ಶಿವಮೊಗ್ಗ: ಪತಿಯೇ ಪತ್ನಿಯ ಖಾಸಗಿ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗೃಹಿಣಿಯೊಬ್ಬರು ಪೊಲೀಸರಿಗೆ ದೂರು ನೀಡಿದ ಘಟನೆ ನಗರದಲ್ಲಿ ನಡೆದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿಯಾದ ಈ ವ್ಯಕ್ತಿ ವಿರುದ್ಧ ಆತನ ಪತ್ನಿ ದೂರು ನೀಡಿದ್ದಾಳೆ. 1993ರಲ್ಲಿ ಇವರ ಮದುವೆ ಆಗಿದ್ದು, ನಂತರ ದಂಪತಿ ನಡುವೆ ಜಗಳ ನಡೆದು ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿದ್ದರು.
ಆದರೆ ಗುರುವಾರ ಆರ್ಎಂಎಲ್ ನಗರದಲ್ಲಿ ತಾನು ನಡೆದುಕೊಂಡು ಹೋಗುವಾಗ ಪತಿ ತನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ನನ್ನ ಖಾಸಗಿ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ.. ವರದಕ್ಷಿಣೆ ಕಿರುಕುಳ ಆರೋಪ