ಶಿವಮೊಗ್ಗ: ಕುಟುಂಬದಲ್ಲಿ ಯಾರಾದರೂ ನಿಧನರಾದರೆ ಅವರ ಚಿತೆಗೆ ಪುತ್ರರು ಅಗ್ನಿ ಸ್ಪರ್ಶ ಮಾಡುವುದು ಭಾರತೀಯ ಸಂಪ್ರದಾಯ. ಪುತ್ರಿಯರು ಅಗ್ನಿ ಸ್ಪರ್ಶ ಮಾಡುವುದು ಬಹಳ ಅಪರೂಪ. ಆದರೆ, ನಗರದಲ್ಲಿ ಮೂವರು ಪುತ್ರಿಯರು ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.
ನಗರದ ಮೈಸೂರು ಕಾಗದ ಕಾರ್ಖಾನೆಯ ಎಂಪಿಎಂನ ನಿವೃತ್ತ ನೌಕರು, ನಿಧಿಗೆ ನಿವಾಸಿ ಜಗನ್ನಾಥ್ ಎಂಬುವವರು ಹಾವು ಕಡಿತದಿಂದ ನಿಧನರಾಗಿದ್ದರು. ಇವರ ಅಂತ್ಯಕ್ರಿಯೆ ಶಿವಮೊಗ್ಗ ರೋಟರಿ ಚಿತಾಗಾರದಲ್ಲಿ ನಡೆಯಿತು.
ಇವರಿಗೆ ಮೂವರು ಪುತ್ರಿಯರಿದ್ದು, ತಮ್ಮ ತಂದೆಗೆ ಒಟ್ಟಿಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ಗೌರವ ಸಲ್ಲಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಎಚ್ಚರ.. ಎಚ್ಚರ.. ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ!