ETV Bharat / state

ಸಾವಯುವ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿಗಳು: 'ಕೃಷಿ ಪ್ರಯೋಗ ಪರಿವಾರ' ಎಂಬ ಸಂತೆ ಪ್ರಾರಂಭ..! - Fruit and vegetables grown in organic farming

ಶ್ರೀಧರ್‌ ಎಂಬ ಸಾವಯುವ ಕೃಷಿಕ, ತಾನು ಬೆಳೆದ ಬೆಳೆಯ ಮಾರಾಟಕ್ಕೆ ಸಾವಯವ ತರಕಾರಿ ಸಂತೆ ಶುರು ಮಾಡಿದ್ದಾರೆ. ಕೃಷಿ ಪ್ರಯೋಗ ಪರಿವಾರ ಎಂಬ ಹೆಸರನ್ನಿಟ್ಟು, ತಾವೇ ನೇರವಾಗಿ ಫಸಲನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

Fruit and vegetables grown in organic farming
ಸಾವಯುವ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿಗಳು
author img

By

Published : Jun 30, 2020, 9:15 PM IST

ಶಿವಮೊಗ್ಗ: ಸಾವಯುವ ಕೃಷಿ ಪದ್ಧತಿಯಲ್ಲಿ ರೈತನೊಬ್ಬ ಹಣ್ಣು ಹಾಗೂ ತರಕಾರಿಗಳನ್ನು ಬೆಳೆದಿದ್ದಾನೆ. ಇದ್ರ ಜೊತೆಗೆ ದಲ್ಲಾಳಿಗಳ ಹಂಗಿಲ್ಲದೆ ತಾನೇ ನೇರವಾಗಿ ಮಾರಾಟ ಮಾಡುವ ಮೂಲಕ ಮಾದರಿಯಾಗಿದ್ದಾನೆ.

ಶಿವಮೊಗ್ಗದ ಶ್ರೀಧರ್‌ ಎಂಬ ಸಾವಯುವ ಕೃಷಿಕ, ರಾಸಾಯನಿಕ ಪದಾರ್ಥಗಳನ್ನು ಬಳಸದೆ ತಾನು ಬೆಳೆದ ಬೆಳೆಯ ಮಾರಾಟಕ್ಕೆ ಸಾವಯವ ತರಕಾರಿ ಸಂತೆ ಶುರು ಮಾಡಿದ್ದಾರೆ. ಕೃಷಿ ಪ್ರಯೋಗ ಪರಿವಾರ ಎಂಬ ಹೆಸರನ್ನಿಟ್ಟು, ತಾವೇ ನೇರವಾಗಿ ಫಸಲನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಶನಿವಾರದ ದಿನ ಕೋಟೆ ಆಂಜನೇಯ ದೇವಾಲಯದ ಬಳಿ, ಮಂಗಳವಾರ ಗುಂಡಪ್ಪ ಶೆಡ್ ಮಾಸ್ತಾಂಬಿಕಾ ದೇಗುಲದ ಸಮೀಪ, ಗುರುವಾರ ಮತ್ತು ಭಾನುವಾರ ವಿನೋಬ ನಗರದ ವಿಕಾಸ ಶಾಲೆ ಆವರಣದಲ್ಲಿ ಇವರ ಆರ್ಗ್ಯಾನಿಕ್ ಸಂತೆ ನಡೆಯುತ್ತೆ.

ಸಾವಯುವ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿಗಳು

ಈ ಸಂತೆಯಲ್ಲಿ ಸಾವಯುವ ಕೃಷಿಯಲ್ಲಿ ಬೆಳೆದ ಬೆಂಡೇಕಾಯಿ, ಪಪ್ಪಾಯ, ಸೌತೆ, ನಿಂಬೆಹಣ್ಣು, ಶುಂಠಿ, ಸೊಪ್ಪು, ಹೀಗೆ ವಿವಿಧ ತರಕಾರಿ ಹಾಗು ಹಣ್ಣುಗಳನ್ನು ಸೇಲ್ ಮಾಡ್ತಾರೆ. ಸಾವಯವದ ಮೂಲಕ ಬೆಳೆದ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ಆರೋಗ್ಯವೃದ್ಧಿ ಆಗುವುದರ ಜೊತೆಗೆ, ರೈತರು ಬೆಳೆದ ಬೆಳೆಗಳಿಗೂ ಉತ್ತಮ ಮಾರುಕಟ್ಟೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.