ETV Bharat / state

ಶಿವಮೊಗ್ಗದಲ್ಲಿ ವರುಣನ ಅಬ್ಬರ: ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತರ ಸೂಚನೆ

ಶಿವಮೊಗ್ಗ ನಗರದ್ಯಾಂತ ಭಾರೀ ಮಳೆ ಹಿನ್ನೆಲೆ ಮಹಾನಗರ ಪಾಲಿಕೆಯ ಆಯುಕ್ತರು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಭೇಟಿ ಮಾಡಿದ ಆಯುಕ್ತರು
author img

By

Published : Aug 7, 2019, 9:53 AM IST

ಶಿವಮೊಗ್ಗ: ನಗರದ್ಯಾಂತ ಭಾರೀ ಮಳೆ ಹಿನ್ನೆಲೆ ಶಿವಮೊಗ್ಗದ ಮಹಾನಗರ ಪಾಲಿಕೆಯ ಆಯುಕ್ತರು ಮುಂಜಾನೆಯಿಂದ ತಮ್ಮ ಎಲ್ಲಾ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆ ಮಾತುಕತೆ ನಡೆಸಿ ಮಳೆಯಿಂದ ಸಮಸ್ಯೆಗೊಳಗಾದ ಎಲ್ಲಾ ನಗರಗಳನ್ನು ವೀಕ್ಷಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಪ್ರಮುಖವಾಗಿ ತುಂಗಾನಗರ, ಟಿಪ್ಪುನಗರ, ಗಾಂಧಾರಿನಗರ, ಆರ್.ಎಂ.ಎಲ್ ನಗರ, ಶಾರವತಿ ನಗರ, ಬಾಪೂಜಿನಗರ, ಹೊಳೆ ಬಸ್ ಸ್ಟಾಪ್ ಹತ್ತಿರ, ಸವಾಯಿಪಾಳ್ಯ, ಲಕ್ಕೊಳ್ಳಿ ಡ್ಯಾಂ ಬಳಿ, ವಿನೋಬನಗರ ಹಾಗೂ ಸಾಕಷ್ಟು ಕಾಲೋನಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದ್ದರಿಂದಾಗಿ ಜನರ ಸಮಸ್ಯೆಗಳನ್ನು ಪರಿಶೀಲನೆ ಮಾಡಿ, ಉರುಳಿ ಬೀಳುವಂತಿರುವ ಮನೆಗಳಲ್ಲಿರುವವರನ್ನು ಗಂಜಿ ಕೇಂದ್ರದೆಡೆಗೆ ಕರೆದೊಯ್ಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಭೇಟಿ ಮಾಡಿದ ಪಾಲಿಕೆ ಆಯುಕ್ತರು

ಮಹಾನಗರಪಾಲಿಕೆ ಅಧಿಕಾರಿಗಳಿಗೆ ನೀಡಿರುವ ಆದೇಶಗಳು:

1.ಎಲ್ಲಾ ಆರೋಗ್ಯಾಧಿಕಾರಿಗಳು, ಅಭಿಯಂತರರು, ರೆವಿನ್ಯೂ ಅಧಿಕಾರಿಗಳು ಮತ್ತು ಎಲ್ಲಾ ಶಾಖೆಯ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕೂಡಲೇ ತಮಗೆ ಸಂಬಂಧಿಸಿದ ಎಲ್ಲಾ ವಾರ್ಡ್​ಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ನಿಯಂತ್ರಿಸತಕ್ಕದ್ದು ಮತ್ತು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

2. DEWATERING ಕಾರ್ಯ ನಡೆಸಲು ನೀರು ನುಗ್ಗಿದ ಎಲ್ಲಾ ಮನೆಗಳಿಗೂ ತಕ್ಷಣ ಯು.ಜಿ.ಡಿ. ಮಷಿನ್​​ಗಳನ್ನು ಕಳಿಸುವಂತೆ ಆದೇಶ.

3.24X7 ಸಾಹಾಯವಾಣಿ ಸಂಖ್ಯೆ: 18004257677ಕ್ಕೆ ಯಾವುದೇ ಕ್ಷಣದಲ್ಲಿ ಸಹ ಕರೆ ಮಾಡಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಸಂಬಂಧಿಸಿದ ವರದಿ ಹಾಗೂ ಸಮಸ್ಯೆಗಳನ್ನು ಎಲ್ಲಾ ಸಾರ್ವಜನಿಕರಿಗೆ ತಿಳಿಸುವಂತೆ ಕೋರಿಕೆ.

4.ಬಿಲ್ ಕಲೆಕ್ಟರ್​​​ಗಳು ಮತ್ತು ಎಲ್ಲಾ ರೆವಿನ್ಯು ಇನ್ಸ್​​ಪೆಕ್ಟರ್​​ಗಳು ವರದಿಗಳನ್ನು ತಯಾರಿಸಿ ತಕ್ಷಣ ಶಿವಮೊಗ್ಗ ತಹಾಶೀಲ್ದಾರ್ ಅವರಿಗೆ ಸಲ್ಲಿಸುವಂತೆ ಮತ್ತು ಶಿವಮೊಗ್ಗ ತಹಶೀಲ್ದಾರ್ ಅವರಿಗೂ ನೀಡುವಂತೆ ಆದೇಶ.

5. 3 ಕೇಂದ್ರಗಳಲ್ಲಿ ಗಂಜಿ ಕೇಂದ್ರಗಳು 24 ಗಂಟೆ ತೆರೆದಿದ್ದು, ಬಾಬೂಜಿ ನಗರ, ಶರಾವತಿ ನಗರ ಮತ್ತು ಟಪ್ಪು ನಗರದ ಕಡೆಗೆ ಜನರು ಈ ಕೂಡಲೇ ಬರುವಂತೆ ಸೂಚಿಸಿ.

6.ಮೇ ತಿಂಗಳಲ್ಲಿ ಮತ್ತು ಜೂನ್ ತಿಂಗಳಲ್ಲಿ 14 ಕಿ.ಮೀ ಎಸ್.ಡಬ್ಲ್ಯೂ.ಡಿ ಮತ್ತು ಇನ್ನಿತರ ಸಣ್ಣ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿಯಲು ಅವಕಾಶವಾಗುವಂತೆ ಮತ್ತು ಎಲ್ಲೂ ಸಹ ಬ್ಲಾಕೇಜ್ ಆಗದಂತೆ ನಿಯಂತ್ರಿಸಲು ಅಭಿಯಂತರರಿಗೆ ಆದೇಶ.

Intro:ಶಿವಮೊಗ್ಗದಾದ್ಯಂತ ಭಾರಿ ಮಳೆಯ ಹಿನ್ನಲೆ ಶಿವಮೊಗ್ಗದ ಮಹಾನಗರಪಾಲಿಕೆಯ ಆಯುಕ್ತರು ಇಂದು ಮುಂಜಾನೆಯಿಂದ ತಮ್ಮ ಎಲ್ಲಾ ಶಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳೊಂದಿಗೆ ಶಿವಮೊಗ್ಗದ ನಗರಾದ್ಯಾಂತ ವಿಪರೀತ ಮಳೆಯಿಂದಾಗಿ ಸಮಸ್ಯೆಗಳಿಗೆ ಒಳಗಾದ ಎಲ್ಲಾ ನಗರಗಳನ್ನು ವೀಕ್ಷಿಸಿ ತಕ್ಷಣ ಕ್ರಮ ಕೈಗೊಳ್ಳಲು ಆದೇಶಿಸಿದರು.
ಪ್ರಮುಖವಾಗಿ ತುಂಗಾನಗರ, ಟಿಪ್ಪುನಗರ, ಗಾಂಧಾರಿನಗರ, ಆರ್. ಎಂ.ಎಲ್ ನಗರ, ಶಾರವತಿ ನಗರ, ಬಾಪೂಜಿನಗರ, ಹೋಳೆ ಬಸ್ ಸ್ಟಾಪ್ ಹತ್ತಿರ, ಸವಾಯಿಪಾಳ್ಯ, ಲಕ್ಕೊಳ್ಳಿ ಡಾಮ್ ಬಳಿ, ವಿನೋಬನಗರ ಹಾಗೂ ಸಾಕಷ್ಟು ಕಾಲೋನಿಗಳು ಮತ್ತು ಮನೆಗಳಿಗೆ ನೀರು ನುಗ್ಗಿ ಅದರಿಂದಾಗಿ ಜನರು ಯಾವರೀತಿಯಿಂದ ಕಷ್ಟಪಡುತ್ತಿದ್ದರು ಎಂಬುದನ್ನು ಪರಿಶೀಲನೆ ಮಾಡಿ ನಂತರ ತೀರ ಮನೆಗಳು ಉರುಳಿ ಬೀಳುತ್ತಿರುವ ಮನೆಗಳಿಗೆ ತಕ್ಷಣ ಅಂತಹ ಮನೆಗಳಿಂದ ಗಂಜಿ ಕೇಂದ್ರದೆಡೆಗೆ ಕರೆದೊಯ್ಯುವಂತೆ ಸೂಪ್ತ ಅಧಿಕಾರಿಗಳಿಗೆ ಆದೇಶ ನೀಡಿದರು. ಹಾಗೂ ನೆರೆ ಪೀಡಿತರು ತಪ್ಪದೇ ಸಮೀಪವಿರುವ ಗಂಜಿ ಕೇಂದ್ರಗಳಿಗೆ ಬರುವಂತೆ ಆದೇಶಿಸಿ ಎಂದು ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು. ಬಾಪೂಜಿ ನಗರದ ಜನರು ಗಂಜಿ ಕೇಂದ್ರಕ್ಕೆ ಬಂದಿದ್ದು ಟಿಪ್ಪು ನಗರದ ಜನರು ಬರುವಂತೆ ಆಹ್ವಾನಿಸಿ ಎಂದರು. ಎಲ್ಲಾ ರೀತಿಯ ತಯಾರಿ ಊಟದ ವ್ಯವಸ್ಥೆ ಹಾಗು ಉಳಿದುಕೊಳ್ಳುವ ವ್ಯವಸ್ಥೆ ತಯಾರಿದೆ.ಎಂದರು.
         ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ನೀಡಿರುವ ಆದೇಶಗಳು:
1.         ಎಲ್ಲಾ ಆರೋಗ್ಯಾಧಿಕಾರಿಗಳು, ಅಭಿಯಂತರರು, ರೆವೆನ್ಯೂ ಅಧಿಕಾರಿಗಳು ಮತ್ತು ಎಲ್ಲಾ ಶಾಖೆಯ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಕೂಡಲೇ ತಕ್ಷಣದಿಂದ ತಮಗೆ ಸಂಬಂಧಿಸಿದ ಎಲ್ಲಾ ವಾರ್ಡ್ ಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥತಿ ಗತಿಗಳನ್ನು ನಿಯಂತ್ರಿಸತಕ್ಕದ್ದು ಮತ್ತು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.
2.         ಯು.ಜಿ.ಡಿ. SUTION MACHINES ಗಳನ್ನು ಉಪಯೋಗಿಸಿ DEWATERING ಕಾರ್ಯವನ್ನು ಮನೆಗೆ ನೀರು ನುಗ್ಗಿದ ಎಲ್ಲಾ ಮನೆಗಳಿಗೂ ತಕ್ಷಣ ಕಳಿಸುವಂತೆ ಆದೇಶಿಸಿದೆ.
3.         24*7 ಸಾಹಾಯವಾಣಿ ಸಂಖ್ಯೆ: 18004257677 ಗೆ ಯಾವುದೇ ಕ್ಷಣದಲ್ಲಿ ಸಹ ಕರೆ ಮಾಡಿ ಶಿವಮೊಗ್ಗ ಮಹಾನಗರಪಾಲಿಕೆ ಸಂಬಂಧಿಸಿದ ವರದಿ ಹಾಗೂ ಸಮಸ್ಯೆಗಳನ್ನು ಎಲ್ಲಾ ಸಾರ್ವಜನಿಕರು ತಿಳಿಸುವಂತೆ ಕೋರಿಕೆ.
4.         ಬಿಲ್ ಕಲೆಕ್ಟರ್ ಗಳು ಮತ್ತು ಎಲ್ಲಾ ರೆವೆನ್ಯು ಇನ್ ಸ್ಪೆಕ್ಟರ್ ಗಳು ವರದಿಗಳನ್ನು ತಯಾರಿಸಿ ತಕ್ಷಣ ಶಿವಮೊಗ್ಗ ತಹಾಶೀಲ್ದಾರ್ ರವರಿಗೆ ವರದಿಗಳನ್ನು ಸಲ್ಲಿಸುವಂತೆ ಮತ್ತು ಶಿವಮೊಗ್ಗ ತಹಾಶೀಲ್ದಾರ್ ರವರೊಂದಿಗೆ ಸಂಬಂಧಿಸಿದಂತೆ ವರಿದಿ ನೀಡುವಂತೆ ಆದೇಶಿಸಿದರು.
5.         3 ಕೇಂದ್ರಗಳಲ್ಲಿ ಗಂಜಿ ಕೇಂಧ್ರಗಳು 24 ಗಂಟೆ ತೆರೆದಿದ್ದು ಬಾಬೂಜಿ ನಗರ, ಶರಾವತಿ ನಗರ ಮತ್ತು ಟಪ್ಪು ನಗರದ ಕಡೆಗೆ ಜನರು ಈ ಕೂಡಲೇ ಬರುವಂತೆ ಆದೇಶಿಸಿ ಎಂದರು.
6.         ಮೇ ತಿಂಗಳಲ್ಲಿ ಮತ್ತು ಜೂನ್ ತಿಂಗಳಲ್ಲಿ 14 ಕಿ. ಮೀ ಎಸ್. ಡಬ್ಲ್ಯೂ.ಡಿ ಮತ್ತು ಇನ್ನಿತರ ಸಣ್ಣ ಚರಂಡಿಗಳನ್ನು ಸ್ವಚ್ಚಗೊಳಿಸಿ ನೀರು ಹರಿಯುವಂತೆ ಅವಕಾಶವಾಗುವಂತೆ ಮತ್ತು ಎಲ್ಲೂ ಸಹ ಬ್ಲೋಕೇಜ್ ಆಗದಂತೆ ನಿಯಂತ್ರಿಸಲು ಅಭಿಯಂತರರಿಗೆ ಆದೇಶಿಸಿದರು.
7.         ನೀರು ಮಧ್ಯಾಹ್ನದ ನಂತರ ಕೆಲುವೆಡೆ ಕಡಿಮೆಯಾದ ಸಂಬಂವದಲ್ಲಿ ಎಲ್ಲಾ ಕೆನಾಲ್ ಗಳನ್ನು ಸುರಕ್ಷಿಸಲು ಮರಳುಗಳ ಮೂಟಿ ಉಪಯೋಗಿಸಿ ಅಗತ್ಯವಿದ್ದ ಕಡೆ ಹೊಸ ಡ್ರೈನೇಜ್ ತೆರೆ ಬೇಕಾದರೆ ಅನುಮತಿ ನೀಡುತ್ತೇನೆ ಎಂದು ಆಯುಕ್ತರು ಆದೇಶಿಸಿದರು.
8.         ಇನ್ನು ಜೆ.ಸಿ.ಬಿ ಗಳ ಅಗತ್ಯವಿದ್ದ ಕಾರಣ ಸಾಕಷ್ಟು ಜಿ.ಸಿ.ಬಿಗಳನ್ನು ಹೊರಗಿನಿಂದ ತೆರೆಸಿಕೊಂಡು ಸಮಸ್ಯೆಗಳನ್ನು ಬರೆಹರಿಸಲಾಗಿದೆ.
9.         ಫೈರ್ ಡಿಪಾರ್ಟ್ಮೆಂಟ್ ನಿಂದ DEWATERING ಕಾರ್ಯ ನಡೆಸಲು ಸಹಾಯವನ್ನು ಮಹಾನಗರಪಾಲಿಕೆ ಕೇಳಿದೆ.
10.         ಎಂತಹ ಪರಿಸ್ಥತಿಯಲ್ಲೂ ಸಾರ್ವಜನಿಕರಿಗೆ ನೆರವಾಗುವಂತೆ ಮತ್ತು ಅಧಿಕಾರಿಗಳು ನಿರ್ಲಕ್ಷ ತೋರದಂತೆ ಕರ್ತವ್ಯ ನಿಭಾಯಿಸುವಂತೆ ಆಯುಕ್ತರು ಆದೇಶಿಸಿದ್ದಾರೆ ಮತ್ತು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳು ನಿರ್ಲಕ್ಷ ತೋರಿದರೆ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಆಯುಕ್ತರು ಆದೇಶಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.