ETV Bharat / state

ನಾಳೆ ಶಿವಮೊಗ್ಗದಲ್ಲಿ ವಿಜಯದಶಮಿ ಮೆರವಣಿಗೆ: ಅಂಬಾರಿ ಹೊರುವ ಸಾಗರ ಆನೆಗೆ ಅಂತಿಮ ಹಂತದ ತಾಲೀಮು - final rehearsal for Dasara was held in Shivamogga

ಮಲೆನಾಡಿನ ಶಿವಮೊಗ್ಗದಲ್ಲೂ ದಸರಾ ಜೋರಾಗಿದೆ. ನಾಳಿನ ಸಂಭ್ರಮಕ್ಕೆ ಇಂದು ಸಾಗರ ಆನೆಗೆ ಅಂತಿಮ ತಾಲೀಮು ನಡೆಯಿತು.

ಶಿವಮೊಗ್ಗ ದಸರಾ
ಶಿವಮೊಗ್ಗ ದಸರಾ
author img

By ETV Bharat Karnataka Team

Published : Oct 23, 2023, 9:26 PM IST

Updated : Oct 23, 2023, 9:36 PM IST

ಶಿವಮೊಗ್ಗ ದಸರಾ

ಶಿವಮೊಗ್ಗ: ಮೈಸೂರಿನಂತೆ ಶಿವಮೊಗ್ಗ ನಗರದಲ್ಲಿಯೂ ವಿಜೃಂಭಣೆ ಹಾಗೂ ಸಂಪ್ರದಾಯಬದ್ಧವಾಗಿ ನಾಡಹಬ್ಬ ದಸರಾ ಆಚರಿಸಲಾಗುತ್ತದೆ. ಮಹಾನಗರ ಪಾಲಿಕೆ ವತಿಯಿಂದ 10 ದಿನಗಳ ದಸರಾ ಆಚರಣೆ ಮಾಡಲಾಗುತ್ತದೆ. ವಿಜಯ ದಶಮಿಯಂದು ನಗರದಲ್ಲಿ ಅಂಬಾರಿ ಮೆರವಣಿಗೆ ನಡೆಯುತ್ತದೆ. ತಾಯಿ ಚಾಮುಂಡೇಶ್ವರಿಯನ್ನು ಆನೆ ಮೇಲೆ ಮೆರವಣಿಗೆ ಮಾಡಲಾಗುತ್ತದೆ.

ಮೈಸೂರಿನಲ್ಲಿ ಅಂಬಾರಿಯನ್ನು ಅರ್ಜುನ ಆನೆ ಹೊತ್ತರೆ, ಶಿವಮೊಗ್ಗದಲ್ಲಿ ಅತ್ಯಂತ ಸೌಮ್ಯ ಸ್ವಭಾವದ ಸಾಗರ ಆನೆ ಚಾಮುಂಡಿಯನ್ನು ಹೊತ್ತು ಸಾಗಲಿದ್ದಾನೆ. ಇದಕ್ಕಾಗಿ ಕಳೆದ ಮೂರು ದಿನಗಳಿಂದ ಸಕ್ರೆಬೈಲಿನ ಸಾಗರ, ಹೇಮಾವತಿ ಹಾಗೂ ನೇತ್ರಾವತಿ ಆನೆಗಳನ್ನು ಶಿವಮೊಗ್ಗಕ್ಕೆ ತರಲಾಗಿದೆ. ನಾಳೆ ಅಂಬಾರಿ ಹೊರಲು ಸತತ ಮೂರು ದಿನ ತಾಲೀಮು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಇಂದು ಸಂಜೆ ಅಂತಿಮ ತಾಲೀಮು ನಡೆಯಿತು.

ಆನೆಗಳು ವಾಸ್ತವ್ಯ ಹೊಡಿರುವ ಕೋಟೆ ರಸ್ತೆಯ ವಾಸವಿ ಶಾಲೆಯಿಂದ ಎಸ್​ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಟಿ.ಶೀನಪ್ಪ ಶೇಟ್ಡಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಸಂಗೊಳ್ಳಿರಾಯಣ್ಣ ರಸ್ತೆಯ ಮೂಲಕ ಫ್ರೀಡಂ ಪಾರ್ಕ್ ತಲುಪಿದವು. ಯಾವುದೇ ಅಡೆತಡೆ ಇಲ್ಲದೆ ಗಜಗಾಂಭಿರ್ಯದಿಂದಲೇ ಹೆಜ್ಜೆ ಹಾಕಿದವು.

ಸಾಗರ ಆನೆಗೆ 750 ಕೆ.ಜಿ ತೂಕದ ಮರಳಿನ ಚೀಲವನ್ನು ಹಾಕಿ ತಾಲೀಮು ಮಾಡಲಾಯಿತು. ನಾಳೆ ಮಧ್ಯಾಹ್ನ 4 ಗಂಟೆಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ಸಿಗಲಿದೆ. ಶಿವಮೊಗ್ಗ ತಹಶೀಲ್ದಾರ್​ ಬನ್ನಿ ಮುಡಿಯಲಿದ್ದಾರೆ. ನಂತರ ರಾವಣ ದಹನ ನಡೆಯುತ್ತದೆ. ಯಾವುದೇ ಸಮಸ್ಯೆಯಾಗಬಾರದೆಂದು ಪೊಲೀಸ್ ಇಲಾಖೆ ಬಂದೋಬಸ್ತ್ ಒದಗಿಸುತ್ತಿದೆ.

ಈಟಿವಿ ಭಾರತ್ ​ಜತೆ ಮಾತನಾಡಿದ ವನ್ಯಜೀವಿ ವಿಭಾಗದ ಡಿಎಫ್​ಒ ಪ್ರಸನ್ನ ಪಟಗಾರ್, "ಶಿವಮೊಗ್ಗ ದಸರಾ ಆಚರಣೆಗೆ ಸಾಗರ, ಹೇಮಾವತಿ ಹಾಗೂ ನೇತ್ರಾವತಿ ಆನೆಯನ್ನು ಸಜ್ಜುಗೊಳಿಸಿದ್ದೇವೆ. ಅಂಬಾರಿ ಹೊರಲಿರುವ ಸಾಗರ ಆನೆಗೆ ಅಷ್ಟೇ ಭಾರದ ಮರಳು ಚೀಲ ಹಾಕಿ ಅಭ್ಯಾಸ ಮಾಡಿಸಲಾಗಿದೆ. ಇದಕ್ಕಾಗಿ ವಿಶೇಷ ಆಹಾರ ನೀಡಲಾಗುತ್ತಿದೆ" ಎಂದರು.

ಭಾನುವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಹಾನವಮಿ ದಸರಾ ಆಚರಣೆಯ ವಿಶೇಷ ಮನೋರಂಜನಾ ಕಾರ್ಯಕ್ರಮ ನಡೆಯಿತು. ಗಾಯಕರಾದ ಚಂದನ್ ಶೆಟ್ಟಿ, ಐಶ್ವರ್ಯ ಹಾಗು ಸುರಕ್ಷಾ ದಾಸ್​ ವಿವಿಧ ಕನ್ನಡ ಹಾಡು ಹಾಡಿ ಜನರ ಮನರಂಜಿಸಿದ್ದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ದಸರಾ ಸಂಭ್ರಮ: ಜನಮನ ಸೆಳೆದ ಚಂದನ ಶೆಟ್ಟಿ ಮ್ಯೂಸಿಕಲ್ ನೈಟ್- ವಿಡಿಯೋ

Last Updated : Oct 23, 2023, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.