ಶಿವಮೊಗ್ಗ: ದರೋಡೆಗೆ ಯತ್ನಿಸುತ್ತಿದ್ದ ನಾಲ್ವರು ಅಂತರ್ರಾಜ್ಯ ಕಳ್ಳರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಶಿವಮೊಗ್ಗದ ಗಾಂಧಿಬಜಾರ್ ಬಳಿ ಸ್ಯಾಂಟ್ರೋ ಕಾರಿನಲ್ಲಿ ಕುಳಿತು ದರೋಡೆಗೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಉಮೇಶ್ ನಾಯಕ್ ಮತ್ತು ದೊಡ್ಡಪೇಟೆ ಸಿಪಿಐ ವಸಂತ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ.
ಮಧ್ಯಪ್ರದೇಶದ ಸುರೇಶ್ ಸಿಂಗ್ (20), ಕಮಲ್ ಸಿಂಗ್ (35) ರಾಜಸ್ಥಾನ ಮೂಲದ ರಣವೀರ್ ಸಿಂಗ್ (34) ಮತ್ತು ರಾಮಲಾಲ್ (21) ಬಂಧಿತರು.
ಒಂದು ನಾಡ ಪಿಸ್ತೂಲು, 4 ಜೀವಂತ ಗುಂಡು, 1 ಚಾಕು, 4 ಮೊಬೈಲ್ ಹಾಗೂ ಒಂದು ಸ್ಯಾಂಟ್ರೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.