ETV Bharat / state

ಸೋನಿಯಾ, ಸ್ಟಾಲಿನ್​ ಅವರನ್ನು ತೃಪ್ತಿಪಡಿಸಲು ಕದ್ದುಮುಚ್ಚಿ ಕಾವೇರಿ ನೀರು ಬಿಟ್ಟಿದ್ದಾರೆ: ಈಶ್ವರಪ್ಪ - ​ ಈಟಿವಿ ಭಾರತ್​ ಕರ್ನಾಟಕ

ಕಾವೇರಿ ನೀರಿನ ಸಮಸ್ಯೆ ಉಲ್ಬಣ ಆಗಲು ಡಿಸಿಎಂ ಡಿ.ಕೆ ಶಿವಕುಮಾರ್ ಕಾರಣ ಎಂದು ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
author img

By ETV Bharat Karnataka Team

Published : Sep 22, 2023, 4:15 PM IST

ಕಾವೇರಿ ನೀರಿನ ಸಮಸ್ಯೆ ಉಲ್ಬಣ ಆಗಲು ಡಿ.ಕೆ ಶಿವಕುಮಾರ್ ಕಾರಣ

ಶಿವಮೊಗ್ಗ: ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕಿ ಸೋನಿಯಾ ಗಾಂಧಿ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್​ ಅವರನ್ನು ತೃಪ್ತಿಪಡಿಸಲು ಕದ್ದುಮುಚ್ಚಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಕಾವೇರಿ ನೀರು ಸಮಸ್ಯೆ ಉಲ್ಬಣಿಸಲು ಡಿಸಿಎಂ ಡಿ.ಕೆ ಶಿವಕುಮಾರ್​ ನೇರ ಕಾರಣ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆ ಇಷ್ಟೊಂದು ಉಲ್ಬಣ ಆಗಲು ಡಿ.ಕೆ.ಶಿವಕುಮಾರ್ ಕಾರಣ. ಸ್ಟಾಲಿನ್, ಸೋನಿಯಾ ಹಾಗೂ 'ಇಂಡಿಯಾ' ಗ್ರೂಪಿನ​ ತೃಪ್ತಿಪಡಿಸಲು, ಯಾರಿಗೂ ಕೇಳದೆ ಕದ್ದುಮುಚ್ಚಿ ನೀರು ಬಿಟ್ಟಿದ್ದಾರೆ. ನೀರು ಬಿಡುವುದಕ್ಕಿಂತ ಮುಂಚೆ ಏನ್ ಮಾಡಿದ್ರು?, ನೀರು ಬಿಟ್ಟ‌ಮೇಲೆ ಏನ್ ಮಾಡಿದ್ರು ಅನ್ನೂದು ಮುಖ್ಯ. ನೀರು ಬಿಡುವ ಮುನ್ನಾ ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಪರಿಣಿತರ ಅಭಿಪ್ರಾಯ ಪಡೆಯದೆ, ತಾವು ಒಳ್ಳೆಯರಾಗಲು ಹೋಗಿ ಮುಠ್ಠಾಳತನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ವಸ್ತು ಸ್ಥಿತಿ ಗಮನಿಸದೆ ನೀರು ಬಿಟ್ಟರು. ನಂತರ ಸಿಎಂ ಸಿದ್ದರಾಮಯ್ಯ ಕರೆದುಕೊಂಡು ದೆಹಲಿಗೆ ಹೋದರು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸರ್ವಪಕ್ಷದವರು ಛೀಮಾರಿ ಹಾಕಿದರು. ದೆಹಲಿಯಲ್ಲಿ ನಡೆಸಿದ ಎಂಪಿಗಳ ಸಭೆಯಲ್ಲೂ ಸಹ ಬೈಯಿಸಿಕೊಂಡರು. ಈಗ ಮೈಸೂರು, ಮಂಡ್ಯ ರೈತರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಶಾಂತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಬಂಗಾರಪ್ಪನವರು ಸಿಎಂ ಆಗಿದ್ದಾಗ ಕಾವೇರಿ ನೀರು ಬಿಡಲಿಲ್ಲ. ಅಂದು ಕರ್ನಾಟಕ ಒಂದಾಗಿತ್ತು. ಈಗ ಒಬ್ಬ ವ್ಯಕ್ತಿ ಸ್ಟಾಲಿನ್, ಸೋನಿಯಾ ಗಾಂಧಿ ಅವರಿಗೆ ಒಳ್ಳೆಯರಾಗಲು ಹೋಗಿ ಕದ್ದುಮುಚ್ಚಿ ನೀರು ಬಿಟ್ಟು ಈಗ ಎಲ್ಲರನ್ನು ಕರೆಯುತ್ತಿದ್ದಾರೆ. ನಮ್ಮ‌ ರಾಜ್ಯದಲ್ಲಿ ನೀರಾವರಿ ತಜ್ಞರು ಸಾಕಷ್ಟಿದ್ದಾರೆ. ನೀರು ಬಿಟ್ಟ ಹೊಣೆ ಹೊತ್ತು ತಮ್ಮ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ತಕ್ಷಣ ಸಿಎಂ ಸಭೆ ಕರೆಯಬೇಕು: ಇದೀಗ ಏನ್ ಮಾಡಬೇಕೆಂದು ರಾಜ್ಯದ ಸಿಎಂ ಮುಂದೆ ಬರಬೇಕು. ರಾಜ್ಯದ ಜನರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಕಾವೇರಿ ನೀರು ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ ಸ್ವತ್ತಲ್ಲ. ಕರ್ನಾಟಕ ರಾಜ್ಯದ ಸ್ವತ್ತು. ಇದರಿಂದ ಶಿವಕುಮಾರ್ ರಾಜೀನಾಮೆ ಪಡೆದು, ಎಲ್ಲರ ಅಭಿಪ್ರಾಯ ಪಡೆದುಕೊಂಡು ಮುಂದಿನ ತೀರ್ಮಾನ ಮಾಡಬೇಕೆಂದು ಹೇಳಿದರು.

ಸುಪ್ರೀಂ ಕೋರ್ಟ್ ಹೇಳಿದೆ ಪ್ರತಿ ನಿತ್ಯ 5 ಸಾವಿರ ಟಿಎಂಸಿ ನೀರು ಬಿಡಬೇಕು ಎಂದು ಹೇಳಿದೆ. ಈಗ ಇರುವುದೇ 89 ಟಿಎಂಸಿ ನೀರಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸುವುದು ಎಷ್ಟು ಸರಿ?. ಮುಂದಿನ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ. ಈಗ ಸಿಎಂ ರಾಜ್ಯದ ಎಲ್ಲಾ ಜಲಾಶಯಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸದೆ ಹೋದ್ರೆ ಮುಂದೆ ಅಪಾಯ ಕಾದಿದೆ ಎಂದರು.

ಸರ್ಕಾರದಲ್ಲಿ ಗುಂಪುಗಾರಿಕೆ ಮಿತಿಮೀರಿದೆ: ಕಾಂಗ್ರೆಸ್ ಸರ್ಕಾರದಲ್ಲಿ ಗುಂಪುಗಾರಿಕೆ ಮುಂದುವರಿದಿದೆ. ಸಚಿವರಾದ ರಾಜಣ್ಣ ಮೂರು ಡಿಸಿಎಂ ಬೇಕು ಎಂದು ಹೇಳುತ್ತಾರೆ. ಅದಕ್ಕೆ ಪರಮೇಶ್ವರ್ ಸರಿ ಅನ್ನುತ್ತಾರೆ. ಕಾಂಗ್ರೆಸ್ ಪಕ್ಷದ ಕೆಲಸ ಹಾಸ್ಯಾಸ್ಪದವಾಗಿದೆ. ಬಾಲಕೃಷ್ಣ ಇವರಿಗೆಲ್ಲ ಟಾಂಗ್ ನೀಡುವಂತೆ ಮಾತನಾಡಿದ್ದಾರೆ. ಕಾಂಗ್ರೆಸ್ ನ ಗ್ಯಾರಂಟಿಯಲ್ಲಿ ಮಳೆ ಇಲ್ಲ, ನೀರಿಲ್ಲ, ಕರೆಂಟ್ ಇಲ್ಲದ ಗ್ಯಾರಂಟಿ ಕೊಟ್ಟು ಎಲ್ಲವು ಇಲ್ಲವಾಗಿದೆ ಎಂದು ಕಿಡಿಕಾರಿದರು.

ನನ್ನ ಸೆಟಲ್​ಮೆಂಟ್​ ಮಾಡಲು ಡಿಕೆಶಿ ಯಾರು? : ಡಿಕೆ ಶಿವಕುಮಾರ್​ ಜೈಲಿ​ನಲ್ಲಿದ್ದಾಗ ನಾನು ಡಿಸಿಎಂ ಆಗಿದ್ದೆ. ಈಗ ಅವರು ಬೇಲ್ ಮೇಲೆ ಇದ್ದಾರೆ. ನಾನು ಕೆಂಪು ಕೋಟೆಯ ಮೇಲೆ ಒಂದಲ್ಲ ಒಂದು ದಿನ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿದ್ದೆ. ಆದರೆ, ನಾವು ನಮ್ಮ ತ್ರಿವರ್ಣ ಧ್ವಜಕ್ಕೆ ಗೌರವ ನೀಡೇ ನೀಡುತ್ತೇವೆ. ರಾಜಕೀಯ ನಿಂತ ನೀರಲ್ಲ. ನೀವು ನಿನ್ನೆ ಮೊನ್ನೆ ಡಿಸಿಎಂ ಆಗಿದ್ದವರು. ನಾನು ಹಿಂದೆಯೇ ಡಿಸಿಎಂ ಆಗಿದ್ದವನು. ನನಗೆ ಸೆಟಲ್​ಮೆಂಟ್ ಮಾಡಲು ಬರುತ್ತದೆ. ಆದರೆ ನಾನು ಆ ಪದ ಬಳಸಲ್ಲ ಎಂದರು.

ಜೆಡಿಎಸ್ ಮೈತ್ರಿ ವಿಚಾರ: ದೇಶದಲ್ಲಿ ಕಾಂಗ್ರೆಸ್​ಯೇತರ ಸರ್ಕಾರ ಬರಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮಾತುಕತೆ ನಡೆಸಿದ್ದಾರೆ. ಈಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್​.ಡಿ ರೇವಣ್ಣ ದೆಹಲಿಗೆ ಹೋಗಿದ್ದು, ಇಂದು ಮಾತುಕತೆ ನಡೆಸಬಹುದು ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ : ಇಂದು ಸಂಜೆ ಮಹತ್ವದ ಸಚಿವ ಸಂಪುಟ ಸಭೆ: ಕಾವೇರಿ ಬಿಕ್ಕಟ್ಟು ಚರ್ಚೆ, ಮುಂದಿನ ನಡೆ ಬಗ್ಗೆ ತೀರ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.