ಶಿವಮೊಗ್ಗ: ನಗರದ ಹೊರವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ತ್ಯಾಜ್ಯವನ್ನು ಬಯಲಲ್ಲೇ ಹಾಕಲಾಗುತ್ತಿದೆ.
ನಗರದ ಹೊರವಲಯದ ಪುರಲೆ ಬಡಾವಣೆಯ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೇಸ್ಟ್ಗಳನ್ನು ಆಸ್ಪತ್ರೆಯ ಅರ್ಧ ಕಿ.ಮೀ ದೂರದಲ್ಲಿ ಹಾಕಲಾಗುತ್ತಿದೆ. ಇದನ್ನು ಬಯಲಲ್ಲಿ ಹಾಕದೆ, ವೇಸ್ಟ್ ಮ್ಯಾನೇಜ್ಮೆಂಟ್ಗೆ ನೀಡಬೇಕು. ಆದರೆ ಅದನ್ನು ಮಾಡದೆ ಬಯಲಲ್ಲೇ ಹಾಕಿ ಸುಡಲಾಗುತ್ತಿದೆ. ಇದರಿಂದ ಅಕ್ಕದ ಬಡಾವಣೆಯಲ್ಲಿ ವಿಷದ ಗಾಳಿ ಹರಡುತ್ತಿದೆ. ಅಲ್ಲದೆ ಪಕ್ಕದಲ್ಲೇ ಕೆರೆ ಇರುವುದರಿಂದ ಇದು ಇನ್ನಷ್ಟು ಅಪಾಯಕ್ಕೆ ಕಾರಣವಾಗಿದೆ.
ಹಾಗಾಗಿ ತಕ್ಷಣ ಸಂಬಂಧ ಪಟ್ಟ ಇಲಾಖೆಯವರು ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.