ETV Bharat / state

ಮಾಜಿ ಶಾಸಕ ಪ್ರಸನ್ನಕುಮಾರ್‌ರಿಂದ ಹಸಿದವರಿಗೆ ಆಹಾರ ವಿತರಣೆ - ಶಿವಮೊಗ್ಗ ಮೆಗ್ಗಾನ್​ ಆಸ್ಪತ್ರೆ ಆವರಣದಲ್ಲಿ ಆಹಾರ ವ್ಯವಸ್ಥೆ

ಲಾಕ್​​ಡೌನ್ ಆಗಿರುವ ಹಿನ್ನೆಲೆ ಅನೇಕ ಜನ ಊಟ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಅವಶ್ಯಕತೆ ಇರುವವರಿಗೆ ಆಹಾರ ನೀಡುವ ಮೂಲಕ ಜನರ ನೆರವಿಗೆ ಬಂದಿರುವ ಇವರ ಕಾರ್ಯ ಶ್ಲಾಘನೀಯ..

food
food
author img

By

Published : May 8, 2021, 6:40 PM IST

ಶಿವಮೊಗ್ಗ: ಮೆಗ್ಗನ್ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಮಾಜಿ ಶಾಸಕರಾದ ಕೆ.ಬಿ ಪ್ರಸನ್ನ ಕುಮಾರ್ ಮತ್ತು ಜಿಲ್ಲಾಎನ್​ಎಸ್​​ಯುಐ ಕಾರ್ಯಕರ್ತರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ನಗರದ ಹಲವು ಭಾಗಗಳಲ್ಲಿ ಸಂಚರಿಸಿ ಹಸಿವಿನಿಂದ ಇರುವವರಿಗೆ ಆಹಾರ ನೀಡುತ್ತಿದ್ದಾರೆ. ಲಾಕ್​​ಡೌನ್ ಆಗಿರುವ ಹಿನ್ನೆಲೆ ಅನೇಕ ಜನ ಊಟ ವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಅವಶ್ಯಕತೆ ಇರುವವರಿಗೆ ಆಹಾರ ನೀಡುವ ಮೂಲಕ ಜನರ ನೆರವಿಗೆ ಬಂದಿರುವ ಇವರ ಕಾರ್ಯ ಶ್ಲಾಘನೀಯ.

ಈ ಸಂದರ್ಭದಲ್ಲಿ ಜಿಲ್ಲಾ ಎನ್​ಎಸ್​​ಯುಐನ ಜಿಲ್ಲಾಧ್ಯಕ್ಷರಾದ ಬಾಲಾಜಿ,ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ಕೆ. ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮಹಮ್ಮದ್ ನಿಹಾಲ್, ಮಾಜಿ ಸಿಂಡಿಕೇಟ್ ಸದಸ್ಯ ಪೂರ್ಣೇಶ್ ಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದೀಪಕ್​ ಸಿಂಗ್, ಮುಖಂಡರದ ಯೋಗೇಶ್ ಗೌಡ, ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ವಿನಯ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.