ETV Bharat / state

ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ: ನಿದ್ದೆಯಿಂದ ಎದ್ದು ಹೊರಗೆ ಓಡಿ ಬಂದ ಜನ - ಭೂಮಿ‌ ಕಂಪಿಸಿದ ಅನುಭವ

ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಭೂಕಂಪನ. ಜನ ಭಯ ಭೀತರಾಗಿ ಮನೆಯಿಂದ ಹೊರ ಓಡಿ ಬಂದಿದ್ದರು.

ಶಿರಾಳಕೊಪ್ಪದಲ್ಲಿ ನಸುಕಿನ ಜಾವ ಕಂಪಿಸಿದ ಭೂಮಿ
ಶಿರಾಳಕೊಪ್ಪದಲ್ಲಿ ನಸುಕಿನ ಜಾವ ಕಂಪಿಸಿದ ಭೂಮಿ
author img

By

Published : Oct 6, 2022, 10:52 AM IST

ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಇಂದು ನಸುಕಿನ ಜಾವ ಭೂಮಿ‌ ಕಂಪಿಸಿದ ಅನುಭವವಾಗಿದೆ. 3.40 ಹಾಗೂ 3.45 ರ ಸುಮಾರಿಗೆ ಭೂಮಿ ಕಂಪಿಸಿದ್ದು, ನಿದ್ರೆಯಲ್ಲಿದ್ದ ಜನ ಮನೆಯಿಂದ ಹೊರಕ್ಕೆ ಓಡಿಬಂದಿದ್ದಾರೆ.

ಮಲಗಿದ್ದಾಗ ಏಕಾಏಕಿ ಭೂಮಿ‌ ಕಂಪಿಸಿದೆ. ಇದರಿಂದ ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿವೆ. ಭಯ-ಭೀತರಾದ ಜನ ಮನೆಯಿಂದ ಓಡಿ ಬಂದು ರಸ್ತೆಯಲ್ಲಿ ನಿಂತಿದ್ದರು. ಭೂಮಿ ಕೇವಲ 3-4 ಸೆಕೆಂಡ್ ಕಂಪಿಸಿದೆ. ಆದರೆ, ಯಾವುದೇ ವಸ್ತುಗಳು ಬಿದ್ದಿಲ್ಲ,‌ ಮನೆಗಳ ಗೋಡೆ ಬಿರುಕು ಬಿಟ್ಟಿಲ್ಲ. ಕಂಪನದ ಅನುಭವ ಶಿರಾಳಕೊಪ್ಪ ಪಟ್ಟಣದ ವ್ಯಾಪ್ತಿಯಲ್ಲಿ ಮಾತ್ರ ನಡೆದಿದೆ. ಪಕ್ಕದ ಗ್ರಾಮಗಳಲ್ಲಿ ಯಾವುದೇ ಕಂಪನದ ಅನುಭವವಾಗಿಲ್ಲ.

ಈ ಕುರಿತು ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ ಶಿಕಾರಿಪುರ ತಹಶಿಲ್ದಾರ್ ಕವಿರಾಜ್ ಅವರು, ನಸುಕಿನ ಜಾವ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ಶಿರಾಳೊಪ್ಪ ಪಟ್ಟಣದವರು ತಿಳಿಸಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಮನೆಗಳ ಗೋಡೆ ಹಾಗೂ ಮನೆ ಒಳಗಿನ ಪಾತ್ರೆ, ಲೋಟ ಯಾವುದೂ ಬಿದ್ದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲಿಂದ ರಾಜ್ಯ ಹವಾಮಾನ ಇಲಾಖೆಗೆ ಸಂಪರ್ಕ ಮಾಡಲಾಗಿದೆ. ವರದಿ ಬಂದ ನಂತರ ಮಾಹಿತಿ ನೀಡಲಾಗುವುದು ಎಂದರು.

(ಓದಿ: ಭೂಕಂಪನದ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿ 17 ದಿನಗಳ ಬಳಿಕ ಮೃತ್ಯುಂಜಯನಾಗಿ ಬಂದ!)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.