ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜೋಗದ ಎಸ್ವಿಪಿ ಕಾಲೋನಿಯ ಕೆಪಿಸಿ ಮನೆಗಳ ಮುಂದಿನ ಗುಡ್ಡ ಕುಸಿತವಾಗಿದೆ.
ಕೆಪಿಸಿಯ ನೌಕರರ ವಸತಿ ಗೃಹಗಳಲ್ಲಿ ಗುಡ್ಡ ರೀತಿ ತಗ್ಗು ಉಬ್ಬುಗಳಿವೆ. ಮನೆಗಳನ್ನು ಎತ್ತರ ಪ್ರದೇಶದಲ್ಲಿ ಕಟ್ಟಲಾಗಿದೆ. ಅಲ್ಲದೆ ಇದಕ್ಕೆ ತಡೆಗೋಡೆಯನ್ನು ಕಟ್ಟಲಾಗಿದೆ.
ಸದ್ಯ ಭಾರಿ ಮಳೆಗೆ ತಡೆಗೋಡೆ ಕುಸಿತವಾಗಿದೆ. ಇದರಿಂದ ಕೆಪಿಸಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಳೆಗಾಲದಲ್ಲಿ ಈ ರೀತಿ ಗುಡ್ಡ ಕುಸಿತವಾಗುವುದು ಇಲ್ಲಿ ಸಾಮಾನ್ಯವಾಗಿದೆ.