ಶಿವಮೊಗ್ಗ: ಕೋವಿಡ್ನಿಂದಾಗಿ 1 ರಿಂದ 9 ನೇ ತರಗತಿಯ ಮಕ್ಕಳಿಗೆ ಶಾಲೆ ರಜೆ ನೀಡಿದೆ. ಆದರೂ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ಹುಟ್ಟುಹಬ್ಬಕ್ಕೆ ಅವರದ್ದೇ ಒಡೆತನದ ಅಕ್ಷರ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದೆ. ಈ ಮೂಲಕ ಜಿಲ್ಲಾಡಳಿತ ಕೋವಿಡ್ ನಿಯಮವನ್ನೆ ಬ್ರೇಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಹೌದು ನಿನ್ನೆ ಶಾಸಕರಾದ ಕೆ.ಬಿ.ಅಶೋಕ ನಾಯ್ಕರ ಹುಟ್ಟುಹಬ್ಬ. ಇದರಿಂದ ಅಶೋಕ ನಾಯ್ಕ ಒಡೆತನದ ಶಿವಮೊಗ್ಗದ ಜೆಎನ್ ಸಿಸಿ ಇಂಜಿನಿಯರಿಂಗ್ ಕಾಲೇಜ್ ಮುಂಭಾಗದ ಅಕ್ಷರ ಶಾಲೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದೆ. ಅದು ಫೌಂಡರ್ಸ್ ಡೇ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಸಲಾಗಿದೆ.
ಓದಿ: ಮಾಟಮಂತ್ರ - ಮೂಢನಂಬಿಕೆ: ಸಮುದಾಯ ಸಭೆಯಲ್ಲಿ ಉರುಳಿ ಬಿದ್ದವು ತಂದೆ, ಇಬ್ಬರು ಮಕ್ಕಳ ಹೆಣ!
ಕಾರ್ಯಕ್ರಮಕ್ಕೆ ಪೋಷಕರು ಹಾಗೂ ಮಕ್ಕಳನ್ನು ಕರೆಯಿಸಲಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳು ಡ್ಯಾನ್ಸ್ ಮಾಡಿದ್ದಾರೆ. ಎಲ್ಲರೂ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ. ಈ ಕುರಿತು ಜಿಲ್ಲಾಡಳಿತ ಏನ್ ಕ್ರಮ ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಮಾಟಮಂತ್ರ - ಮೂಢನಂಬಿಕೆ: ಸಮುದಾಯ ಸಭೆಯಲ್ಲಿ ಉರುಳಿ ಬಿದ್ದವು ತಂದೆ, ಇಬ್ಬರು ಮಕ್ಕಳ ಹೆಣ!