ETV Bharat / state

ಶಿವಮೊಗ್ಗದಲ್ಲಿ ಡೀಸೆಲ್​ ಕಳ್ಳತನ: ಖದೀಮ ಈಗ ಪೊಲೀಸರ ಅತಿಥಿ - Shivamogga Crime News

ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯಿಂದ ಡೀಸೆಲ್​ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಹಿಡಿದ ಮಾಲೀಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗದಲ್ಲಿ ಡೀಸೆಲ್​ ಕಳ್ಳತನ
ಶಿವಮೊಗ್ಗದಲ್ಲಿ ಡೀಸೆಲ್​ ಕಳ್ಳತನ
author img

By

Published : Jan 6, 2021, 5:22 PM IST

Updated : Jan 6, 2021, 7:33 PM IST

ಶಿವಮೊಗ್ಗ: ಡೀಸೆಲ್​ ಕಳ್ಳತನಕ್ಕೆ ಮುಂದಾಗಿದ್ದ ಲಾರಿ ಮೆಕ್ಯಾನಿಕ್​ ಪೊಲೀಸರ ಅತಿಥಿಯಾಗಿದ್ದಾನೆ.

ಮಹಾರಾಷ್ಟ್ರ ಮೂಲದ ಸಲ್ಮಾನ್ (35) ಎಂಬಾತ ಶಿವಮೊಗ್ಗದ ಚಿಕ್ಕಲ್ ಬಡಾವಣೆಯಲ್ಲಿ ವಾಸವಾಗಿದ್ದ. ಇನ್ನು ಜಿಲ್ಲೆಯ ಮಂಡ್ಲಿ ಬೈಪಾಸ್ ರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಆಗ ಲಾರಿ ರಿಪೇರಿಗೆಂದು ತೆರಳುತ್ತಿದ್ದ ಸಲ್ಮಾನ್​ ಡೀಸೆಲ್​ ಪ್ರಮಾಣವನ್ನು ಗಮನಿಸುತ್ತಿದ್ದ. ಅಷ್ಟೇ ಅಲ್ಲದೆ, ಬೆಳಗ್ಗೆ ಟ್ರಿಪ್​ ಹೋಗಬೇಕಾದರೆ ರಾತ್ರಿಯೇ ಡೀಸೆಲ್​ ತುಂಬಿಸಿ ಟ್ಯಾಂಕ್​ ಫುಲ್​ ಮಾಡಿರುತ್ತಾರೆ ಮಾಲೀಕರು.

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇವೆಲ್ಲವನ್ನೂ ಗಮನಿಸುತ್ತಿದ್ದ ಸಲ್ಮಾನ್​ ಮೊದಲು ಲಾರಿಯಿಂದ ಡೀಸೆಲ್​ ಕಳವು ಮಾಡಿ ಬಳಿಕ ಅದನ್ನು ಬೇರೊಂದು ಕಡೆ ಯಾರಿಗೂ ತಿಳಿಯದಂತೆ ಅಡಗಿಸಿಡುತ್ತಿದ್ದ. ನಂತರ ಅದನ್ನು ಬೈಕ್​ನಲ್ಲಿ ಬಂದು ತೆಗೆದುಕೊಂಡು ಹೋಗುತ್ತಿದ್ದ. ತಮ್ಮ ಲಾರಿಗಳಲ್ಲಿ ಡೀಸೆಲ್​ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಿದ ಚಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದಾದ ಬಳಿಕ ಸಿಸಿ ಕ್ಯಾಮೆರಾ ಪರಿಶೀಲಿಸಿದ ಲಾರಿ ಮಾಲೀಕರು ಸಲ್ಮಾನ್​ನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಬಳಿಕ ತುಂಗಾನಗರ ಪಿಎಸ್ಐ ತಿರುಮಲೇಶ್ ಹಾಗೂ ತಂಡ ಆತನನ್ನು ಬಂಧಿಸಿದೆ.

Last Updated : Jan 6, 2021, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.