ಶಿವಮೊಗ್ಗ: 'ಡ್ಯಾಷ್ ಶೀರ್ಷಿಕೆ ನಿಮಗೆ ಬಿಟ್ಟಿದ್ದು' ಎಂಬ ಸಿನಿಮಾವನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ್ದು, ಈ ಸಿನಿಮಾವನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಮನೋಜ್ ಮುಜುಂದಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಸಿನಿಮಾವನ್ನು ಮಿಲಿಯನ್ಸ್ ಸ್ಟುಡಿಯೋಸ್ ವತಿಯಿಂದ ಪೆಸಿಟ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ವಿದ್ಯಾರ್ಥಿಗಳೆ ನಟಿಸಿದ್ದಾರೆ. ಕಥೆಯೆ ಚಿತ್ರದ ನಾಯಕ. ಚಿತ್ರದಲ್ಲಿ ಒಂದು ಹಾಡು ಇದ್ದು, ಇದೊಂದು ವಿನೂತನ ಪ್ರಯತ್ನವಾಗಿದೆ ಎಂದರು.
ಇದೊಂದು ಮಾನಸಿಕ ಕಥೆಗೆ ಸಂಬಂಧಿಸಿದ ಚಿತ್ರವಾಗಿದ್ದು, ವರ್ಚುವಲ್ ರಿಯಾಲಿಟಿಯಲ್ಲಿ ಚಿತ್ರ ಸಾಗುತ್ತದೆ. ಇದರಲ್ಲಿ ಸುಮಾರು 60 ಮಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಮನಸುಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಿದರೆ ಮುಂದೆ ಸಹ ಇಂತಹ ಚಿತ್ರಗಳನ್ನು ಮಾಡಲು ಸಹಕಾರ, ಬೆಂಬಲ, ಧೈರ್ಯ ದೊರೆಯುತ್ತದೆ. ಚಿತ್ರದ ಚಿತ್ರೀಕರಣ ಶಿವಮೊಗ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದಿದ್ದು, ಪ್ರತಿಯೊಬ್ಬರೂ ಈ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡರು.