ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ವೇತನ ಆಯೋಗವನ್ನು ರಚಿಸುವ ಸಮಿತಿಯನ್ನು ಈಗಾಗಲೇ ಸರ್ಕಾರ ಪ್ರಕಟಿಸಿದೆ. ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಬಿ.ಎಸ್ ಯಡಿಯೂರಪ್ಪನವರಿಗೆ ಸರ್ಕಾರಿ ನೌಕರರ ಸಂಘದಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರವು ಪ್ರತಿವರ್ಷ ಐದು ವರ್ಷಗಳಿಗೊಮ್ಮೆ ವೇತನ ಆಯೋಗ ರಚಿಸುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ನಾಲ್ಕು ವರ್ಷ ಏಳು ತಿಂಗಳಿಗೆ ವೇತನ ಆಯೋಗ ರಚಿಸಿ ವರದಿ ನೀಡಲು ಸರ್ಕಾರ ಆಯೋಗಕ್ಕೆ ಆರು ತಿಂಗಳ ಗಡುವು ನೀಡಿದೆ. ಈ ಆಯೋಗವು ಆರು ತಿಂಗಳ ಒಳಗಾಗಿ ವೇತನ ಆಯೋಗದ ಬೇಡಿಕೆಯ ವರದಿಯನ್ನು ಸರ್ಕಾರಕ್ಕೆ ನೀಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಏಳನೇ ವೇತನ ಆಯೋಗದಿಂದ 11 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಂದ ಸರ್ಕಾರಿ ಶಾಲೆಗಳ ದತ್ತು ಕಾರ್ಯಕ್ರಮ, ಗಡಿ ಶಾಲೆಗಳ ಅಭಿವೃದ್ಧಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಸಿಎಸ್ ಷಡಕ್ಷರಿ ತಿಳಿಸಿದರು.
ಇದನ್ನೂ ಓದಿ: ಆಧಾರ್ ಕಾರ್ಡ್ ವಂಚಿತರ ಸಮಸ್ಯೆ ಪರಿಹಾರಕ್ಕೆ ಕಾಯ್ದೆ ತಿದ್ದುಪಡಿ ಅಗತ್ಯ: ನ್ಯಾಯಮೂರ್ತಿ ಓಕಾ