ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ಬಿದ್ದು ಗಾಯಗೊಂಡಿದ್ದವರನ್ನು ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ತಾಲೂಕು ಗುಡ್ಡದ ಹರಕೆರೆ ಗ್ರಾಮದ ಬಳಿ ಡಿಯೋ ಸ್ಕೂಟರ್ನ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬರುತ್ತಿದ್ದವರು ಎದುರಿಗೆ ಬಂದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ. ಈ ವೇಳೆ ಸ್ಕೂಟರ್ ಹಿಂಬದಿ ಕುಳಿತಿದ್ದ ಮನ್ಸೂರ್ಗೆ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ.
ಇದೇ ಮಾರ್ಗವಾಗಿ ತೆರಳುತ್ತಿದ್ದ ಡಿವೈಎಸ್ಪಿ ಉಮೇಶ್ ಈಶ್ವರ ನಾಯಕ್ ಅವರು ತಕ್ಷಣ ತಮ್ಮ ಜೀಪ್ ನಿಲ್ಲಿಸಿ, ಗಾಯಾಳು ಮನ್ಸೂರ್ನನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು, ಈ ಒಂದು ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.