ETV Bharat / state

ವಿದ್ಯಾಗಮ ಶಾಲೆ ಪ್ರಾರಂಭ: ಶಿವಮೊಗ್ಗದಲ್ಲೂ ನಾಲ್ವರು ಶಿಕ್ಷಕರಿಗೆ ಕೊರೊನಾ

ಶಿವಮೊಗ್ಗ ಮತ್ತು ಭದ್ರಾವತಿಯ ತಲಾ ಇಬ್ಬರು ಶಿಕ್ಷಕರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಡಿಸಂಬರ್ 31ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರ ವರದಿ ಜನವರಿ 3ರಂದು ಬಂದಿದೆ.

corona
ಕೊರೊನಾ
author img

By

Published : Jan 5, 2021, 6:22 PM IST

ಶಿವಮೊಗ್ಗ: ವಿದ್ಯಾಗಮ ಪ್ರಾರಂಭವಾಗುತ್ತಿದ್ದಂತೆಯೇ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನ ತಲಾ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಇದನ್ನೂ ಓದಿ...ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ವಿತರಣೆ: ಸಚಿವ ಈಶ್ವರಪ್ಪ

ಶಿವಮೊಗ್ಗದ ಅನುಪಿನ ಕಟ್ಟೆ ಶಾಲೆ ಮತ್ತು ಶರಾವತಿ ನಗರದ ಬಿಜಿಎಸ್ ಹೈಸ್ಕೂಲ್​ನ ಶಿಕ್ಷಕರಿಗೆ ಕೊರೊನಾ ಕಾಣಿಸಿಕೊಂಡಿದೆ. ಭದ್ರಾವತಿಯ ಹೊಸೂರು ತಾಂಡದ ಹೈಸ್ಕೂಲ್​ನ ಶಿಕ್ಷಕಿ ಹಾಗೂ ನ್ಯೂ ಟೌನ್ ಸರ್ಕಾರಿ ಬಾಲಕಿಯರ ಹೈಸ್ಕೂಲ್ ಶಿಕ್ಷಕಿಗೆ ಮಹಾಮಾರಿ ವಕ್ಕರಿಸಿದೆ.

ಡಿಡಿಪಿಐ ರಮೇಶ್

ಡಿಸೆಂಬರ್ 31ರಂದು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರ ವರದಿ ಜನವರಿ 3ರಂದು ಬಂದಿದೆ. ಈ ನಾಲ್ವರು ಸಹ ಜ. 1ರಿಂದ 3ರವರೆಗೂ ಶಾಲೆಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಐ ರಮೇಶ್, ಶಿಕ್ಷಕರು ಕೊರೊನಾ ವರದಿ ಬಂದ ನಂತರವೇ ಶಾಲೆಗೆ ಆಗಮಿಸಬೇಕಾಗಿರುವುದು ಕಡ್ಡಾಯ. ಆದರೆ ಯಾರೂ ವರದಿ ಬರುವುದಕ್ಕೂ ಮುನ್ನವೇ ಶಾಲೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.