ್ತೇನೆ. ಶೆಟ್ಟರ್ ನಮಗೆ ಮೊದಲಿನಿಂದಲೂ ಪರಿಚಯ. ಹುಬ್ಬಳ್ಳಿಗೆ ಹೋದಾಗಲೆಲ್ಲ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು. ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು, ವರುಣದಲ್ಲಿ ಸಿದ್ದರಾಮಯ್ಯ‌ ಪರ ನಾನು ಪ್ರಚಾರ ನಡೆಸಲಿದ್ದೇನೆ. ಉಳಿದಂತೆ‌ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದೇನೆ ಎಂದು ತಿಳಿಸಿದರು.

ನನಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜೆ.ಹೆಚ್.ಪಟೇಲ್, ಧರ್ಮಸಿಂಗ್ ಇವೆರೆಲ್ಲರೂ ಬಹಳ ಆತ್ಮೀಯರು. ಗೀತಾ ರಾಜಕೀಯಕ್ಕೆ ಬಂದಿದ್ದಾರೆ. ಅವರು ಶಕ್ತಿಧಾಮದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಬರಲ್ಲ. ಬೇಕಾದರೆ ಸಹಾಯ ಮಾಡುತ್ತೇನೆ. ಅದನ್ನು ಬಿಟ್ಟರೆ ಬೇರೆ ಹೆಚ್ಚಿನ ಸಹಾಯ ಮಾಡಲು ಆಗಲ್ಲ. ನಾನು ಮಾನವೀಯತೆಯ ಆಧಾರದ ಮೇಲೆ ಪ್ರಚಾರ ಮಾಡುತ್ತೇನೆ ಅಷ್ಟೆ ಎಂದು ಹೇಳಿದರು.

ಕಾಂಗ್ರೆಸ್​​ ಸೇರ್ಪಡೆಯಾದ ಗೀತಾ ಶಿವರಾಜ್​ ಕುಮಾರ್​​: ಶಿವರಾಜ್​ ಕುಮಾರ್ ಪತ್ನಿ ಗೀತಾ ಶಿವರಾಜ್‌ ಕುಮಾರ್ ಕಳೆದ ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕೈ ಪಕ್ಷ ಸೇರಿದ್ದರು. ಈ ಮೊದಲು ಜೆಡಿಎಸ್​ನಿಂದ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್​ ಕುಮಾರ್​ ಅವರ ಸಹೋದರ ಕುಮಾರ್ ಬಂಗಾರಪ್ಪ ಬಿಜೆಪಿಯಿಂದ ಹಾಗೂ ಮಧು ಬಂಗಾರಪ್ಪ ಜೆಡಿಎಸ್​ನಿಂದ ಸೊರಬ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸೋದರ ಹೋರಾಟದಲ್ಲಿ ಕುಮಾರ್ ಬಂಗಾರಪ್ಪಗೆ ಗೆಲುವು ಲಭಿಸಿತ್ತು. ಈ ಸಾರಿಯೂ ಇಬ್ಬರೂ ಕಣದಲ್ಲಿದ್ದು ಮಧು ಬಂಗಾರಪ್ಪ ಜೆಡಿಎಸ್ ಬದಲು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಮಧು ಪರ ಗೀತಾ ಶಿವರಾಜ್‌ ಕುಮಾರ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶ್ರೀಮಂತರ ಪರ, ಬಡವರಿಗೆ ಯೋಜನೆ ತಂದ್ರೆ ಪ್ರಶ್ನಿಸ್ತಾರೆ: ಮಲ್ಲಿಕಾರ್ಜುನ ಖರ್ಗೆ

Last Updated : Apr 30, 2023, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.