ETV Bharat / state

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಚುಕ್ಕಾಣಿ ಹಿಡಿದ ಬಿಎಸ್‌ವೈ ಆಪ್ತ ಗುರುಮೂರ್ತಿ - Shikaripur Taluk

ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿರುವ ಗುರುಮೂರ್ತಿಯವರು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Gurumurthy takes charge as Chairman of Malanad Development Board
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಗುರುಮೂರ್ತಿ ಅಧಿಕಾರ ಸ್ವೀಕಾರ
author img

By

Published : Jun 25, 2020, 4:16 PM IST

ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಸಿ.ಎಂ. ಯಡಿಯೂರಪ್ಪನವರ ಆಪ್ತ ಕೆ.ಎಸ್. ಗುರುಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ.

ಶಿವಮೊಗ್ಗದ ಸಾಗರ ರಸ್ತೆಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಕಚೇರಿಯಲ್ಲಿ‌ ಸರಳವಾದ ಪೊಜೆಯ ಮೂಲಕ ಅಧಿಕಾರ ಸ್ವೀಕಾರ ಮಾಡಿದರು. ಕಚೇರಿಯಲ್ಲಿ‌ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪೂಜೆ ನಡೆಸಿದ ಬಳಿಕ ಅಧಿಕಾರದ ಪುಸ್ತಕಕ್ಕೆ ಸಹಿ‌ ಹಾಕಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಗುರುಮೂರ್ತಿ ಅಧಿಕಾರ ಸ್ವೀಕಾರ

ಈ ವೇಳೆ‌ ಮಾತನಾಡಿದ‌ ಕೆ.ಎಸ್.ಗುರುಮೂರ್ತಿ, ‌ನಾನು ಯಾವತ್ತು‌ ಅಧ್ಯಕ್ಷ ಸ್ಥಾನವನ್ನು ಹುಡುಕಿ‌ಕೊಂಡು ಹೋಗಿಲ್ಲ. ಈಗ‌ ಯಡಿಯೂರಪ್ಪನವರೇ ಹುಡುಕಿ ನನಗೆ ಈ ಸ್ಥಾನ‌ ನೀಡಿದ್ದಾರೆ. ನಮ್ಮ ಪಕ್ಷದ ಹಿರಿಯರ ಸಹಕಾರದಿಂದ‌ ಈ ಮಂಡಳಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ಮಲೆನಾಡಿನ ಸಮಸ್ಯೆಯ ಬಗ್ಗೆ ನನಗೆ ಅರಿವಿದೆ. ಎಲ್ಲರ ಸಹಕಾರದಿಂದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ಡಿ.ಹೆಚ್.‌ಶಂಕರಮೂರ್ತಿ, ಸಂಸದ ರಾಘವೇಂದ್ರ, ಡಿಸಿ‌‌ ಶಿವಕುಮಾರ್‌ ಹಾಗೂ‌‌ ಗುರು‌ಮೂರ್ತಿ ಅವರ ಪತ್ನಿ ಹಾಗೂ ಪುತ್ರ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.