ಶಿವಮೊಗ್ಗ : ಗೋವುಗಳಿಗೆ ಮೇವನ್ನು ಸಮರ್ಪಕವಾಗಿ ಒದಗಿಸುವುದು ಸವಾಲಾಗಿದೆ. ಹಾಗಾಗಿ ಶಿವಮೊಗ್ಗದ ನಮ್ಮ ಕನಸಿನ ಶಿವಮೊಗ್ಗ, ಶ್ರೀಗಂಧ ಸಂಸ್ಥೆ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಗೋವಿಗಾಗಿ ಮೇವು ಯೋಜನೆಯನ್ನು ಎರಡು ರೂಪಿಸಿವೆ.
ಸಿಟಿ ಹಾಗೂ ಹೊರವಲಯದ ಖಾಲಿ ಜಾಗಗಳಲ್ಲಿ ಹುಲ್ಲಿನ ಬೀಜಗಳನ್ನು ಎರಡು ತಿಂಗಳ ಹಿಂದೆ ಬಿತ್ತನೆ ಮಾಡಲಾಗಿತ್ತು. ಇದೀಗ ಆ ಯೋಜನೆ ಯಶಸ್ವಿಯಾಗಿದ್ದು, ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ಶಾಲಾ ಆವರಣದಲ್ಲಿ ಬೆಳೆದ ಹುಲ್ಲನ್ನು ಕಟಾವು ಮಾಡಲಾಗುತ್ತಿದೆ. ಮೇವನ್ನು ಕಟಾವು ಮಾಡಿ ಅಗತ್ಯವಿರುವ ಗೋ ಶಾಲೆಗಳಿಗೆ ನೀಡಲಾಗಿದೆ.
ಗೋವುಗಳ ರಕ್ಷಣೆ ಬಗ್ಗೆ ಕೇವಲ ಮಾತನಾಡದೇ ಅವುಗಳ ಉಳಿವಿಗಾಗಿ ಮೇವು ಪೂರೈಸಲು ಗೋವಿಗಾಗಿ ಮೇವು ಎಂಬ ಯೋಜನೆ ಪ್ರಾರಂಭಿಸಿ, ಮೇವನ್ನು ಉತ್ಪಾದಿಸಿ, ಗೋಶಾಲೆಗಳಿಗೆ ನೀಡುತ್ತಿರುವ ಶಿವಮೊಗ್ಗದ ನಮ್ಮ ಕನಸಿನ ಶಿವಮೊಗ್ಗ ಮತ್ತಿತರ ತಂಡಗಳ ಕಾರ್ಯ ನಿಜಕ್ಕೂ ಮಾದರಿ ಹಾಗೂ ಶ್ಲಾಘನೀಯ.